ರಮೇಶ್ ಅರವಿಂದ್ ನಾಯಕರಾಗಿ ಅಭಿನಯಿಸಿರುವ 101ನೇ ಸಿನಿಮಾ ‘ಶಿವಾಜಿ ಸುರತ್ಕಲ್’ ದಿ ಕೇಸ್ ಆಫ್ ರಣಗಿರಿ ರಹಸ್ಯ. ಈ ಚಿತ್ರದ ಟೀಸರ್ನ್ನು ಚಿತ್ರತಂಡ ರಮೇಶ್ ಅವರ ಹುಟ್ಟುಹಬ್ಬದಂದು (ಸೆ.10) ಬಿಡುಗಡೆ ಮಾಡಿದೆ. ಟೀಸರ್ಗೆ ಅಂತರ್ಜಾಲದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು, ಸಿನಿಮಾದಲ್ಲಿ ರಮೇಶ್ ವಿಶೇಷವಾದ ಪಾತ್ರ ನಿರ್ವಯಿಸಿರುವುದು ಗೊತ್ತಾಗುತ್ತಿದೆ. ‘ಶಿವಾಜಿ ಸುರತ್ಕಲ್’ ಸಿನಿಮಾ ಬಗ್ಗೆ ಹೇಳುವುದಾದರೆ, ಇದೊಂದು ಮರ್ಡರ್ ತನಿಖಾ ಸಿನಿಮಾ. ಶಿವಾಜಿ ಕ್ರೈಮ್ ಬ್ರಾಂಚ್ನ ಸಮರ್ಥ ಪತ್ತೇದಾರಿ ಡಿಡೆಕ್ಟಿವ್. ಇವನು ಕ್ಲಿಷ್ಟಕರವಾದ ಕ್ರಿಮಿನಲ್ 100 ಕೇಸ್ಗಳನ್ನು ತನ್ನದೇ ಆದ ರೀತಿಯಲ್ಲಿ ಪರಿಹರಿಸಿರುತ್ತಾನೆ. ಶಿವಾಜಿಗೆ ಚಾಲೆಂಜ್ ಆದದ್ದು, 101ನೇ ಕೇಸ್. ಇದು ರಣಗಿರಿ ಎಂಬಲ್ಲಿ ನಡೆದಿದ್ದು, ಅವನ ನಂಬಿಕೆಯ ಅಸ್ತಿಭಾರವನ್ನೇ ಈ ಕೇಸ್ ಅಲುಗಾಡಿಸಿರುತ್ತೆ. ಈ ಕೇಸ್ನ್ನು ಶಿವಾಜಿ ಹೇಗೆ ಪರಿಹರಿಸುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಜೊತೆಗೆ ಪತ್ತೇದಾರಿಯ ಒಳಗಿರುವ ನೋವು, ನಲಿವುಗಳ ಅನಾವರಣ ಕೂಡ ಚಿತ್ರದಲ್ಲಿದೆ.
ಸಿನಿಮಾ ಬಗ್ಗೆ ಮಾತನಾಡುವ ರಮೇಶ್ ಅರವಿಂದ್ ‘ಒಳ್ಳೆ ಮನರಂಜನೆ ಕೊಡೊದು ನನ್ನ ಉದ್ದೇಶ. ಇಲ್ಲಿಯವರೇಗೆ ಮಾಡಿರದ ಪಾತ್ರ ಮಾಡಿದ್ದೇನೆ. ಇದು ನನ್ನ 101ನೇ ಸಿನಿಮಾ ಆಗಿದ್ದು ಹೆಮ್ಮೆ ಇದೆ. ಬಹಳ ವೇಗವಾಗಿ ಮಾತನಾಡಬಲ್ಲ, ವೇಗವಾಗಿ ಯೋಚನೆ ಮಾಡಬಲ್ಲ ಕ್ಯಾರೆಕ್ಟರ್ ಅದು. ಬಹಳ ಶಕ್ತಿಯುತ ಪಾತ್ರ. ಈ ಸಮಯಕ್ಕೆ ಇಂತ ಪಾತ್ರ ನನಗೆ ಬೆಕಾಗಿತ್ತು. ನೀವು ಎಂದು ನೋಡಿರದ ರಮೇಶ್ನನ್ನು ಇಲ್ಲಿ ಕಾಣುತ್ತಿರಿ. ಗಡ್ಡ, ಡೈಲಾಗ್, ಕ್ಯಾರೆಕ್ಟರ್ ಎಲ್ಲಾ ಡಿಪರೆಂಟ್ ಆಗಿದೆ. ನಂಗೆ ತುಂಬಾ ಇಷ್ಟ ಮತ್ತು ಖುಷಿ ಕೊಟ್ಟ ಸಿನಿಮಾ ಇದು’ ಎನ್ನುವರು. ಇದೇ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಅನೂಪ್ ಗೌಡ ಮಾತನಾಡಿ ‘ನಾನೀಗ ಇಂಜಿನಿಯರ್ ಮುಗಿಸಿದ್ದು, ಮೂಲತಃ ಥಿಯೇಟರ್ ಕಲಾವಿದ ಹಾಗೂ ಡ್ಯಾನ್ಸ್ರ್. ರಮೇಶ್ ಸರ್ ಚಿತ್ರವೊಂದಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಅವರಿಗೆ ಈ ಸಿನಿಮಾ ನಿರ್ಮಾಣ ಮಾಡಿದ್ದು, ಚಾಲೆಂಜ್ ಆಗಿತ್ತು. ಅಂದುಕೊಂಡಂತೆ ನಿರ್ದೇಶಕರು ಸಿನಿಮಾ ಮಾಡಿದ್ದಾರೆ. ಜೊತೆಗೆ ನನ್ನನ್ನು ನಿರ್ದೇಶಕರು ಎಲ್ಲಾ ವಿಭಾಗದಲ್ಲೂ ಬಳಸಿಕೊಂಡಿದ್ದಾರೆ. ರಮೇಶ್ ಸರ್ ಟೀಮ್ ಜೊತೆ ಚನ್ನಾಗಿ ಬೆರೆಯುತ್ತಿದ್ದರು. ಅವರು ತುಂಬಾ ಹಂಬಲ ವ್ಯಕ್ತಿ’ ಎಂದು ಹೇಳಿದರು.
ಇನ್ನು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ ಆರೋಹಿ ನಾರಾಯಣ್ ಚಿತ್ರದ ಅನುಭವ ಹಂಚಿಕೊಂಡರು. ಇವರು ಇದೀಗ ‘ಭಿಮಸೇನ ನಳ ಮಹಾರಾಜ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ಮನೋವೈದ್ಯೆಯ ಪಾತ್ರ ಮಾಡಿದ್ದಾರೆ. ಅಂದಂಗೆ ರಮೇಶ್ ಪತ್ನಿಯಾಗಿ ನಾಯಕಿ ಪಾತ್ರ ಮಾಡಿದ್ದಾರೆ ರಾಧಿಕಾ ನಾರಾಯಣ್. ‘ರಮೇಶ್ ಅವರ 101ನೇ ಚಿತ್ರದಲ್ಲಿ ನಾನು ನಟಿಸಿರೋದು ತುಂಬಾ ಖುಷಿ ಕೊಟ್ಟಿದೆ. ರಮೇಶ್ ಅವರಿಗೆ ತುಂಬಾ ಪೆಷನ್ಸ್ ಇದೆ. ಈ ಕಥೆ ಓದುವಾಗ ತುಂಬಾ ಕುತೂಹಲ ಮುಡಿಸಿತು. ಇಲ್ಲಿ ನಾನು ಜನನಿ ಎಂಬ ಲಾಯರ್ ಪಾತ್ರ ಮಾಡಿದ್ದು, ಅದು ಸತ್ಯಕ್ಕೆ ಮತ್ತು ನ್ಯಾಯಕ್ಕೆ ಹೆಚ್ಚು ಮಹತ್ವ ಕೊಡುವ ಪಾತ್ರ’ ಎನ್ನುವರು.
ಅಂದಂಗೆ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ ಆಕಾಶ್ ಶ್ರೀವತ್ಸ. ಇವರು ಈ ಮೊದಲು ಬದ್ಮಾಶ್ ಸಿನಿಮಾ ನಿರ್ದೇಶನ ಮಾಡಿದ್ದು, ಸುಳ್ಳೇ ಸತ್ಯ ಶಾರ್ಟ್ ಫಿಲ್ಮ್ ಮಾಡಿ ಬಹುಮಾನ ಪಡೆದಿದ್ದಾರೆ. ಇವರು ಕೂಡ ರಮೇಶ್ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ರಮೇಶ್ ಅವರ ಈ 101ನೇ ಚಿತ್ರವನ್ನು ನಿರ್ದೇಶಕರು ಗುರು ಕಾಣಿಕೆಯಾಗಿ ಕೊಡುತ್ತಿದ್ದಾರೆ. ಶಿವಾಜಿ ದೈರ್ಯದ ಸಂಕೇತವಾದರೆ ಸುರತ್ಕಲ್ ಬುದ್ದಿವಂತಿಕೆಯ ಸಂಕೇತವಾಗಿರಲಿದೆ. ಈ ಚಿತ್ರಕ್ಕೆ ಆಕಾಶ್ ಶ್ರೀವತ್ಸ ಅಭಿಜಿತ್ ಜೊತೆಗೋಡಿ ಚಿತ್ರಕಥೆ ಬರೆದಿದ್ದಾರೆ. ಅಂಜನಾದ್ರಿ ಸಿನಿ ಕ್ರಿಯೇಶನ್ ಬ್ಯಾನರ್ ನಡಿ ರೇಖಾ ಕೆ.ಎನ್. ಹಾಗೂ ಅನುಪ್ ಗೌಡ ನಿರ್ಮಿಸಿರುವ ಈ ಚಿತ್ರಕ್ಕೆ ಗುರುಪ್ರಸಾದ್ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತ, ಶ್ರೀಕಾಂತ್ ಸಂಕಲನ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ.