ಸ್ನಾಯು ಸೆಳೆತ :ಇಶಾಂತ್ ಐಪಿಎಲ್ ನಿಂದ ಔಟ್

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ವೇಗದ ಬೌಲರ್ ಇಶಾಂತ್ ಶರ್ಮಾ ಅವರು ಗಾಯದಿಂದ ಬಳಲುತ್ತಿದ್ದು, ಯುಎಇ ನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಿಂದ ಹೊರಗುಳಿದಿದ್ದಾರೆ ಎಂದು ಫ್ರಾಂಚೈಸಿ ಸೋಮವಾರ (ಅಕ್ಟೋಬರ್ 12) ದೃಢಪಡಿಸಿದೆ.ಇಶಾಂತ್ ಆರಂಭದಲ್ಲಿ ಪಕ್ಕೆಲುಬಿನ ನೋವು ಅನುಭವಿಸಿದ್ದರು. ಮತ್ತು ಅವರು ಸದ್ಯ ಸ್ನಾಯು ಸೆಳೆತ ಅನುಭವಿಸಿದ್ದಾರೆ ಎಂದು ತಿಳಿದುಬಂದಿದೆ.”ಅಕ್ಟೋಬರ್ 7, 2020 ರಂದು ದುಬೈನಲ್ಲಿ ನಡೆದ ತಂಡದ ತರಬೇತಿ ಶಿಬೀರದಲ್ಲಿ ಬೌಲಿಂಗ್ ಮಾಡುವಾಗ ಇಶಾಂತ್ ಶರ್ಮಾ ಎಡ ಪಕ್ಕೆಲುಬು ನೋವು ಅನುಭವಿಸಿದ್ದಾರೆ” ಎಂದು ಫ್ರ್ಯಾಂಚೈಸ್ ಹೇಳಿಕೆಯಲ್ಲಿ ತಿಳಿಸಿದೆ.”ಇವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರ ಎಡ ಪಕ್ಕೆಲುಬಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ದುರದೃಷ್ಟವಶಾತ್, ಈ ಗಾಯದಿಂದಾಗಿ ಅವರನ್ನು ಉಳಿದ ಐಪಿಎಲ್ ಋತುವಿನಿಂದ ಹೊರಗುಳಿಯಲಿದ್ದಾರೆ” ಎಂದು ಮಾಲೀಕರು ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಆಡಿದ ಏಳು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಅವರು ಕಣಕ್ಕೆ ಇಳಿದಿದ್ದಾರೆ. ಅಬುಧಾಬಿಯಲ್ಲಿ ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧ ಇಶಾಂತ್ ನಾಲ್ಕು ಓವರ್‍ಗಳಲ್ಲಿ 26 ರನ್ ನೀಡಿದರೂ ಅವರಿಗೆ ಯಾವುದೇ ವಿಕೆಟ್ ಸಿಗಲಿಲ್ಲ.ಭಾರತಕ್ಕಾಗಿ 97 ಟೆಸ್ಟ್, 80 ಏಕದಿನ ಮತ್ತು 14 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಇಶಾಂತ್, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಗಳಲ್ಲಿ ಭಾರತದ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸುವ ನಿರೀಕ್ಷೆಯಿದೆ. ಈ ಸರಣಿಯಲ್ಲಿ ಈ ವೇಗದ ಬೌಲರ್ ಆಡುವುದು ಅವರ ಗಾಯ ಗುಣಮುಖವಾಗುವುದರ ಮೇಲೆ ಅವಲಂಬಿಸಿರುತ್ತದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter