ಮುಂಬೈ : ಭಾರತದ ಪ್ರಥಮ ಪ್ರಯಾಣಿಕ ರೈಲು ಸೇವೆಯ ವರ್ಷಾಚರಣೆಗೆ ಕೊರೊನಾ ಕಾರ್ಮೋಡ ಕವಿದಿದೆ.
ಪ್ರಯಾಣಿಕ ರೈಲು ಬಾಂಬೆ ಮತ್ತು ಥಾಣೆ ನಡುವೆ 1853 ರ ಏಪ್ರಿಲ್ 16 ರಂದು ಮೊದಲ ಬಾರಿಗೆ ಸಂಚಾರ ನಡೆಸಿತ್ತು.
ಗುರುವಾರ ಈ ಐತಿಹಾಸಿಕ ಘಟನೆಯ 167 ನೇ ವರ್ಷ. ಆದರೆ ಭಾರತೀಯ ರೈಲ್ವೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 2020 ರ ಏಪ್ರಿಲ್ 16 ರಂದು ರೈಲ್ವೆ ಜಾಲದಲ್ಲಿ ಯಾವುದೇ ಪ್ರಯಾಣಿಕ ರೈಲು ಸೇವೆ ಇಲ್ಲ.
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ರೈಲು ಸಂಚಾರ ಸ್ತಬ್ಧವಾಗಿದೆ.