22ಕ್ಕೆ ಗ್ಯಾರೆಂಟಿ ಕನ್ನಡ್ ಗೊತ್ತಿಲ್ಲ

22ಕ್ಕೆ ಗ್ಯಾರೆಂಟಿ ಕನ್ನಡ್ ಗೊತ್ತಿಲ್ಲ

ಈ ಶುಕ್ರವಾರವೇ ತೆರೆಗೆ ಬರಬೇಕಿದ್ದ ‘ಕನ್ನಡ್ ಗೊತ್ತಿಲ್ಲ’ ಸಿನಿಮಾ ಕಾರಣಾಂತರದಿಂದ ಒಂದು ವಾರ ಮುಂದಕ್ಕೆ ಹೋಗಿದೆ. ಅಂದರೆ, ಸಿನಿಮಾ ಇದೇ ನವೆಂಬರ್ 22ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲಿದೆ. ಬೆಂಗಳೂರಿನಲ್ಲಿ ವಾಸಿಸುವ ಅನೇಕ ಪರಭಾಷಿಗರಿಗೆ ಕನ್ನಡ ಬರೋದಿಲ್ಲ, ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗಿ ಕನ್ನಡೇತರರೇ ವಾಸಿಸುತ್ತಿದ್ದಾರೆ. ಅವರುಗಳು ನಮ್ಮ ಭಾಷೆ ಬಾರದಿದ್ದರೂ ಕನ್ನಡ್ ಗೊತ್ತಿಲ್ಲವೆಂದು ಹೇಳಿದಾಗ ಕನ್ನಡಿಗನಿಗೆ ಕೋಪ ಬರುವುದು ಸಹಜ. ಇಂತಹ ಹಲವಾರು ಅಂಶಗಳನ್ನು ಇಟ್ಟುಕೊಂಡು ‘ಕನ್ನಡ್ ಗೊತ್ತಿಲ್ಲ’ ಚಿತ್ರ ಸಿದ್ದವಾಗಿದೆ. ಈ ಚಿತ್ರವನ್ನು ಮಯೂರ್ ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ. ಒಂದು ಮರ್ಡರ್ ಮಿಸ್ಟ್ರಿ ಕತೆಯಲ್ಲಿ ಕನ್ನಡದ ಪ್ರಸ್ತಾಪ ಏಕೆ ಬರುತ್ತದೆ ಎಂದು ತಿಳಿಯಲು ಸಿನಿಮಾ ನೋಡಬೇಕು.

ಚಿತ್ರ ಬಿಡುಗಡೆಯದ ನಂತರ ಕನ್ನಡ ಭಾಷೆಯ ಬಗ್ಗೆ ಹೊರಗಿನ ಜನರಿಗೆ ಅರಿವು ಮತ್ತು ಭಾಷೆ ಕಲಿಯುವ ರೀತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗುತ್ತದೆ. ಇವತ್ತಿನ ಪ್ರಪಂಚದಲ್ಲಿ ಏನು ನಡೀತಿದೆ ಎಂದು ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ಮಹಿಳಾ ಪ್ರಧಾನ ಕಥೆ ಇರುವ ಈ ಚಿತ್ರದಲ್ಲಿ ಓರ್ವ ತನಿಖಾಧಿಕಾರಿಯಾಗಿ ನಟಿ ಹರಿಪ್ರಿಯ ಅವರು ನಟಿಸಿದ್ದಾರೆ. ಪೋಲೀಸ್ ಆಯುಕ್ತರಾಗಿ ಸುಧಾರಾಣಿ, ಚಾಲಕನಾಗಿ ಧರ್ಮೇಂದ್ರ, ಭ್ರಷ್ಟ ಪೇದೆಯಾಗಿ ಪವನ್ ಕುಮಾರ್, ರೋಹಿತ್ ಭಾನುಪ್ರಕಾಶ್, ರೆಮೋ ಹಾಗೂ ಕನ್ನಡ ಬಾರದ ಆರ್‍ಜೆಗಳು ಬಣ್ಣ ಹಚ್ಚಿದ್ದಾರೆ.

ಮಾಂಟೇಜ್ ಶೈಲಿಯಲ್ಲಿ ಬರುವ ಮೂರು ಹಾಡುಗಳಿಗೆ ಮತ್ತು ಹಿನ್ನಲೆ ಸಂಗೀತ ಒದಗಿಸಿರುವುದು ಆರ್.ಜೆ. ರೆಹಮಾನ್ ಶಿಷ್ಯ ನಕುಲ್ ಅಭ್ಯಂಕರ್. ಛಾಯಾಗ್ರಹಣ ಮತ್ತು ಸಂಕಲನ ಗಿರಿಧರ್ ದಿವಾನ್. ಇಲ್ಲಿನ ಸಂಸ್ಕ್ರತಿ, ನಮ್ಮ ನೆಲ, ಜಲ ಉಪಯೋಗಿಸಿ, ನಮ್ಮಲ್ಲಿ ವಾಸವಿದ್ದು ಕನ್ನಡ ಭಾಷೆ ಕಲಿಯದೆ ಧೋರಣೆ ವ್ಯಕ್ತಪಡಿಸುತ್ತಿರುವ ವಿರೋಧಿಗಳಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು ಎನ್ನುವ ನಿರ್ಮಾಪಕ ಕುಮಾರ ಕಂಠೀರವ ಅವರು ಕನ್ನಡದ ಮೇಲಿನ ಅಭಿಮಾನದಿಂದ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಜಯಣ್ಣ ಫಿಲಂಸ್ ಚಿತ್ರದ ಬಿಡುಗಡೆಯ ಜವಬ್ದಾರಿಯನ್ನು ಹೊತ್ತುಕೊಂಡಿದೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.