ವಿಶ್ವಸಂಸ್ಥೆ 75 ನೇ ಸಾಮಾನ್ಯ ಅಧಿವೇಶನ ಆರಂಭ

Share on facebook
Share on twitter
Share on linkedin
Share on whatsapp
Share on email

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ 75 ನೇ ಸಾಮಾನ್ಯ ಅಧಿವೇಶನಕ್ಕೆ ನೂತನ ಅಧ್ಯಕ್ಷ ವೋಲ್ಕಾನ್ ಬೊಜ್ಕಿರ್ ಉದ್ಘಾಟಿಸಿದ್ದಾರೆ.
ತಮ್ಮ ಆರಂಭಿಕ ಭಾಷಣದಲ್ಲಿ ಬೊಜ್ಕಿರ್ ಅವರು, ಬಹುಪಕ್ಷೀಯತೆಯನ್ನು ಎತ್ತಿ ಹಿಡಿಯುವಂತೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಕೆರೆ ನೀಡಿದ್ದಾರೆ.


‘ನಾವು ಕೆಲಸ ಮಾಡುತ್ತಿರುವ ಸನ್ನಿವೇಶ, ಬಹುಪಕ್ಷೀಯ ವ್ಯವಸ್ಥೆಯ ಅವಶ್ಯಕತೆಯನ್ನು ನೆನಪಿಸಲು ಸಹಾಯ ಮಾಡುತ್ತದೆ. ಅಲ್ಲದೆ, ನಮ್ಮ ಸಾಮೂಹಿಕ ಸವಾಲುಗಳನ್ನು ಎದುರಿಸಲು ವಿಶ್ವಸಂಸ್ಥೆ ಸನ್ನದು ಬಳಸಿಕೊಳ್ಳಲು ನಮಗೆಲ್ಲರಿಗೂ ಪ್ರೇರಣೆ ನೀಡುತ್ತದೆ.’ ಎಂದು ಅವರು ಕೊವಿಡ್‍ ಸಾಂಕ್ರಾಮಿಕವನ್ನು ಉಲ್ಲೇಖಿಸಿ ಹೇಳಿದರು.

ಆರೋಗ್ಯ ಪರಿಸ್ಥಿತಿಗಳು ಇದೇ ರೀತಿ ಇರುವವರೆಗೆ ಸಾಮಾನ್ಯ ಸಭೆಯ ವೈಯಕ್ತಿಕ ಸಭೆಗಳನ್ನು ಪ್ರತಿನಿಧಿಗಳು ಮತ್ತು ವಿಶ್ವಸಂಸ್ಥೆ ಸಿಬ್ಬಂದಿಯ ಆರೋಗ್ಯ ಸುರಕ್ಷತೆಯ ಕ್ರಮಗಳೊಂದಿಗೆ. ನಡೆಸಲು ಉದ್ದೇಶಿಸಲಾಗಿದೆ ಎಂದು ಬೊಜ್ಕಿರ್ ಹೇಳಿದರು,
74 ನೇ ಅಧಿವೇಶನದ ಮುಕ್ತಾಯದಲ್ಲಿ ಮಂಗಳವಾರ ಬೊಜ್ಕಿರ್ ಪ್ರಮಾಣವಚನ ಸ್ವೀಕರಿಸಿದರು.


ವಿಶ್ವಸಂಸ್ಥೆ ಮಹಾ ನಿರ್ದೇಶಕ ಜನರಲ್ ಆಂಟೋನಿಯೊ ಗುಟೆರೆಸ್ ತಮ್ಮ ಆರಂಭಿಕ ನುಡಿಗಳಲ್ಲಿ, ಬೊಜ್ಕಿರ್ ಅವರ ಹೊಸ ಪಾತ್ರಕ್ಕೆ ಆತ್ಮೀಯವಾಗಿ ಅಭಿನಂದಿಸಿ, ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.


ಈ ವರ್ಷ ವಿಶ್ವಸಂಸ್ಥೆ ಇತಿಹಾಸ ಅತ್ಯಂತ ಪ್ರಮುಖ ವರ್ಷವಾಗಲಿದೆ. ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವ ಮೂಲಕ ಮತ್ತು ಚಿಕಿತ್ಸೆ ಮತ್ತು ಲಸಿಕೆಗಳ ಅಭಿವೃದ್ಧಿ ಮತ್ತು ಸಮನಾದ ಪೂರೈಕೆಯನ್ನು ಬೆಂಬಲಿಸುವ ಮೂಲಕ ವಿಶ್ವಸಂಸ್ಥೆ ಕೊವಿಡ್‍-19 ನ ನಿರ್ವಹಣೆಯನ್ನು ಮುಂದುವರಿಸಬೇಕು ಎಂದು ಅವರು ಹೇಳಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter