ದಿ 1% ಕ್ಲಬ್ ಪುಸ್ತಕ ಲೋಕಾರ್ಪಣೆ

ದಿ 1% ಕ್ಲಬ್ ಪುಸ್ತಕ ಲೋಕಾರ್ಪಣೆ

ಬೆಳಗಾಯಿತು ವಾರ್ತೆ

 ಬೆಂಗಳೂರು :ರೋಹಿಣಿ ಮುಂದ್ರ ಅವರ ಪುಸ್ತಕ “ದಿ 1% ಕ್ಲಬ್” ಬೆಂಗಳೂರಿನಲ್ಲಿ ಭಾನುವಾರದಂದು ಅನಾವರಣಗೊಂಡಿತು.

ಅತ್ಯುತ್ತಮ ಭಾಷಣಕಾರ್ತಿಯಾಗಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವಿಶೇಷ ವಿಚಾರ ಸಂಕಿರಣಗಳ ಮೂಲಕ ಪ್ರಖ್ಯಾತಿಯಾಗಿರುವ ರೋಹಿಣಿ ಮುಂದ್ರಾ ತನ್ನ ಮೊದಲ ಪುಸ್ತಕ “ದಿ 1% ಕ್ಲಬ್” ಅನ್ನು ಬೆಂಗಳೂರಿನ ಹೋಟೆಲ್ ರಾಯಲ್ ಆರ್ಕಿಡ್ಸ್‍ನಲ್ಲಿ ಬಿಡುಗಡೆ ಮಾಡಿದರು. ಈ ಮೂಲಕ ಉದಯೋನ್ಮುಖ ಲೇಖಕಿಯಾಗಿ ಹೊರಹೊಮ್ಮಿದ್ದು, ಇದು ಇವರ ಸಾಧನೆಯ ಮತ್ತೊಂದು ಗರಿಯಾಗಿ ಸೇರ್ಪಡೆಯಾಗಿದೆ.

ರೋಹಿಣಿ ಮುಂದ್ರ ರವರ ಪುಸ್ತಕವನ್ನು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಾರ್ಯಕರ್ತ ಡಾ.ಅಕ್ಕೈ ಪದ್ಮಶಾಲಿ ಅನಾವರಣಗೊಳಿಸಿದರು.

ಈ ಸಮಾರಂಭದಲ್ಲಿ ಭಾರತೀಯ  ಅಂತರ್ ರಾಷ್ಟ್ರೀಯ ಕ್ರಿಕೆಟಿಗ ರವರು ಕರುಣಾ ವಿಜಯಕುಮಾರ್ ಜೈನ್, ರೋಹಿಣಿ ಮುಂದ್ರ ಅವರ ಪುಸ್ತಕ ಮತ್ತು ಅವರು ನಡೆದು ಬಂದ ದಾರಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಡಾ.ಅಕ್ಕೈ ಪದ್ಮಶಾಲಿಯವರು ರೋಹಿಣಿ ರವರ ಈ ಪ್ರಯತ್ನವನ್ನು ಶ್ಲಾಘಿಸಿದರು. ಆರಂಭಿಕ ಹಂತಗಳಲ್ಲಿನ ತನ್ನ ವೈಫಲ್ಯಗಳನ್ನು ಅನುಭವಗಳಾಗಿ ಪರಿವರ್ತಿಸಿ ಓದುಗರಿಗೆ ಅವರ ವೃತ್ತಿಜೀವನವನ್ನು ರೂಪಿಸಕೊಳ್ಳಲು ಪ್ರೇರಣೆ ನೀಡುವಂತಹ ಬರಹಗಳನ್ನು ಈ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ನುಡಿದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.