ಗೆಲುವಿನ ಬೆನ್ನಲ್ಲೆ ಅಭಿಮಾನಿಗಳಿಂದ ಮೀಮ್ಸ್‍ಗೆ ಒಳಗಾದ ಆರ್‍ಸಿಬಿ

Share on facebook
Share on twitter
Share on linkedin
Share on whatsapp
Share on email

ಶಾರ್ಜಾ:ಸಂಘಟಿತ ಹೋರಾಟ ನಡೆಸಿ ಸೋಮವಾರ ರಾತ್ರಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 82 ರನ್‍ಗಳ ಭರ್ಜರಿ ಜಯ ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಅದ್ಭುತ ಗೆಲುವಿನ ಬಳಿಕ ಆರ್‍ಸಿಬಿ ತಂಡ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಹಾಸ್ಯಭರಿತ ಮೀಮ್ಸ್‍ಗೆ ಗುರಿಯಾಗಿದೆ.ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಪಾರಮ್ಯ ಮೆರೆಯುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸತತ ಎರಡನೇಗೆಲುವು ಸಾಧಿಸಿತು. ಟೂರ್ನಿಯ ಆರಂಭದಲ್ಲಿ ತಂಡದಲ್ಲಿ ಡೆತ್ ಬೌಲಿಂಗ್ ಸಮಸ್ಯೆ ಇದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ತಂಡವು ಅತ್ಯುತ್ತಮ ಸಂಯೋಜನೆಯೊಂದಿಗೆ ಕಾಣುತ್ತಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ, ದೇವದತ್ ಪಡಿಕ್ಕಲ್ ಹಾಗೂ ಆರೋನ್ ಫಿಂಚ್ ಜೋಡಿ ಮೊದಲನೇ ವಿಕೆಟ್‍ಗೆ 67 ರನ್‍ಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಆರಂಭ ನೀಡಿತು. ಆರಂಭಿಕ ಜೋಡಿ ವಿಕೆಟ್ ಒಪ್ಪಿಸಿದ ಬಳಿಕ ಜತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಜೋಡಿ ಸ್ಪೋಟಕ ಶತಕದ ಜತೆಯಾಟವಾಡಿತು. ಕಳೆದ ಪಂದ್ಯದಲ್ಲಿ ಬೇಗ ವಿಕೆಟ್ ಒಪ್ಪಿಸಿದ್ದ ಡಿವಿಲಿಯರ್ಸ್ ಈ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದರು. 33 ಎಸೆತಗಳಲ್ಲಿ 73 ರನ್‍ಗಳನ್ನು ಗಳಿಸಿದರು.195 ರನ್‍ಗಳ ಗುರಿ ಬೆನ್ನತ್ತಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕೆ ಇಳಿದ ಟಾಮ್ ಬ್ಯಾಂಟನ್ ಹಾಗೂ ಶುಭಮನ್ ಗಿಲ್ ಜೋಡಿ ಬಹುಬೇಗ ಬೇರ್ಪಟ್ಟಿತು. ಆರ್‍ಸಿಬಿ ಬೌಲರ್‍ಗಳು ಆರಂಭದಿಂದಲೂ ಅದ್ಭುತವಾಗಿ ಬೌಲಿಂಗ್ ಮಾಡಿದರು. ಇದರಿಂದ ಕೆಕೆಆರ್ ಬ್ಯಾಟ್ಸ್‍ಮನ್‍ಗಳು ಪುಟಿದೇಳುವಲ್ಲಿ ವಿಫಲರಾದರು. ಅಂತಿಮವಾಗಿ ಕೋಲ್ಕತಾ, ನಿಗದಿತ 20 ಓವರ್‍ಗಳಿಗೆ 9 ವಿಕೆಟ್‍ಗಳನ್ನು ಕಳೆದುಕೊಂಡು 112 ರನ್‍ಗಳಿಗೆ ಸೀಮಿತವಾಯಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ಸಾಧಿಸಿದ್ದರಿಂದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದೆ. ಗೆಲುವು ಸಾಧಿಸಿರುವ ವಿರಾಟ್ ಕೊಹ್ಲಿ ಹಾಗೂ ಸಹ ಆಟಗಾರರನ್ನು ಶ್ಲಾಘಿಸುವ ಹಾಸ್ಯಭರಿತ ಮೀಮ್ಸ್‍ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಕೆಆರ್ ವಿರುದ್ಧ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಯಿಂಟ್ಸ್ ಟೇಬಲ್‍ನಲ್ಲಿ ಮೂರನೇ ಸ್ಥಾನಕ್ಕೇರಿದೆ. ಉತ್ತಮ ರನ್‍ರೇಟ್‍ನೊಂದಿಗೆ ಮುಂಬೈ ಇಂಡಿಯನ್ಸ್ ಅಗ್ರ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇದೆ. ವಿರಾಟ್ ಕೊಹ್ಲಿ ನಾಯಕತ್ವದ ಆರ್‍ಸಿಬಿ ಅ.15 ರಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೆಣಸಲಿದೆ. ಕೋಲ್ಕತಾ ನೈಟ್ ರೈಡರ್ಸ್, ಅ.16 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಕಾದಾಟ ನಡೆಸಲಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter