ಭಯೋತ್ಪಾದನೆ ಬೆದರಿಕೆ: ಪಾಕ್ ಪ್ರವಾಸ ಪುನರ್ವಿಮರ್ಶಿಸಲು ಮುಂದಾದ ಶ್ರೀಲಂಕಾ

Share on facebook
Share on twitter
Share on linkedin
Share on whatsapp
Share on email

ಕೊಲಂಬೊ: ತಮ್ಮ ಉದ್ದೇಶಿತ ಪಾಕಿಸ್ತಾನ ಪ್ರವಾಸದ ಏಕದಿನ ಹಾಗೂ ಟಿ-20 ತಂಡಗಳನ್ನು ಪ್ರಕಟಿಸಿದ ಹಲವು ಗಂಟೆಗಳ ಬೆನ್ನಲ್ಲೆ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಭಯೋತ್ಪಾದಕ ಬೆದರಿಕೆ ಇರುವ ಬಗ್ಗೆ ಪ್ರಧಾನ ಮಂತ್ರಿ ಕಚೇರಿಯಿಂದ ಎಚ್ಚರಿಕೆ ಬಂದಿದ್ದು, ತಮ್ಮ ಯೋಜನೆಯನ್ನು “ಮರು ಮೌಲ್ಯಮಾಪನ” ಮಾಡಬೇಕಾಗಿದೆ ಎಂದು ಸಲಹೆ ನೀಡಿದೆ.


“ರಾಷ್ಟ್ರೀಯ ತಂಡದ ಪಾಕಿಸ್ತಾನ ಪ್ರವಾಸಕ್ಕೆ ಮುಂಚಿತವಾಗಿ ಪಾಕಿಸ್ತಾನದ ಭದ್ರತಾ ಪರಿಸ್ಥಿತಿಯ ಮರುಮೌಲ್ಯಮಾಪನ” ನಡೆಸಲು ಶ್ರೀಲಂಕಾ ಕ್ರಿಕೆಟ್ ಇಂದು ಶ್ರೀಲಂಕಾ ಸರ್ಕಾರದ ನೆರವು ಕೋರಿದೆ. ಪ್ರಧಾನ ಮಂತ್ರಿ ಕಚೇರಿಯಿಂದ ಎಸ್‍ಎಲ್‍ಸಿ ಪಡೆದ ಎಚ್ಚರಿಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.”

ಶ್ರೀಲಂಕಾ ತಂಡಕ್ಕೆ ಭಯೋತ್ಪಾದಕ ಬೆದರಿಕೆಯ ಸಂಭವನೀಯ ಮಾಹಿತಿಯನ್ನು ಪಿಎಂಒ ಸ್ವೀಕರಿಸಿದೆ ಎಂದು ತೋರಿಸುತ್ತದೆ. ಆದ್ದರಿಂದ, ಈ ಪ್ರವಾಸವನ್ನು ಕೈಗೊಳ್ಳುವ ಮೊದಲು ಎಸ್‍ಎಲ್‍ಸಿಗೆ ತೀವ್ರ ಕಾಳಜಿ ವಹಿಸಲು ಮತ್ತು ಪರಿಸ್ಥಿತಿಯನ್ನು ‘ಮರು ಮೌಲ್ಯಮಾಪನ ಮಾಡಲು’ ಸೂಚಿಸಲಾಗಿದೆ” ಎಂದು ಎಸ್‍ಎಲ್‍ಸಿಯ ಅಧಿಕೃತ ವೆಬ್‍ಸೈಟ್‍ನಲ್ಲಿ ತಿಳಿಸಲಾಗಿದೆ.

ಪಾಕಿಸ್ತಾನ ಪ್ರವಾಸದ ತಂಡಗಳ ಪ್ರಕಟಣೆಗೂ ಎರಡು ದಿನಗಳ ಮೊದಲು, ನಿಯಮಿತ ನಾಯಕರಾದ ದಿಮುತ್ ಕರುಣರತ್ನ ಮತ್ತು ಲಸಿತ್ ಮಾಲಿಂಗ ಅವರು ಪಾಕ್ ಪ್ರವಾಸ ಮಾಡಲು ಇಷ್ಟವಿಲ್ಲದಿರುವ ಬಗ್ಗೆ ಶ್ರೀಲಂಕಾ ಕ್ರಿಕೆಟ್‍ಗೆ ಪತ್ರ ಬರೆದಿದ್ದರು. ಜತೆಗೆ, ಇತರೆ ಎಂಟು ಮೊದಲ ತಂಡದ ಆಟಗಾರರು ಇದೇ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.ಸೆ.27 ರಿಂದ ಅ.9ರವರೆಗೂ ಭಾರತ ತಂಡ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳ ಸರಣಿ ಆಡಲಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter