ಮುಂದಿನವಾರ ಕರಡಿ ಗುಹೆ ರಹಸ್ಯ ರಿವೀಲ್

Share on facebook
Share on twitter
Share on linkedin
Share on whatsapp
Share on email

ಯುವ ಪ್ರತಿಭೆ ಕಿರಣ್ ಹೆಗಡೆ ಮೊದಲಬಾರಿ ಕಥೆ ಬರೆದು ಆ್ಯಕ್ಷನ್-ಕಟ್ ಹೇಳಿರುವ ವಿಭಿನ್ನ ಪ್ರಯತ್ನದ ‘ಮನರೂಪ’ ಸಿನಿಮಾ ಮುಂದಿನವಾರ (ನ 22 ರಂದು) ರಾಜ್ಯಾದ್ಯಂತ ಮೈಸೂರು ಟಾಕಿಸ್ ಮುಖೇನ್ ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ಕಿರಣ್ ಪ್ರೇಕ್ಷಕರಿಗೆ ಕರಡಿ ಗುಹೆ ಬಗ್ಗೆ ರಹಸ್ಯ ಬಿಚ್ಚಿಡಲಿದ್ದಾರೆ. ಮನರೂಪ ಟ್ರೇಲರ್‍ಗೆ ಈಗಾಗಲೇ ಅಂತರ್ಜಾಲದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರತಂಡ ಖುಷಿ ಹೆಚ್ಚಿಸಿದೆ. ದುರ್ಗಮ ಅರಣ್ಯದ ಯಾರೂ ಕಾಲಿಡದ ಜಾಗದಲ್ಲಿ ಈ ತಲೆಮಾರಿನ ಹುಡುಗರು ತಮ್ಮ ಭಾವನೆಗಳನ್ನು ಶೋಧಿಸಲು ಹೊರಟಾಗ ಎದುರಾಗುವ ತಲ್ಲಣಗಳನ್ನು ಸೆರೆಹಿಡಿಯುವ ಪ್ರಯತ್ನವೇ ಹೊಸ ಕಾಲದ ಸೈಕಾಲಜಿಕಲ್ ಥ್ರಿಲ್ಲರ್ – ಮನರೂಪ. ನಮ್ಮ ಮನದಾಳದ ಕನ್ನಡಿಯಲ್ಲಿ ಪ್ರತಿಫಲಿಸುವ ವಿಚ್ಛಿದ್ರ ಭಾವನೆಗಳ ಕತೆಯಿದು. ಅಜ್ಞಾತ ಪ್ರದೇಶದಲ್ಲಿ ಅನಿರೀಕ್ಷಿತ ಸಂದರ್ಭಗಳಿಗೆ ಸಿಲುಕಿ ಸಾಗುವ ಹೊಸ ತಲೆಮಾರಿನ ಹುಡುಗರು ಕೊನೆಗೆ ಪ್ರೇಕ್ಷಕರನ್ನು ತಮ್ಮ ಜೊತೆಗೇ “ಕರಡಿ ಗುಹೆ”ಗೆ ಕರೆದೊಯ್ದುತ್ತಾರೆ ಎಂಬ ನಂಬಿಕೆ ಚಿತ್ರತಂಡದ್ದು.

ಮನರೂಪದಲ್ಲಿ ಹಿಂದೆಂದೂ ಮುಟ್ಟಿರದ ಸಬ್ಜೆಕ್ಟ್ ಇದೆಯಂತೆ. ಅದು ಗುಮ್ಮ ಎಂಬ ಥೀಮ್. ಕಾಡು ಎಂಬ ಕನ್ನಡಿಯಲ್ಲಿ ಗುಮ್ಮನ ರೂಪ ಪ್ರೇಕ್ಷಕರನ್ನು ರಂಜಿಸಲಿದೆ ಎಂಬುದು ಚಿತ್ರ ನಿರ್ಮಾಣ ಮಾಡುತ್ತಿರುವ ಸಿ.ಎಂ.ಸಿ.ಆರ್ ಮೂವಿಸ್‍ನ ನಂಬಿಕೆ. ದುರ್ಗಮ ಕಣಿವೆ, ಇಳಿಜಾರು, ಪೊದೆಗಳು, ಬೆಟ್ಟದ ತುದಿಗಳು ಮತ್ತು ನದಿ ದಂಡೆಯಲ್ಲಿ ಕಾಡಿನ ನಿಗೂಢ ಲೋಕ ಮನರೂಪ ಚಿತ್ರದ ಪ್ಲಸ್ ಪಾಯಿಂಟ್ ಎಂದು ನಿರ್ದೇಶಕ ಕಿರಣ್ ಹೆಗಡೆ ಅಭಿಪ್ರಾಯ. ಸಿನಿಮಾದ ಶೇ.90ರಷ್ಟು ಚಿತ್ರೀಕರಣ ಹೊರಾಂಗಣದ ದಟ್ಟ ಕಾಡಿನಲ್ಲಿ ನಡೆದಿದ್ದು, ನಗರ ಪ್ರದೇಶದ ವೀಕ್ಷಕರಿಗೆ ಪ್ರಕೃತಿಯ ವಿಸ್ಮಯಗಳನ್ನು ಆಸ್ವಾದಿಸುವ ಅದ್ಭುತ ಅವಕಾಶವಿದು. ಅದೇ ವೇಳೆ, ಚಾರಣಿಗರು ಯಾವುದೇ ಸಿದ್ಧತೆಯಿಲ್ಲದೆ ಅಥವಾ ಸೂಕ್ತ ತಯಾರಿಯಿಲ್ಲದೆ ಹೊರಟರೆ ಎದುರಾಗಬಹುದಾದ ಅನಿರೀಕ್ಷಿತ ಅಪಾಯಗಳ ಮೇಲೂ ಇದು ಬೆಳಕು ಚೆಲ್ಲುತ್ತದೆ.

ಕರಡಿ ಗುಹೆಯಲ್ಲಿ ತೀವ್ರತರ ನಾರ್ಸಿಸಿಸ್ಟಿಕ್ ಮನಸ್ಸಿನ ಅನೂಹ್ಯ ಹಾಗೂ ವಿಚಿತ್ರ ಬಲೆಯೊಂದರ ರಹಸ್ಯವಿದೆ ಎಂಬುದು ನಿರ್ದೇಶಕರ ಹೇಳಿಕೆ. ಅದರಿಂದ ಹೊರಬರಲು ಈ ಸ್ನೇಹಿತರು ಹೇಗೆ ಪರದಾಡುತ್ತಾರೆ ಎಂಬುದೇ ಸಿನಿಮಾದ ಅಂತರಾಳ. ಇಡೀ ಕತೆ ಎರಡು ದಿನದಲ್ಲಿ ನಡೆಯುತ್ತದೆ. ಪ್ರೇಕ್ಷಕರಿಗೆ ಇಲ್ಲಿ ಎಂಜಾಯ್ ಮಾಡಲು ವಿಚಿತ್ರ ಅನುಭವಗಳ ಸರಮಾಲೆಯೇ ಇದೆ. ಸಾಧ್ಯವಾದರೆ ಸೆಲ್ಫ್ ಅಬ್ಸೆಷನ್ ಜೊತೆ ಪ್ರೇಕ್ಷಕರು ತಮ್ಮನ್ನೇ ಲಿಂಕ್ ಮಾಡಿಕೊಂಡು ತಳಮಳ ಅನುಭವಿಸಬಹುದು! ಇದರಲ್ಲಿ ಹೊಸ ಪ್ರತಿಭೆ ದಿಲೀಪ್ ಕುಮಾರ್, ಅನೂಷಾ ರಾವ್, ನಿಶಾ ಬಿ.ಆರ್, ಆರ್ಯನ್, ಶಿವಪ್ರಸಾದ್, ಅಮೋಘ್ ಸಿದ್ಧಾರ್ಥ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಗೋವಿಂದ್ ರಾಜ್ ಛಾಯಾಗ್ರಹಣ, ಸರ್ವಣ ಅವರ ಸಂಗೀತ, ಕಾಡಿನ ಶಬ್ಧಗ್ರಹಣ ಹುಲಿವಾನ್ ನಾಗರಾಜ್ ಮತ್ತು ಸಂಭಾಷಣೆ ಮಹಾಬಲ ಸೀತಾಳಭಾವಿ ಅವರದ್ದು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter