ವಿಮಾನ ತಿದ್ದುಪಡಿ ಮಸೂದೆ-೨೦೨೦ಕ್ಕೆ ಸಂಸತ್ ಅನುಮೋದನೆ

Share on facebook
Share on twitter
Share on linkedin
Share on whatsapp
Share on emailನವದೆಹಲಿ: ವೈಮಾನಿಕ ಕ್ಷೇತ್ರದಲ್ಲಿ ವಿವಿಧ ಅಪರಾಧಗಳಿಗೆ ಗರಿಷ್ಠ ದಂಡ ವಿಧಿಸಲು ಅವಕಾಶ ಮಾಡಿಕೊಡುವ ವಿಮಾನ ಕಾಯ್ದೆಯನ್ನು ರಾಜ್ಯಸಭೆ ಮಂಗಳವಾರ ಧ್ವನಿಮತದಿಂದ ಅಂಗೀಕರಿಸುವುದರೊಂದಿಗೆ ಕಾಯ್ದೆಯು ಸಂಸತ್‌ನ ಅನುಮೋದನೆ ಪಡೆದಿದೆ.
ವೈಮಾನಿಕ ಅಪರಾಧಗಳಿಗೆ ೧೦ ಲಕ್ಷದಿಂದ ಒಂದು ಕೋಟಿ ರೂ ದಂಡ ವಿಧಿಸಲು ಅವಕಾಶ ಮಾಡಿಕೊಡುವ ವಿಮಾನ ತಿದ್ದುಪಡಿ ಮಸೂದೆ-೨೦೨೦ನ್ನು ನಾಗರಿಕ ವಿಮಾನಯಾನ ಖಾತೆ ಸಚಿವ ಹರ್‌ದೀಪ್ ಸಿಂಗ್ ಪುರಿ ಅಂಗೀಕಾರಕ್ಕಾಗಿ ಸದನದಲ್ಲಿ ಮಂಡಿಸಿದರು.


ವಿವಿಧ ಅಪರಾಧಗಳಿಗೆ ಈ ಕಾಯ್ದೆಯಡಿ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಇಲ್ಲವೇ ಹತ್ತು ಲಕ್ಷದ ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ವಿಮಾನಗಳಲ್ಲಿ ಶಸ್ತ್ರಾಸ್ತ್ರ, ಸ್ಫೋಟಕ ಇಲ್ಲವೇ ಅಪಾಯಕಾರಿ ವಸ್ತುಗಳನ್ನು ಸಾಗಿಸುವುದು, ಕಾಯ್ದೆಯಲ್ಲಿನ ನಿಯಮಗಳನ್ನು ಉಲ್ಲಂಘಿಸುವುದು, ವಿಮಾನ ನಿಲ್ದಾಣಗಳ ವ್ಯಾಪ್ತಿಯಲ್ಲಿ ಕಟ್ಟಡಗಳನ್ನು ನಿರ್ಮಿಸುವುದು ಮತ್ತಿತರ ಅಪರಾಧಗಳು ಇದರಲ್ಲಿ ಸೇರಿವೆ.

ಮೇಲ್ಮನೆಯಲ್ಲಿ ಮಸೂದೆ ಕುರಿತ ಚರ್ಚೆಗೆ ಉತ್ತರಿಸಿದ ಹರ್‌ದೀಪ್ ಸಿಂಗ್ ಪುರಿ, ವೈಮಾನಿಕ ಸುರಕ್ಷತೆಯಲ್ಲಿ ಯಾವುದೇ ರಾಜೀ ಇಲ್ಲ. ಕಳೆದ ಮೂರು ವರ್ಷಗಳಲ್ಲಿಸ ಸರ್ಕಾರ ೧,೦೦೦ ವೈಮಾನಿಕ ಸಂಚಾರಿ ನಿಯಂತ್ರಕರನ್ನು ನೇಮಕ ಮಾಡಿದೆ. ಖಾಲಿ ಇರುವ ಇನ್ನೂ ೩,೫೦೦ ಹುದ್ದೆಗಳನ್ನು ಈ ವರ್ಷವೇ ಭರ್ತಿ ಮಾಡಲಾಗುವುದು ಎಂದು ಹೇಳಿದ್ದಾರೆ.


ಖಾಸಗೀಕರಣ ಕುರಿತಂತೆ ಕೆಲ ಸದಸ್ಯರ ಆತಂತಕ್ಕೆ ಪ್ರತಿಕ್ರಿಯಿಸಿದ ಸಚಿವರು, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ, ಖಾಸಗೀಕರಣದಿಂದ ೨೯,೦೦೦ ಕೋಟಿ ರೂ ಗಳಿಸಿದೆ. ಇದನ್ನು ಇತರ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಬಳಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter