ಸಾಫ್ಟ್‍ವೇರ್ ಮಂದಿಯ ಥ್ರಿಲ್ಲರ್ ಸಿನಿಮಾದಲ್ಲಿ ನೀತು

Share on facebook
Share on twitter
Share on linkedin
Share on whatsapp
Share on email

ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಹಲವು ಸಾಫ್ಟ್‍ವೇರ್ ಮಂದಿ ಎಂಟ್ರಿಯಾಗಿದ್ದಾರೆ. ಆ ಸಾಲಿಗೆ ಈಗ “1888’ ಸಿನಿಮಾ ಮೂಲಕ ಸಾಫ್ಟ್ವೇರ್ ಗೆಳೆಯರು ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಇದೊಂದು ಮೈಕ್ರೋ ಬಜೆಟ್ ಸಿನಿಮಾ. ಇದರಲ್ಲಿ ಥ್ರಿಲ್ಲರ್ ಅಂಶಗಳನ್ನು ಹೊಂದಿದ್ದು, ಅಪನಗಧೀಕರಣ ಸುತ್ತ ನಡೆಯುವ ಕಥೆ ಇದಾಗಿದೆ. ಚಿತ್ರದಲ್ಲಿ ಅದ್ವಿತಿಶೆಟ್ಟಿ, ನೀತು ಶೆಟ್ಟಿ ನಟಿಸಿದ್ದಾರೆ.

ನೀತು ಅವರಿಲ್ಲಿ ಸಂಧ್ಯಾ ಶೆಟ್ಟಿ ಎಂಬ ಟಾಪ್‍ನಟಿ ಪಾತ್ರ ನಿರ್ವಹಿಸಿದ್ದಾರೆ. ಇದರೊಂದಿಗೆ ನೀತು ಚಿತ್ರಕ್ಕೆ ಹಾಡೊಂದನ್ನೂ ಬರೆದಿರುವುದು ವಿಶೇಷ. ಸೌರಭ್ ಶುಕ್ಲ ನಿರ್ದೇಶಿಸಿದ್ದಾರೆ. ಇನ್ನು, ಗೆರಿಲ್ಲಾ ಶೈಲಿಯಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. ನಟಿಯೊಬ್ಬಳು ಇನ್ನೇನು ರಾಜಕೀಯ ಪ್ರವೇಶ ಮಾಡಬೇಕು ಅಂದುಕೊಳ್ಳುವಾಗಲೇ ಅಪನಗಧೀಕರಣ ಆಗಿ, ಅವಳ ಬದುಕಲ್ಲೊಂದು ಬದಲಾವಣೆ ಆಗುತ್ತೆ. ಆಮೇಲೆ ಏನಾಗುತ್ತೆ ಎಂಬುದೇ ಇಂಟ್ರೆಸ್ಟಿಂಗ್ ಸ್ಟೋರಿ.

ಚಿತ್ರದಲ್ಲಿ ಅದ್ವಿತಿ ಶೆಟ್ಟಿ ಕೂಡ ನಟಿಸುತ್ತಿದ್ದು, ಅವರ ಜೊತೆಯಲ್ಲಿ ಮಂಜುರಾಜ್, ಪ್ರತಾಪ್‍ಕುಮಾರ್, ರಘು ರಾಮಪ್ಪ, ವಿಕ್ರಮ್ ಕುಮಾರ್, ಸೂರ್ಯ ಸಿದಾರ್ಥ ಇತರರು ನಟಿಸಿದ್ದಾರೆ. ಲೋಹಿತ್, ಮಂಜುರಾಜ್ ಹಾಗು ಗೆಳೆಯರು ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ದೇವದಾಜ್ ನಾಯಕ್, ಸೌರಭ್ ಶುಕ್ಲ, ವಿಕ್ರಮ್ ಕುಮಾರ್ ಸಂಭಾಷಣೆ ಬರೆದರೆ, ಪ್ರದೀಪ್ ಎಂ. ಕ್ಯಾಮೆರಾ ಹಿಡಿದಿದ್ದಾರೆ. ಗಿರೀಶ್ ಹೊತ್ತೂರ್ ಸಂಗೀತ, ಪುನೀತ್ ದೇಗವಿ ಸಂಕಲನವಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *