ಕೇಂದ್ರ ಸರ್ಕಾರದ ನೀತಿ ಖಂಡಿಸಿ : ರೈತರಿಂದ ಪ್ರತಿಭಟನೆ

Share on facebook
Share on twitter
Share on linkedin
Share on whatsapp
Share on email

          

ಬೆಳಗಾಯಿತು ವಾರ್ತೆ

ಮಾನವಿ :- ತುಂಗಾಭದ್ರ ಎಡದಂಡೆ ಕಾಲುವೆ ಜುಲೈ 23 ರಂದು ನೀರು ಹಾಯಿಸಿದರೂ ಕೂಡ ರಾಯಚೂರು ಜಿಲ್ಲೆಯ ಕೆಳಭಾಗದ ರೈತರಿಗೆ ಇಲ್ಲಿಯವರೆಗೂ ನೀರು ಬಂದಿಲ್ಲ ಈಗಾಗಲೇ ನಮ್ಮ ಭಾಗದ ರೈತರು ನೆರೆಹಾವಳಿಗೆ ತುತ್ತಾಗಿ ತೀವ್ರವಾಗಿ ಹಾಳಗಿದ್ದರೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸಚಿವರು ಈ ಕಡೆ ಗಮನ ಹರಿಸಿ ನಮ್ಮ ಭಾಗದ ರೈತರ ಕಣ್ಣಿರನ್ನು ಅಳಿಸುವ ಕಾರ್ಯವಾಗಬೇಕು ಎಂದು ತಾಲೂಕು ಕಾಂಗ್ರೆಸ್ ಪಕ್ಷದಿಂದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್ ಎಸ್ ಬೋಸರಾಜ ಹೇಳಿದರು.

ಪಟ್ಟಣದ ಅವರ ನಿವಾಸದಲ್ಲಿ ಭಾನುವಾರದಂದು ಪತ್ರಿಕಾಗೋಷ್ಠಿ ಕರೆದು ಮಾತಾನಾಡಿದ ಅವರು ಜುಲೈ 23 ರಂದು ತುಂಗಾಭದ್ರ ಎಡದಂಡೆಯ ಕಾಲುವೆಗೆ ನೀರು ಹಾಯಿಸಿ ಇಲ್ಲಿಗೆ 50 ದಿನಕ್ಕೂ ಹೆಚ್ಚು ಸಮಯ ಕಳೆದಿದೆ ಜಿಲ್ಲಾ ಆಡಳಿತದಿಂದ 144 ಸೆಕ್ಷನ್ ಕಾನೂನು ಜಾರಿಯಾಗಿದೆ.

 ರಾಜ್ಯದ ಆಡಳಿತ ನಿರ್ಲಕ್ಷ್ಯದಿಂದ, ಅಧಿಕಾರಿಗಳ ಧೋರಣೆಯಿಂದ ನಮ್ಮ ಭಾಗದ ರೈತರಿಗೆ ತುಂಬಾ ಅನ್ಯಾಯವಾಗುತ್ತಿದೆ ಇದರ ಕುರಿತಾಗಿ ಸಚಿವ ಶ್ರೀರಾಮುಲು ಹಾಗೂ ನೀರಾವರಿ ಇಲಾಖೆಯ ನಿರ್ದೇಶಕರು, ಮುನಿರಾಬಾದ್ ಡ್ಯಾಮ್ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಜೊತೆ ದೂರವಾಣಿಗಳ ಮುಖಾಂತರ ಚರ್ಚೆ ಮಾಡಿದರೂ ಕೂಡ ಯಾವುದೇ ಪ್ರಯೋಜನೆಯಾಗಿಲ್ಲ.

ಆದ್ದರಿಂದ ಕೆಳ ಭಾಗದ ರೈತರಿಗೆ ನೀರು ಹಾಗೂ ರಾಜ್ಯ ಕೇಂದ್ರ ಸರ್ಕಾರ ಧೋರಣೆಯನ್ನು ಖಂಡಿಸಿ ತಾಲೂಕು ಕಾಂಗ್ರೆಸ್ ಪಕ್ಷದಿಂದ ಸಾಂಕೇತಿಕ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನಮ್ಮ ಭಾಗದಲ್ಲಿ ಪ್ರತಿವರ್ಷ ಆಗುವ ಮಳೆಯಲ್ಲಿ ಈ ವರ್ಷ 45% ಪ್ರತಿಶತದಷ್ಟು ಕಡಿಮೆ ಮಳೆಯಾಗಿದೆ ಅದರಲ್ಲಿ ತುಂಗಾಭದ್ರ ನದಿ ಹಾಗೂ ಕೃಷ್ಣ ನದಿಯ ನೆರೆಹಾವಳಿಯಿಂದ ಜನರು ಮತ್ತು ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ಈ ಸಮಯದಲ್ಲಿ ಕಾಲುವೆಗೆ ನೀರು ಬಂದರೂ ಕೂಡ ನಮ್ಮ ಮೇಲ್ಬಾಗದ ಊರುಗಳಾದ ಕನಕಗಿರಿ ಹಾಗೂ ಗಂಗಾವತಿ ರೈತರು ಕಾಲುವೆಯ ನೀರನ್ನು ಅಕ್ರಮವಾಗಿ ಅಡ್ಡಗಟ್ಟಿ ನಮಗೆ ನೀರು ಬರದಂತೆ ತಡೆಯುತ್ತಿದ್ದಾರೆ ಇದಕ್ಕೆ ಅಲ್ಲಿನ ಶಾಸಕರು ಹಾಗೂ ನಾಯಕರು ಕಾರಣರಾಗಿದ್ದಾರೆ.

 ಇದನ್ನು ಅರಿತು ಆಡಳಿತ ಅಧಿಕಾರಿ ಹಾಗೂ ರಾಜ್ಯ ಸರ್ಕಾರದ ಸಚಿವರುಗಳು ಕೂಡಲೇ ಅಕ್ರಮವಾಗಿ ನೀರು ಹಾಯಿಸಿ ಕೊಳ್ಳುತ್ತಿರುವುದನ್ನು ರದ್ದು ಮಾಡಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳಬೇಕು ಎಂದು ಹೇಳಿದರು.

ನಮ್ಮ ಭಾಗದಲ್ಲಿ ನೆರೆಹಾವಳಿಯಿಂದ ಕನಿಷ್ಠ 25 ಸಾವಿರ ಹೆಕ್ಟೆರ್‍ನಷ್ಟು ಜಮೀನುಗಳಿಗೆ ಹಾನಿಯಾಗಿದೆ ಇದಕ್ಕೆ ರಾಜ್ಯದ ಬಿಜೆಪಿ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಯಾವುದೇ ಒಂದು ರೂಪಾಯಿ ಸಹಾಯ ಮಾಡದೇ ನಮ್ಮ ಭಾಗದ ಜನರನ್ನು ಕಡೆಗಣಿಸುತ್ತಿದ್ದಾರೆ ಅದರಲ್ಲಿ ನೋಟು ಬ್ಯಾನ್, ಜಿಎಸ್‍ಟಿ, ಸಂಚಾರಿ ಕಾಯ್ದೆ ಅವೈಜ್ಞಾನಿಕ ನಿಯಮಗಳನ್ನು ಜಾರಿ ಮಾಡಿ ಬಡ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದ್ದಾರೆ ಎಂದರು.

ಅದರ ಬದಲಾಗಿ ರಾಜ್ಯ ಸರ್ಕಾರವಾದರೂ ಅನುದಾನ ನೀಡಬಹುದಾಗಿತ್ತು ಆದರೆ ದ್ವೇಷದ ರಾಜಕಾರಣಕ್ಕೆ ರೈತರು ತುತ್ತಾಗಿದ್ದಾರೆ ಹಾಗೂ ಕೇಂದ್ರ ಸರ್ಕಾರು ಇಡಿ ಇಲಾಖೆಯನ್ನು ತಮ್ಮ ಸ್ವತಃ ಮಾಡಿಕೊಂಡು ನಮ್ಮ ಪಕ್ಷದ ನಾಯಕರನ್ನು ಬಂಧಿಸಿದ್ದಾರೆ ಎಂದು ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎನ್ ಎಸ್ ಬೋಸರಾಜ, ಮಾಜಿ ಶಾಸಕ ಜಿ ಹಂಪಯ್ಯ ನಾಯಕ,ಮಾಜಿ ಜಿ ಪಂ ಅಧ್ಯಕ್ಷ ದೊಡ್ಡ ಬಸಪ್ಪ ಗೌಡ, ರಾಜಾ ವಸಂತನಾಯಕ,ಶರಣಪ್ಪ ಗುಡದಿನ್ನಿ,ಲಕ್ಷ್ಮೀನಾರಾಯಣ ಯಾವದ್,ಬಿ ಕೆ ಅಮರೇಶಪ್ಪ, ಹನುಮೇಶ ಮದ್ಲಾಪೂರು, ಖಾದ್ರಿ, ಮಹಾಂತೇಶ ಸ್ವಾಮಿ ರೌಡೂರು, ಚನ್ನಬಸವಣ್ಣ, ಎಸ್ ಎಮ್ ಪಾಟೀಲ್,ಪಿ ಪ್ರಕಾಶ್, ರಾಮಕೃಷ್ಣ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ನಮ್ಮ ತಾಲೂಕು ತುಂಬಾ ಬರಗಾಲದಲ್ಲಿರುವ ಸಮಯದಲ್ಲಿ ಕಾಲುವೆ ನೀರು ಬಂದಿಲ್ಲ ಗ್ರಾಮೀಣ ಭಾಗದ ರೈತರಲ್ಲಿ ಕಲಹಕ್ಕೆ ಕಾರಣವಾಗಿದೆ, ಪ್ರಮುಖವಾಗಿ ನೆರೆಹಾವಳಿಯಿಂದ ರೈತನ ಜೀವನ ಬೀದಿಪಾಲಾಗಿದೆ ಆದರೂ ಕೂಡ ಕೇಂದ್ರ ಸರ್ಕಾರ ಒಂದು ರೂಪಾಯಿ ಕೂಡ ಅನುದಾನ ನೀಡಿಲ್ಲ =  ಜಿ ಹಂಪಯ್ಯ ನಾಯಕ, ಮಾಜಿ ಶಾಸಕ

ದ್ವೇಷದ ರಾಜಕಾರಣ ಮಾಡುತ್ತಿದೆ

ಹಾಗೂ ಐಟಿ ಮತ್ತು ಇಡಿ ಸಂಸ್ಥೆಗಳನ್ನು ತಮ್ಮ ವಶದಲ್ಲಿ ತಗೆದುಕೊಂಡು ನಮ್ಮ ಕಾಂಗ್ರೆಸ್ ಪಕ್ಷದ ನಾಯಕ ಡಿಕೆ ಶಿವಕುಮಾರ್  ಇವರಿಗೆ ಕಿರುಕುಳ ನೀಡಲಾಗುತ್ತಿದೆ ನಮ್ಮ ದೇಶದ ಆರ್ಥಿಕವಾಗಿ ಹಿಂದೆ ಹೋಗುತ್ತಿದ್ದರು ಅದನ್ನು ಲೆಕ್ಕಿಸದೆ ಕೇವಲ ದ್ವೇಷದ ರಾಜಕೀಯವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್ ಎಸ್ ಬೋಸರಾಜ ಆರೋಪಿಸಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter