ಸಿದ್ದಾರೂಢರ ತಂಬೂರಿಗೆ 90 ವರ್ಷ

Share on facebook
Share on twitter
Share on linkedin
Share on whatsapp
Share on email

ಬೆಳಗಾಯಿತು ವಾರ್ತೆ

ಹುಬ್ಬಳ್ಳಿ: ಕಳೆದ 90 ವರ್ಷಗಳಿಂದ ಈ ತಂಬೂರಿಯನ್ನು ಒಂದೇ ಒಂದು ಬಾರಿಯೂ ನೆಲಕ್ಕೆ ತಾಗಿಸಿಲ್ಲ. ಇದನ್ನು ಸಾಧುವೊಬ್ಬರು ಹೆಗಲಿಗೆ ಹಾಕಿಕೊಂಡು ದಿನದ 24 ಗಂಟೆಯೂ ಓಂ ನಮಃ ಶಿವಾಯ ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತಿರುತ್ತಾರೆ.

ಹಾಗಂತ ಒಬ್ಬರೇ ಹಾಕಿಕೊಂಡಿರಲ್ಲ. ಸರತಿಯಂತೆ ಒಬ್ಬರು ಹೆಗಲಿಗೆ ಹಾಕಿಕೊಂಡು ಜಪಿಸುತ್ತಾರೆ. ಆದರೆ ಇದನ್ನು ಯಾವತ್ತೂ ನೆಲಕ್ಕೆ ಮಾತ್ರ ತಾಗಿಸಿಲ್ಲ. ಅಷ್ಟಕ್ಕೂ ಈ ವಿಶೇಷ ಹೊಂದಿರುವುದು ಉತ್ತರ ಕರ್ನಾಟಕದ ಪ್ರಮುಖ ಆದ್ಯಾತ್ಮಕ ಕೇಂದ್ರವಾಗಿರುವ ಸದ್ಗುರು ಸಿದ್ಧಾರೂಢ ಮಠದಲ್ಲಿ.


ಸಿದ್ಧಾರೂಢರು 1929 ರ ಆಗಸ್ಟ್ 21 ರಂದು ಇಹಲೋಕ ತ್ಯಜಿಸಿದರು. ಬಳಿಕ ಶ್ರೀಗಳ ಶಿಷ್ಯ ಗೋವಿಂದ ಸ್ವಾಮೀಜಿ ಸಿದ್ದಾರೋಢರ ಅಗಲಿದ 3ನೇ ದಿನಕ್ಕೆ (1929 ಆ.23ರ) ತಂಬೂರಿಯನ್ನು ತಂದು ಹೆಗಲಿಗೆ ಹಾಕಿಕೊಂಡು ಪ್ರಾರಂಭಿಸಿದರು. ಅಲ್ಲಿಂದ ಈವರೆಗೂ ಒಂದು ಕ್ಷಣ ಕೂಡಾ ನೆಲಕ್ಕೆ ತಾಗಿಸಿಲ್ಲ. ಇದನ್ನು ಒಬ್ಬ ಸಾಧು ನಿರಂತರವಾಗಿ ಹೆಗಲಿಗೆ ಹಾಕಿಕೊಂಡು ಓಂ ನಮಃ ಶಿವಾಯ ಜಪಿಸುತ್ತಲೇ ಇರುತ್ತಾರೆ.

ಎಲ್ಲಿಂದ ತಂದಿದ್ದು ತಂಬೂರಿ

ಸಿದ್ಧಾರೂಢ ಸ್ವಾಮಿಗಳು ಪಂಡರಪುರಕ್ಕೆ ಹೋಗಿದ್ದರಂತೆ. ಆಗ ಬರುವಾಗ ಈ ತಂಬೂರಿಯನ್ನು ತಂದಿದ್ದಂತೆ. ನಂತರ ಸಿದ್ಧಾರೂಢರು ಇದ್ದಾಗ ಮಠದಲ್ಲಿ ನಿರಂತರವಾಗಿ ಓಂ ನಮಃ ಶಿವಾಯ ಜಪ ಮಾಡುತ್ತಿದ್ದರಂತೆ.
ಬಳಿಕ ಅವರು ಇಹಲೋಕ ತ್ಯಜಿಸಿದ ಮೇಲೆ ಸಿದ್ಧಾರೂಢರ ಅತ್ಯಂತ ಪ್ರಿಯವಾದ ಪಂಚಾಕ್ಷರಿ ಮಂತ್ರ ನಿರಂತರವಾಗಿ ನಡೆಯುತ್ತಿರಲಿ ಎಂಬ ಉದ್ದೇಶದಿಂದ ಅವರ ಶಿಷ್ಯ ಗೋವಿಂದ ಸ್ವಾಮಿ ಹೆಗಲಿಗೆ ಹಾಕಿಕೊಂಡು ಓಂ ನಮಃ ಶಿವಾಯ ಎಂದು ಜಪ ಮಾಡಲು ಶುರು ಮಾಡಿದರು.


ಆಗ ಸಿದ್ಧಾರೂಢರ ಕೆಲ ಶಿಷ್ಯರು ತಾವೇ ಸರತಿಯಂತೆ ಇದನ್ನು ನುಡಿಸುತ್ತಾ ಪಂಚಾಕ್ಷರಿ ಮಂತ್ರ ಜಪಿಸುತ್ತಿದ್ದರು. ಇದೀಗ ಮಠದಲ್ಲಿ ಇದನ್ನು ಜಪಿಸುತ್ತಿದ್ದಕ್ಕಾಗಿಯೇ 26 ಜನ ಸಾಧುಗಳಿದ್ದಾರೆ. ಅವರು ಸಿದ್ಧಾರೂಢರ ಪೂಜೆ, ಅಭಿಷೇಕ ಸೇರಿದಂತೆ ಮತ್ತೆ `ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುವುದು.

ಇದರೊಂದಿಗೆ ಸರತಿಯಂತೆ ತಂಬೂರಿಯನ್ನು ಹೊತ್ತು ಪಂಚಾಕ್ಷರಿ ಜಪಿಸುತ್ತಾ ಇರುವುದು. ಇದೇ ಅವರ ಕೆಲಸ. ಪ್ರತಿ ಸಾಧುವೂ ಪ್ರತಿದಿನ 1 ಗಂಟೆ ತಂಬೂರಿ ಹೊತ್ತು ಓಂ ನಮಃ ಶಿವಾಯ ಜಪಿಸುತ್ತಾರೆ.

ಒಂದು ವೇಳೆ ತಂಬೂರಿಗೆ ಕಟ್ಟಿರುವ ಹಗ್ಗವೇನಾದರೂ ಹಳೆದಾಗಿದ್ರೆ, ಅದನ್ನು ಬದಲಿಸುವಾಗಲೂ ಇನ್ನೊಬ್ಬರು ಎತ್ತಿಹಿಡಿದು ಹಗ್ಗ ಬದಲಿಸುತ್ತಾರೆಯೇ ಹೊರತು ಒಂದೇ ಒಂದು ಕ್ಷಣ ಕೂಡ ತಂಬೂರಿಯನ್ನು ನೆಲಕ್ಕೆ ತಾಗಿಸಿಲ್ಲ. ಜತೆಗೆ ಓಂ ನಮಃ ಶಿವಾಯ ಅಂತ ಅನ್ನುವುದನ್ನೂ ಬಿಟ್ಟಿಲ್ಲ.

ಅನ್ನದಾಸೋಹ
ಮಠದಲ್ಲಿ ಬೆಳಗ್ಗೆ 7
30 ರಿಂದ ಬೆಳಗ್ಗೆ 11.30 ರವರೆಗೆ ಹಾಗೂ 12
30 ರಿಂದ ರಾತ್ರಿ 10.30 ರವರೆಗೆ ಅನ್ನದಾಸೋಹ ನಡೆಯುತ್ತದೆ. ಪ್ರತಿನಿತ್ಯ ಸಾವಿರಾರು ಜನರು ಅನ್ನಪ್ರಸಾದ ಸ್ವೀಕರಿಸುತ್ತಾ?ರೆ. ಮಠದಲ್ಲಿ ಸದಾಕಾಲ ಶಿವನ ಜಪ, ಜ್ಞಾನ ಪ್ರಸರಣ ಹಾಗೂ ಅನ್ನದಾಸೋಹ ನಡೆಯಬೇಕು ಎಂದು ಅಪ್ಪಣೆ ಕೊಟ್ಟಿದ್ದರಿಂದ ಅದನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂಬುದು ಮಠದ ಆಡಳಿತ ಮಂಡಳಿ ಅಭಿಪ್ರಾಯ.

