1 ರೂಪಾಯಿ ಜಮೆ: ಸುಪ್ರೀಂಕೋರ್ಟ್ ವಿಧಿಸಿದ ದಂಡ ಪಾವತಿಸಿದ ಪ್ರಶಾಂತ್ ಭೂಷಣ್ , ತೀರ್ಪುಗೆ ಮೇಲ್ಮನವಿ

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ನ್ಯಾಯಾಲಯ ‘ನಿಂದನೆ’ ಪ್ರಕರಣದಲ್ಲಿ ತಪ್ಪಿತಸ್ಥ ರಾಗಿರುವ ಪ್ರಮುಖ ವಕೀಲ ಪ್ರಶಾಂತ್ ಭೂಷಣ್ ಸೋಮವಾರ ಸುಪ್ರೀಂ ಕೋರ್ಟ್ ಗೆ ದಂಡ ಪಾವತಿಸಿದ್ದಾರೆ.


ದಂಡ ಪಾವತಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ತಾವು ನ್ಯಾಯಾಲಯ ತೀರ್ಪನ್ನು ಸ್ವಾಗತಿಸುವುದಿಲ್ಲ. ನ್ಯಾಯಾಲಯ ನಿಂದನೆ ಗಾಗಿ ತಮಗೆ ಒಂದು ರೂಪಾಯಿ ದಂಡ ವಿಧಿಸಿರುವ ನ್ಯಾಯಾಲಯದ ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದರು.
ದಂಡವನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದರಿಂದ ತಾವು ತೀರ್ಪನ್ನು ಗೌರವಿಸಿದಂತೆ ಅಲ್ಲ ಎಂದು ಸ್ಪಷ್ಟಪಡಿಸಿದರು. ತನಗಿರುವ ಹಕ್ಕಿನ ಪ್ರಕಾರ ತೀರ್ಪನ್ನು ಮರು ಪರಿಶೀಲಿಸಲು ಕೋರಿದ್ದೇನೆ ಎಂದು ಹೇಳಿದರು. ತಮ್ಮ ಅರ್ಜಿಯನ್ನು ಮೊದಲಗಿಂತಲೂ ವಿಸ್ತೃತ. ಭಿನ್ನ ನ್ಯಾಯಪೀಠ ವಿಚಾರಣೆ ನಡೆಸಲಿ ಎಂದು ಮನವಿ ಮಾಡುತ್ತೇನೆ ಎಂದರು.

ದೆಹಲಿ ಗಲಭೆಗೆ ಸಂಬಂಧಿಸಿದಂತೆ ಜೆಎನ್ಯು ವಿದ್ಯಾರ್ಥಿ ಉಮರ್ ಖಾಲಿದ್ ಅವರನ್ನು ಬಂಧಿಸಿರುವುದನ್ನು ಅವರು ಟೀಕಿಸಿದರು. ಸುಪ್ರೀಂ ಕೋರ್ಟ್ ಹಾಗೂ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅವರನ್ನು ವಿರ್ಮಶಿಸಿ ಟ್ವೀಟ್ ಮಾಡಿದ್ದರು. ಇವುಗಳನ್ನು ‘ನ್ಯಾಯಾಲಯ ನಿಂದನೆ’ ಸುಪ್ರೀಂ ಕೋರ್ಟ್ ಪರಿಗಣಿಸಿ, ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿ ಪ್ರಶಾಂತ್ ಭೂಷಣ್ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು.


ಪ್ರಶಾಂತ್ ಭೂಷಣ್ ಅವರಿಗೆ ಸುಪ್ರೀಂ ಕೋರ್ಟ್ ಒಂದು ರೂಪಾಯಿ ದಂಡ ವಿಧಿಸಿ ಆಗಸ್ಟ್ 31 ರಂದು ತೀರ್ಪು ನೀಡಿತ್ತು ಸೆಪ್ಟೆಂಬರ್ 15 ರೊಳಗೆ ದಂಡ ಪಾವತಿಸಲು ಆದೇಶಿಸಿತ್ತು. ದಂಡ ಪಾವತಿಸಲು ವಿಫಲವಾದರೆ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ ವಕೀಲ ವೃತ್ತಿಯಿಂದ ಮೂರು ವರ್ಷಗಳ ನಿರ್ಬಂಧ ವಿಧಿಸಲಾಗಿವುದು ಎಂದು ಆದೇಶದಲ್ಲಿ ತಿಳಿಸಿತ್ತು. ಈ ಆದೇಶದಂತೆ ಅವರು ಇಂದು ದಂಡ ಪಾವತಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter