ರೈಲ್ವೆ ಖಾಸಗೀಕರಣದ ವಿರುದ್ದ ಪ್ರತಿಭಟನೆ

Share on facebook
Share on twitter
Share on linkedin
Share on whatsapp
Share on email


ಬೆಳಗಾಯಿತು ವಾರ್ತೆ
ಬಳ್ಳಾರಿ: ಭಾರತೀಯ ರೈಲ್ವೆ ಪ್ರಪಂಚದಲ್ಲೇ ನಾಲ್ಕನೇ ಅತಿ ದೊಡ್ಡ ರೈಲ್ವೆ ಜಾಲವಾಗಿದ್ದು, ದೇಶದ ಆರ್ಥಿಕತೆಯ ಬಹುದೊಡ್ಡ ಜೀವನಾಡಿಯಾಗಿದೆ. ಜನ ಸಾಮಾನ್ಯರಿಗೆ ಸುಲಭ ದರದಲ್ಲಿ ಪ್ರಯಾಣ ಸೌಕರ್ಯ ಕಲ್ಪಿಸುವ ಈ ‘ಹೆಮ್ಮೆಯ ಬಹು ದೊಡ್ಡ ಉದ್ಯಮ’ವನ್ನು ಇದೀಗ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವ್ಯಾಪಕವಾಗಿ ಖಾಸಗೀಕರಣಗೊಳಿಸುತ್ತ, ಲಾಭಕೋರ ಕೈಗಾರಿಕಾ ಮನೆತನಗಳಿಗೆ ಒಪ್ಪಿಸಲು ಹೊರಟಿದೆ ಎಂದು ಎಸ್.ಯು.ಸಿ.ಐ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಆರ್.ಸೋಮಶೇಖರ್ ಗೌಡ ಅವರು ಹೇಳಿದರು.


ನಗರದ ರೈಲ್ವೆ ನಿಲ್ದಾಣದ ಮುಂದೆ ಎಸ್.ಯು.ಸಿ.ಐ ಕಮ್ಯುನಿಷ್ಟ್ ಪಕ್ಷದ ವತಿಯಿಂದ ರೈಲ್ವೆ ಖಾಸಗೀಕರಣದ ವಿರುದ್ದ ಪ್ರತಿಭಟನೆ ಮಾಡಲಾಯಿತು.

ಈ ಪ್ರತಿಭಟನೆಯಲ್ಲಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಇ.ಹನುಮಂತಪ್ಪ, ಶರ್ಮಸ್, ಪಂಪಾಪತಿ, ಹೆಚ್.ರ‍್ರಿಸ್ವಾಮಿ, ಜಗದೀಶ್ ನೆಮಕಲ್, ಸುರೇಶ್.ಜಿ, ರವಿಕಿರಣ್.ಜೆ.ಪಿ ಮತ್ತು ಇತರರು ಭಾಗವಹಿಸಿದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter