ಒಡಿಶಾದಲ್ಲಿ ರೈಲು ತಪ್ಪಿ 25 ಪ್ರಯಾಣಿಕರಿಗೆ ಗಾಯ

ಒಡಿಶಾದಲ್ಲಿ ರೈಲು ತಪ್ಪಿ 25 ಪ್ರಯಾಣಿಕರಿಗೆ ಗಾಯ

ಮುಂಬೈ: ಮುಂಬೈ-ಭುವನೇಶ್ವರ ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್‌ನ ಐದು ಬೋಗಿಗಳು ಗುರುವಾರ ಮುಂಜಾನೆ ಒಡಿಶಾದ ಕಟಕ್ ಬಳಿ ಹಳಿ ತಪ್ಪಿ25 ಜನರು ಗಾಯಗೊಂಡಿದ್ದಾರೆ.

ರೈಲು ಸರಕು ರೈಲಿಗೆ ಡಿಕ್ಕಿ ಹೊಡೆದ ನಂತರ ರೈಲು ಹಳಿ ತಪ್ಪಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸಲಗಾಂವ್ ಮತ್ತು ನೆರ್ಗುಂಡಿ ನಿಲ್ದಾಣಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 25 ಜನರು ಗಾಯಗೊಂಡಿದ್ದಾರೆ.
ಎಲ್ಲಾ ಪ್ರಯಾಣಿಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದೂ ಹೇಳಲಾಗಿದೆ.
ಸ್ಥಳದಲ್ಲಿ ಭಾರಿ ಮಂಜು ಕವಿದಿತ್ತು ಎನ್ನಲಾಗಿದ್ದರೂ ಅಪಘಾತಕ್ಕೆ ನಿಖರ ಕಾರಣ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.