ಸಿದ್ದಾರೋಢರ ಜಾತ್ರೆ:

ಆರೂಢರ ಮಠದಲ್ಲಿ ಶಿವರಾತ್ರಿ ಬಹುವಿಶೇಷ. ಶಿವರಾತ್ರಿಯ ಉಪವಾಸದ ಮರುದಿನ ಇಲ್ಲಿ ಆರೂಢರ ರಥೋತ್ಸವ ನಡೆಯುತ್ತದೆ. ಗೋವಾ, ಮಹಾರಾಷ್ಟ್ರ, ತಮಿಳುನಾಡು, ಆಂದ್ರಪ್ರದೇಶದ ರಾಜ್ಯಗಳಿಂದ ಮಾತ್ರವಲ್ಲದೇ, ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಾಗರದಂತೆ ಭಕ್ತ ಸಮೂಹ ಹರಿದು ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷ. ಇನ್ನು ಸಿದ್ಧಾ?ರೂಢರ ಪುಣ್ಯತಿಥಿ ಅಂಗವಾಗಿ ಶ್ರಾವಣದಲ್ಲಿ ನೂಲಹುಣ್ಣಿಮೆಯ ಮರುದಿನ ಜಲತೆಪೆÇ್ಪೀತ್ಸವ ನಡೆಯುವುದು ಇಲ್ಲಿನ ಮತ್ತೊಂದು ವಿಶೇಷ.


ಆರೂಢ ಜ್ಯೋತಿ
ಸಿದ್ಧಾರೂಢರ ಕಾಲದಿಂದಲೂ ಬೆಳಗುತ್ತಿರುವ ನಂದಾದೀಪ ಇಲ್ಲಿದೆ. ಆರೂಢ ಜ್ಯೋತಿ ಎನ್ನಲಾಗುತ್ತೆ. ದೀಪ ಸ್ತಂಭವನ್ನು ಸ್ವಚ್ಛಗೊಳಿಸುವಾಗಲೂ ಇನ್ನೊಂದು ಬದಿಯಲ್ಲಿ ಬತ್ತಿ ಹಾಕಿ, ದೀಪ ಹೊತ್ತಿರುವಂತೆ ನೋಡಿಕೊಳ್ಳಲಾಗುತ್ತಿರುವುದು ವಿಶೇಷ. ಹೀಗಾಗಿ ಇದು 90 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಿಂದ ಬೆಳಗುತ್ತಿದೆ.


ಜ್ಞಾನ; ಆರೋಗ್ಯ ದಾಸೋಹ
ಇನ್ನು ನಿತ್ಯ ಪ್ರವಚನಗಳು ಇಲ್ಲಿ ಮಾಮೂಲಿ. ಆದ್ಯಾತ್ಮಿಕ ಶಿಬಿರಗಳನ್ನು ನಾಡಿನ ವಿವಿ
ಮಠಾಧೀಶರಿಂದ ನಡೆಸುವುದು ಇಲ್ಲಿನ ವಿಶೇಷ. ಇದಲ್ಲದೇ ಉಚಿತ ಆರೋಗ್ಯ ತಪಾಸಣೆ, ನೇತ್ರ ಹಾಗೂ ದಂತ ಚಿಕಿತ್ಸಾ ಶಿಬಿರಗಳನ್ನು ವಾರಕ್ಕೊಮ್ಮೆ ಮಠದ ವತಿಯಿಂದ ಮಾಡುತ್ತಾಭಕ್ತರ ಆರೋಗ್ಯಕ್ಕೂ ಮಹತ್ವ ನೀಡಲಾಗಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter