ಟಕ್ಕರ್ ಹಾಡು, ಟೀಸರ್‍ಗೆ ದರ್ಶನ್ ಶುಭ ಹಾರೈಕೆ

ಟಕ್ಕರ್ ಹಾಡು, ಟೀಸರ್‍ಗೆ ದರ್ಶನ್ ಶುಭ ಹಾರೈಕೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುಟುಂಬದ ಹುಡುಗ ಮನೋಜ್ ಕುಮಾರ್ ಮೊದಲಬಾರಿ ನಾಯಕನಾಗಿ ನಟಿಸಿರುವ ‘ಟಕ್ಕರ್’ ಚಿತ್ರದ ಟೀಸರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ಚಲನಚಿತ್ರ ಕಲಾವಿದರ ಸಂಘದಲ್ಲಿ ನೆರವೇರಿತು. ನಟ ದರ್ಶನ್ ಮುಖ್ಯ ಅತಿಥಿಯಾಗಿ ಆಗಮಿಸಿ ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆಗೊಳಿಸಿ, ಮನೋಜ್ ಬೇರೆ ಯಾರೂ ಅಲ್ಲ. ನನ್ನ ಅಕ್ಕನ ಮಗ. ನಮ್ಮ ದೊಡ್ಡಪ್ಪನ ಮೊಮ್ಮಗ. ನನ್ನ ಜೊತೆ ‘ಅಂಬರೀಶ’ ಹಾಗೂ ‘ಚಕ್ರವರ್ತಿ’ ಚಿತ್ರಗಳಲ್ಲಿ ಆ್ಯಕ್ಟ್ ಮಾಡಿದ್ದಾನೆ. ಸಿನಿಮಾರಂಗದಲ್ಲಿ ಸಾಕಷ್ಟು ಕಷ್ಟ ಪಟ್ಟಿದ್ದಾನೆ. ಈ ಸಿನಿಮಾದಲ್ಲಿ ಒಳ್ಳೇ ಕಂಟೆಂಟ್ ಇದೆ. ಟೀಸರ್‍ನಲ್ಲಿ ಎಲ್ಲರ ಶ್ರಮ ಎದ್ದು ಕಾಣುತ್ತಿದೆ.

ಈ ಚಿತ್ರದ ನಿರ್ಮಾಪಕರಾದ ನಾಗೇಶ್ ಅವರು ಸಿನಿಮಾಗಳ ಬಗ್ಗೆ ಅಪಾರವಾದ ಪ್ರೀತಿ ಹೊಂದಿದ್ದಾರೆ. ಕೊರಿಯೋಗ್ರಾಫರ್ ಮೋಹನ್ ಕಸದಲ್ಲೂ ರಸ ತೆಗೆಯೋ ವ್ಯಕ್ತಿ. ಮಲೇಶಿಯಾದಲ್ಲಿ ಶೂಟ್ ಮಾಡಿರುವ ಡ್ಯೂಯೆಟ್ ಸಾಂಗ್ ಅನ್ನು ಬರೀ ಎರಡು ದಿನಗಳಲ್ಲಿ ಎಷ್ಟು ಅದ್ಭುತವಾಗಿ ಮಾಡಿಕೊಟ್ಟಿದ್ದಾನೆ. ಮನೋಜ್ ಕೂಡಾ ಸ್ಕ್ರೀನ್ ಮೇಲೆ ತುಂಬಾ ಚನ್ನಾಗಿ ಕಾಣುತ್ತಿದ್ದಾನೆ’ ಎಂದು ಶುಭ ಹಾರೈಸಿದರು. ಇದೇ ಸಂದರ್ಭಸಲ್ಲಿ ನಿರ್ಮಾಪಕರು ಹುಟ್ಟು ಹಾಕಿರುವ ಎಸ್.ಎಲ್.ಎನ್ ಆಡಿಯೋ ಕಂಪನಿಯನ್ನು ದರ್ಶನ್ ಉದ್ಘಾಟನೆ ಮಾಡಿದರು. ಕೆ.ಎನ್.ನಾಗೇಶ್ ಕೋಗಿಲು ಅವರ ನಿರ್ಮಾಣದ ಈ ಚಿತ್ರಕ್ಕೆ ವಿ.ರಘುಶಾಸ್ತ್ರಿ ಆ್ಯP್ಷÀನ್-ಕಟ್ ಹೇಳಿz್ದÁರೆ. ಮನೋಜ್‍ಗೆ ನಾಯಕಿಯಾಗಿ ಪುಟ್ಟಗೌರಿ ಮದುವೆ ಖ್ಯಾತಿಯ ರಂಜನಿ ರಾಘವನ್ ಕಾಣಿಸಿಕೊಂಡಿz್ದÁರೆ.

ಕಾರ್ಯಕ್ರಮದಲ್ಲಿ ನಿರ್ದೇಶಕ ರಘುಶಾಸ್ತ್ರಿ ಮಾತನಾಡಿರನ್ ಆ್ಯಂಟನಿ’ ನಂತರ ನಾನು ರೆಡಿ ಮಾಡಿಕೊಂಡಿದ್ದ ಕಥೆಯಿದು. ಚಿತ್ರಕ್ಕೆ 65 ದಿನಗಳ ಕಾಲ ಮೈಸೂರು, ಬೆಂಗಳೂರು ಮತ್ತು ಮಲೇಶಿಯಾದಲ್ಲಿ ಮೂರು ಷೆಡ್ಯೂಲ್‍ನಲ್ಲಿ ಚಿತ್ರೀಕರಣ ಮಾಡಲಾಗಿದೆ. ನಮ್ಮ ಮನೆಯ ಹೆಣ್ಣುಮಕ್ಕಳು ನಮ್ಮ ಮನೆಯಲ್ಲೇ ಸೇಫ್ ಆಗಿಲ್ಲ ಎನ್ನುವುದೇ ಈ ಸಿನಿಮಾದ ಕಾನ್ಸೆಪ್ಟ್. ಸೈಬರ್ ಕ್ರೈಂ ಹಿನ್ನೆಲೆಯಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ಕದ್ರಿ ಮಣಿಕಾಂತ್ ಅವರು ಚಿತ್ರಕ್ಕೆ ಪಕ್ಕಾ ಮಾಸ್ ಮತ್ತು ಮೆಲೋಡಿ ಟ್ಯೂನ್ ಕೊಟ್ಟಿದ್ದಾರೆ. ವಿಲನ್ ಆಗಿ ಭಜರಂಗಿ ಖ್ಯಾತಿಯ ಸೌರವ್ ಲೋಕಿ ಕಾಣಿಸಿಕೊಂಡಿz್ದÁರೆ. 30 ನಿಮಿಷಗಳ ಗ್ರಾಫಿಕ್ಸ್ ಕೂಡ ಇದರಲ್ಲಿ ಹೈಲೈಟ್ ಆಗಿರಲಿದೆ. ಟಕ್ಕರ್ ಎಂದರೆ ಪಾಸಿಟಿವ್ ಹಾಗೂ ನೆಗಟೀವ್ ಎರಡೂ ಅರ್ಥವಿದ್ದು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಸಂಘರ್ಷಣೆ ಈ ಚಿತ್ರದಲ್ಲಿದೆ. ಲವ್ ಸ್ಟೋರಿ ಜೊತೆಗೆ ಆ್ಯP್ಷÀನ್ ಪ್ಯಾಕ್ ಇರುವ ಚಿತ್ರ’ ಎನ್ನುವರು.

ನಿರ್ಮಾಪಕ ನಾಗೇಶ್ ಕೋಗಿಲು ಮಾತನಾಡಿ “ಹುಲಿರಾಯ’ ನಂತರ ನಮ್ಮ ಬ್ಯಾನರ್‍ನ ಎರಡನೇ ಚಿತ್ರ. ಸೋಷಿಯಲ್ ಮೀಡಿಯಾಗಳಿಂದಾಗುವ ಅವಗಡಗಳ ಬಗ್ಗೆ ಚಿತ್ರದಲ್ಲಿ ಹೇಳಿz್ದÉೀವೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿ. ನಾಗೇಂದ್ರ ಪ್ರಸಾದ್ ಎರಡು ಮತ್ತು ನಿರ್ದೇಶಕರು ಒಂದು ಹಾಡಿಗೆ ಸಾಹಿತ್ಯ ಬರೆದಿದ್ದಾರೆ’ ಎಂದರು. ನಂತರ ನಾಯಕ ಮನೋಜ್ ಕುಮಾರ್ ಮಾತನಾಡಿ, ‘ಇದೊಂದು ನಾರ್ಮಲ್ ಕಥೆ. ಸೈಬರ್ ಕ್ರೈಮ್ ವಿಷಯ ಇಟ್ಟುಕೊಂಡು ನಿರ್ದೇಶಕರು ಕಥೆ ಮಾಡಿದ್ದಾರೆ. ಕಮರ್ಷಿಯಲ್ ಆಗಿ ಚಿತ್ರವನ್ನು ಹೇಳಬೇಕೆಂದು ಐದು ಪೈಟ್ಸ್ ಇಟ್ಟಿz್ದÉೀವೆ. ಈ ಚಿತ್ರಕ್ಕೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರತೀ ಹಂತದಲ್ಲೂ ದರ್ಶನ್ ಮತ್ತು ದಿನಕರ್ ಅವರು ಮಾರ್ಗದರ್ಶನ ನಿಡಿದ್ದು, ಟಕ್ಕರ್ ತಂಡ ಅಭಾರಿಯಾಗಿದೆ’ ಎಂದರು.

ನಾಯಕಿ ರಂಜನಿ ರಾಘವನ್ ‘ಇದು ನನ್ನ ಎರಡನೇ ಚಿತ್ರ, ಎಂಬಿಬಿಎಸ್ ಓದುತ್ತಿರುವ ಮೆಡಿಕಲ್ ಸ್ಟೂಡೆಂಟ್ ಆಗಿ ನಾನು ಕಾಣಿಸಿಕೊಂಡಿದ್ದೇನೆ. ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ’ ಎಂದಷ್ಟೇ ಹೇಳಿದರು. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮಾತನಾಡಿ ‘ನಾನು ಕಮರ್ಷಿಯಲ್ ಸಿನಿಮಾ ಮಾಡಬೇಕೆಂದು ಕಾಯುತ್ತಿದ್ದಾಗ ರಘು ಈ ಸಿನಿಮಾ ಮ್ಯೂಸಿಕ್ ಮಾಡಲು ಕರೆದರು. ರಘು ಜೊತೆ ಇದು ಎರಡನೇ ಸಿನಿಮಾ. ಹೀರೋ ಇಂಟ್ರಡಕ್ಷನ್ ಸಾಂಗ್‍ನ್ನು ಶಶಾಂಕ್ ಶೇಷಗಿರಿ ಅದ್ಭುತವಾಗಿ ಹಾಡಿದ್ದಾರೆ. ಡ್ಯುಯೆಟ್ ಹಾಡನ್ನು ವಿಜಯ ಪ್ರಕಾಶ್ ಮತ್ತು ಅನುರಾಧ ಭಟ್ ಹಾಗೂ ಮೋಟಿವೇಷನಲ್ ಸಾಂಗ್ ಅನ್ನು ಸಂಚಿತ್ ಹೆಗ್ಡೆ ಹಾಡಿದ್ದಾರೆ’ ಎಂದು ಮಾಹಿತಿ ನೀಡಿದರು. ಇನ್ನು ಖಳನಾಯಕ ಭÀಜರಂಗಿ ಲೋಕಿ, ಸಾಹಿತಿ ವಿ.ನಾಗೇಂದ್ರ ಪ್ರಸಾದ್, ಛಾಯಾಗ್ರಾಹಕ ವಿಲಿಯಮ್ ಡೇವಿಡ್ ಅಶ್ವಥ್ ಗುರೂಜಿ, ಕೆಪಿ.ನಾಗರಾಜ್, ಅರವಿಂದ್ ಕೌಶಿಕ್, ಗಾಯಕ ಶಶಾಂಕ್ ಶೇಷಗಿರಿ ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

ಯ’ ನಂತರ ನಮ್ಮ ಬ್ಯಾನರ್‍ನ ಎರಡನೇ ಚಿತ್ರ. ಸೋಷಿಯಲ್ ಮೀಡಿಯಾಗಳಿಂದಾಗುವ ಅವಗಡಗಳ ಬಗ್ಗೆ ಚಿತ್ರದಲ್ಲಿ ಹೇಳಿz್ದÉೀವೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿ. ನಾಗೇಂದ್ರ ಪ್ರಸಾದ್ ಎರಡು ಮತ್ತು ನಿರ್ದೇಶಕರು ಒಂದು ಹಾಡಿಗೆ ಸಾಹಿತ್ಯ ಬರೆದಿದ್ದಾರೆ’ ಎಂದರು. ನಂತರ ನಾಯಕ ಮನೋಜ್ ಕುಮಾರ್ ಮಾತನಾಡಿ, ‘ಇದೊಂದು ನಾರ್ಮಲ್ ಕಥೆ. ಸೈಬರ್ ಕ್ರೈಮ್ ವಿಷಯ ಇಟ್ಟುಕೊಂಡು ನಿರ್ದೇಶಕರು ಕಥೆ ಮಾಡಿದ್ದಾರೆ. ಕಮರ್ಷಿಯಲ್ ಆಗಿ ಚಿತ್ರವನ್ನು ಹೇಳಬೇಕೆಂದು ಐದು ಪೈಟ್ಸ್ ಇಟ್ಟಿz್ದÉೀವೆ. ಈ ಚಿತ್ರಕ್ಕೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರತೀ ಹಂತದಲ್ಲೂ ದರ್ಶನ್ ಮತ್ತು ದಿನಕರ್ ಅವರು ಮಾರ್ಗದರ್ಶನ ನಿಡಿದ್ದು, ಟಕ್ಕರ್ ತಂಡ ಅಭಾರಿಯಾಗಿದೆ’ ಎಂದರು.

ನಾಯಕಿ ರಂಜನಿ ರಾಘವನ್ ‘ಇದು ನನ್ನ ಎರಡನೇ ಚಿತ್ರ, ಎಂಬಿಬಿಎಸ್ ಓದುತ್ತಿರುವ ಮೆಡಿಕಲ್ ಸ್ಟೂಡೆಂಟ್ ಆಗಿ ನಾನು ಕಾಣಿಸಿಕೊಂಡಿದ್ದೇನೆ. ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ’ ಎಂದಷ್ಟೇ ಹೇಳಿದರು. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮಾತನಾಡಿ ‘ನಾನು ಕಮರ್ಷಿಯಲ್ ಸಿನಿಮಾ ಮಾಡಬೇಕೆಂದು ಕಾಯುತ್ತಿದ್ದಾಗ ರಘು ಈ ಸಿನಿಮಾ ಮ್ಯೂಸಿಕ್ ಮಾಡಲು ಕರೆದರು. ರಘು ಜೊತೆ ಇದು ಎರಡನೇ ಸಿನಿಮಾ. ಹೀರೋ ಇಂಟ್ರಡಕ್ಷನ್ ಸಾಂಗ್‍ನ್ನು ಶಶಾಂಕ್ ಶೇಷಗಿರಿ ಅದ್ಭುತವಾಗಿ ಹಾಡಿದ್ದಾರೆ. ಡ್ಯುಯೆಟ್ ಹಾಡನ್ನು ವಿಜಯ ಪ್ರಕಾಶ್ ಮತ್ತು ಅನುರಾಧ ಭಟ್ ಹಾಗೂ ಮೋಟಿವೇಷನಲ್ ಸಾಂಗ್ ಅನ್ನು ಸಂಚಿತ್ ಹೆಗ್ಡೆ ಹಾಡಿದ್ದಾರೆ’ ಎಂದು ಮಾಹಿತಿ ನೀಡಿದರು. ಇನ್ನು ಖಳನಾಯಕ ಭÀಜರಂಗಿ ಲೋಕಿ, ಸಾಹಿತಿ ವಿ.ನಾಗೇಂದ್ರ ಪ್ರಸಾದ್, ಛಾಯಾಗ್ರಾಹಕ ವಿಲಿಯಮ್ ಡೇವಿಡ್ ಅಶ್ವಥ್ ಗುರೂಜಿ, ಕೆಪಿ.ನಾಗರಾಜ್, ಅರವಿಂದ್ ಕೌಶಿಕ್, ಗಾಯಕ ಶಶಾಂಕ್ ಶೇಷಗಿರಿ ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.