ಸಾವಿರ ಗೆಲುವಿನ ಸನಿಹದಲ್ಲಿ ನಡಾಲ್

Share on facebook
Share on twitter
Share on linkedin
Share on whatsapp
Share on email

ದುಬೈ: ಕ್ಲೇ ಕೋರ್ಟ್‍ನ ಕಿಂಗ್ ರಫೇಲ್ ನಡಾಲ್, 13 ನೇ ಫ್ರೆಂಚ್ ಓಪನ್ ಪ್ರಶಸ್ತಿ ಮತ್ತು 20 ಗ್ರ್ಯಾನ್ ಸ್ಲ್ಯಾಮ್ ಗೆದ್ದು ವಿಶ್ವ ದಾಖಲೆ ಬರೆದಿದ್ದಾರೆ. ಈಗ ಅವರ ದೃಷ್ಟಿ ತಮ್ಮ ವೃತ್ತಿ ಜೀವನದ 1000 ನೇ ಗೆಲುವಿನ ಮೇಲೆ ನೆಟ್ಟಿದ್ದು, ಇವರು ಈ ಸಾಧನೆಗೆ ಒಂದು ಮೆಟ್ಟಿಲು ದೂರದಲ್ಲಿದ್ದಾರೆ.ನಡಾಲ್ ಭಾನುವಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರನ್ನು 6–0, 6–2, 7–5 ಸೆಟ್‍ಗಳಿಂದ ಸೋಲಿಸಿ 13 ನೇ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದರು. ನಡಾಲ್ ಅವರ ವೃತ್ತಿ ಜೀವನದ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ 102 ಪಂದ್ಯಗಳಲ್ಲಿ ಇದು 100 ನೇ ಜಯವಾಗಿದ್ದರೆ, ಅವರ ವೃತ್ತಿಜೀವನದ 999 ನೇ ಗೆಲುವಾಗಿದೆ.

ವೃತ್ತಿಜೀವನದ ಹೆಚ್ಚಿನ ಗೆಲುವುಗಳ ವಿಷಯದಲ್ಲಿ, ಅಮೆರಿಕದ ಇವಾನ್ ಲೆಂಡ್ಲ್ (1068), ಸ್ವಿಟ್ಜಲೆರ್ಂಡ್‍ನ ರೋಜರ್ ಫೆಡರರ್ (1242) ಮತ್ತು ಅಮೆರಿಕದ ಜಿಮ್ಮಿ ಕಾನರ್ಸ್ (1274) ಮುಂದಿದ್ದಾರೆ. ಫೆಡರರ್ 20 ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಹೊಂದಿದ್ದು, ಈಗ ಅದನ್ನು ನಡಾಲ್ ಸಮನಾಗಿಸಿದ್ದಾರೆ.

ಫ್ರೆಂಚ್ ಓಪನ್ ನಂತರ ಜೊಕೊವಿಚ್ ಮತ್ತು ನಡಾಲ್ ವಿಶ್ವ ಶ್ರೇಯಾಂಕದಲ್ಲಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. ನವೆಂಬರ್ 15 ರಿಂದ 22 ರವರೆಗೆ ಲಂಡನ್‍ನಲ್ಲಿ ನಡೆಯಲಿರುವ ವಿಶ್ವ ಟೂರ್ ಫೈನಲ್‍ನಲ್ಲಿ ಜೊಕೊವಿಚ್ ಗೆದ್ದರೆ, ಅವರು ತಮ್ಮ ವೃತ್ತಿಜೀವನದ ಆರನೇ ಬಾರಿಗೆ ವರ್ಷವನ್ನು ಪ್ರಥಮ ಸ್ಥಾನದಲ್ಲಿ ಮುಗಿಸುತ್ತಾರೆ. ನಡಾಲ್ ವರ್ಷವನ್ನು ಪ್ರಥಮ ಸ್ಥಾನದಲ್ಲಿ ಮುಕ್ತಾಯಗೊಳಿಸುವ ಅವಕಾಶವೂ ಇದೆ. ಲಂಡನ್ ವಲ್ರ್ಡ್ ಟೂರ್ ಫೈನಲ್‍ಗಾಗಿ ಜೊಕೊವಿಚ್ ಮತ್ತು ನಡಾಲ್ ಅವರಲ್ಲದೆ, ಆಸ್ಟ್ರಿಯಾದ ಡೊಮಿನಿಕ್ ಥೀಮ್, ಗ್ರೀಸ್‍ನ ಸ್ಟೀಫನೋಸ್ ಸಿಟ್ಸಿಪಾಸ್, ರμÁ್ಯದ ಡೆನಿಲ್ ಮೆಡ್ವೆಡೆವ್ ಮತ್ತು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅರ್ಹತೆ ಪಡೆದಿದ್ದಾರೆ. ಈ ಟೂರ್ನಿಗೆ ಇನ್ನೂ ಇಬ್ಬರು ಆಟಗಾರರು ಅರ್ಹತೆ ಪಡೆಯಲಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter