ಕೋವಿಡ್‌ ರೋಗಿಗಳ ಶೀಘ್ರ ಚೇತರಿಕೆಗೆ ಯೋಗ ಬಳಕೆ ಕುರಿತು ಅಧ್ಯಯನ

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಕೋವಿಡ್‌ -19 ರೋಗಿಗಳ ಶೀಘ್ರ ಚೇತರಿಕೆಗೆ ಯೋಗದ ಲಾಭಗಳ ಕುರಿತು ಕೇಂದ್ರ ಯೋಗ ಮತ್ತು ನ್ಯಾಚುರೋಪತಿ ಸಂಶೋಧನಾ ಪರಿಷತ್ತು (ಸಿಸಿಆರ್‌ವೈಎನ್‌) ಸಂಶೋಧನೆ ನಡೆಸುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್‌ ರಾಜ್ಯಸಭೆಗೆ ಶುಕ್ರವಾರ ಲಿಖಿತ ಮಾಹಿತಿ ನೀಡಿದ್ದಾರೆ.


ದೆಹಲಿಯ ಏಮ್ಸ್‌ , ರಾಜೀವ್‌ ಗಾಂಧಿ ಆಸ್ಪತ್ರೆ, ಆರ್‌ಎಂಎಲ್‌ ಆಸ್ಪತ್ರೆ ಮತ್ತು ರಿಷಿಕೇಷದ ಏಮ್ಸ್‌ ಆಸ್ಪತ್ರೆಗಳ ಸಹಯೋಗದೊಂದಿಗೆ ಈ ಸಂಶೋಧನೆ ನಡೆಸಲಾಗುತ್ತಿದ್ದು, ಇದರಲ್ಲಿ ಕೋವಿಡ್‌ ರೋಗಿಗಳ ಸಮೀಕ್ಷೆ ಮಾಡಲಾಗುತ್ತಿದೆ ಎಂದಿದ್ದಾರೆ.


ಯೋಗವನ್ನು ಪ್ರಸಿದ್ಧಿಗೊಳಿಸಲು, ಆಯುಷ್‌ ಸಚಿವಾಲಯ ಯೋಗ ಪೋರ್ಟಲ್‌ ಸೇರಿದಂತೆ ಯೂಟ್ಯೂಬ್‌, ಫೇಸ್‌ಬುಕ್‌, ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಯೋಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಬಿಡುಗಡೆಗೊಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *