ಕ್ರಿಸ್ ಮೋರಿಸ್ ಮರಳುವಿಕೆಯಿಂದ ಬೌಲಿಂಗ್‍ಗೆ ಬಲ ಬಂದಿದೆ

Share on facebook
Share on twitter
Share on linkedin
Share on whatsapp
Share on email

ಶಾರ್ಜಾ: ಕಳೆದ ಎರಡು ಪಂದ್ಯಗಳಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್‍ರೌಂಡರ್ ಕ್ರಿಸ್ ಮೋರಿಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ. ಬಲಗೈ ವೇಗಿ ಆರ್‍ಸಿಬಿ ಕೂಡಿಕೊಂಡಿದ್ದರಿಂದ ಬೌಲಿಂಗ್ ವಿಭಾಗದ ಬಲ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.ಸೋಮವಾರ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‍ನ 28ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸಂಘಟಿತ ಪ್ರದರ್ಶನದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 82 ರನ್‍ಗಳಿಂದ ಪರಾಭವಗೊಳಿಸಿತು. ಆಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು.

ಶುಭಮನ್ ಗಿಲ್ ಬಿಟ್ಟರೆ ಇನ್ನುಳಿದ ಯಾವೊಬ್ಬ ಬ್ಯಾಟ್ಸ್‍ಮನ್ ಆರ್‍ಸಿಬಿ ಬೌಲರ್‍ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಸಾಧ್ಯವಾಗಲಿಲ್ಲ. ಅಂತಿಮವಾಗಿ ಕೆಕೆಆರ್ ನಿಗದಿತ 20 ಓವರ್‍ಗಳಿಗೆ 9 ವಿಕೆಟ್‍ಗಳನ್ನು ಕಳೆದುಕೊಂಡು 112 ರನ್‍ಗಳಿಗೆ ಸೀಮಿತವಾಯಿತು. ಈ ಪಂದ್ಯದಲ್ಲೂ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಕ್ರಿಸ್ ಮೋರಿಸ್ ಎರಡು ವಿಕೆಟ್‍ಗಳನ್ನು ಕಬಳಿಸಿದರು.ಪಂದ್ಯದ ಬಳಿಕ ಸ್ಟಾರ್‍ಸ್ಪೋಟ್ರ್ಸ್ ಜತೆ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ,” ಬಲಿಷ್ಠ ತಂಡದ ಎದುರು ಇದು ನಮ್ಮ ಪ್ರಚಂಡ ಗೆಲುವು. ಬಿಡುವಿಲ್ಲದ ಈ ವಾರವನ್ನು ನಾವು ಅತ್ಯುತ್ತಮವಾಗಿ ಆರಂಭಿಸಿದ್ದೇವೆ. ಕ್ರಿಸ್ ಮೋರಿಸ್ ಮರಳಿದ ಬಳಿಕ ನಮ್ಮ ಬೌಲಿಂಗ್ ವಿಭಾಗ ಇನ್ನಷ್ಟು ಬಲಿಷ್ಠವಾಗಿದೆ. ಒಟ್ಟಾರೆ ನಾವು ತುಂಬಾ ಖುಷಿಯಾಗಿದ್ದೇವೆ. ಈ ಪಿಚ್ ಒಣಗಿತ್ತು. ಇಲ್ಲಿನ ವಿಕೆಟ್‍ನಲ್ಲಿ ತೇವ ಇರುವುದಿಲ್ಲ ಎಂದು ನಾವು ಮೊದಲೇ ಭಾವಿಸಿದ್ದೆವು,” ಎಂದು ವಿರಾಟ್ ಕೊಹ್ಲಿ ಹೇಳಿದರು.

ಮೊದಲು ಬ್ಯಾಟಿಂಗ್ ಮಾಡಿದ ಆರ್‍ಸಿಬಿ, ನಿಗದಿತ 20 ಓವರ್‍ಗಳಿಗೆ ಎರಡು ವಿಕೆಟ್‍ಗಳ ನಷ್ಟಕ್ಕೆ 194 ರನ್‍ಗಳನ್ನು ಗಳಿಸಿತು. ಎಬಿ ಡಿವಿಲಿಯರ್ಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಅವರು ಕೇವಲ 33 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 5 ಬೌಂಡರಿ ನೆರವಿನೊಂದಿಗೆ ಅಜೇಯ 73 ರನ್‍ಗಳನ್ನು ಸಿಡಿಸಿದರು. ಇವರಿಗೆ ಸಾಥ್ ನೀಡಿದ ವಿರಾಟ್ ಕೊಹ್ಲಿ 33 ರನ್‍ಗಳನ್ನು ಗಳಿಸಿದರು.ವಿರಾಟ್ ಕೊಹ್ಲಿಯವರು ಎಬಿ ಡಿ ವಿಲಿಯರ್ಸ್ ಅವರ ‘ಅಸಾಧಾರಣ ಬ್ಯಾಟಿಂಗ್’ ಅನ್ನು ಶ್ಲಾಘಿಸಿದರು ಹಾಗೂ ನಾವು 20 ಓವರ್‍ಗಳಿಗೆ 194 ರನ್‍ಗಳನ್ನು ದಾಖಲಿಸಲು ಆಫ್ರಿಕಾ ಬ್ಯಾಟ್ಸ್‍ಮನ್ ಕಾರಣ ಎಂಬುದನ್ನು ಉಲ್ಲೇಖಿಸಿದ್ದಾರೆ.

“ಇದು ನಂಬಲು ಸಾಧ್ಯವಾಗದೇ ಇದದ್ದು. ನಾನು ಆರಂಭದಲ್ಲಿ ಸ್ವಲ್ಪ ಹೆಚ್ಚಿನ ಎಸೆತಗಳನ್ನು ಪಡೆದುಕೊಂಡೆ, ನಂತರ ಹೊಡೆಯಲು ಆರಂಭಿಸಿದೆ. ಆದರೆ, ಅವರು(ಎಬಿಡಿ) ಮೂರನೇ ಎಸೆತದಲ್ಲಿಯೇ ಹೊಡೆಯಲು ಆರಂಭಿಸಿದರು ಹಾಗೂ ಆಡಲು ಚೆನ್ನಾಗಿದೆ ಎಂದು ಅವರು ಹೇಳಿದ್ದರು. ಬೇರೆ ಪಂದ್ಯಗಳಲ್ಲಿ ಸಾಕಷ್ಟು ಬ್ಯಾಟ್ಸ್‍ಮನ್‍ಗಳು ಈ ಅಂಗಳದಲ್ಲಿ ಏನು ಮಾಡಿದ್ದಾರೆ ಎಂಬುದನ್ನು ನೋಡಿ. ಆದರೆ ಎಬಿ ಡಿವಿಲಿಯರ್ಸ್ ತಾನು ಮಾಡುವುದನ್ನೇ ಮಾಡುತ್ತಾರೆ,” ಎಂದು ಕೊಹ್ಲಿ ಸಹ ಆಟಗಾರನನ್ನು ಶ್ಲಾಘಿಸಿದರು.”ಇದು ಅಸಾಧಾರಣವಾದ ಆಟ. ನಾವು 165 ರಿಂದ 165 ರನ್‍ಗಳಿಗೆ ನೋಡುತ್ತಿದ್ದೆವು. ಇಂತಹ ಆಟವಾಡಿ 195 ರನ್‍ಗಳ ಗುರಿ ನೀಡಲು ನೆರವಾದ ಎಬಿ ಡಿವಿಲಿಯರ್ಸ್‍ಗೆ ಧನ್ಯವಾದಗಳು. ಅವರೊಂದಿಗೆ ಅದ್ಭುತ ಜತೆಯಾಟವಾಡಿದ್ದು, ತುಂಬಾ ಖುಷಿ ನೀಡಿದೆ. ಅವರ ಆಟ ಕಣ್ತುಂಬಿಸಿಕೊಳ್ಳಲು ನಾನು ಉತ್ತಮ ಜಾಗದಲ್ಲಿದ್ದೇನೆ,” ಎಂದು ವಿರಾಟ್ ಕೊಹ್ಲಿ ಗುಣಗಾನ ಮಾಡಿದರು.ಕೆಕೆಆರ್ ವಿರುದ್ಧ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಯಿಂಟ್ಸ್ ಟೇಬಲ್‍ನಲ್ಲಿ ಮೂರನೇ ಸ್ಥಾನಕ್ಕೇರಿದೆ. ವಿರಾಟ್ ಕೊಹ್ಲಿ ನಾಯಕತ್ವದ ಆರ್‍ಸಿಬಿ ಅ.15 ರಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೆಣಸಲಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter