ಜನರ ಕನಸು ಸಾಕಾರವಾಗುವ ದೇಶ ಕಟ್ಟೋಣ

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಕೋಟ್ಯಂತರ ಜನರು ತಮ್ಮ ಕನಸುಗಳಿಗೆ ಅಭಿವ್ಯಕ್ತಿ ಮತ್ತು ಸಾಕಾರವನ್ನು ಕಾಣುವಂತಹ ಒಗ್ಗಟ್ಟು, ಸದೃಢತೆ, ಸಮೃದ್ಧತೆ ಮತ್ತು ಶಾಂತಿಯುತ ದೇಶ ನಿರ್ಮಿಸಲು ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.

74ನೇ ಸ್ವಾತಂತ್ರ್ಯೋತ್ಸವದ ಹಿಂದಿನ ದಿನದ ಸಂದೇಶದಲ್ಲಿ ಅವರು, ಧೀರ ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ಹುತಾತ್ಮರನ್ನು ಸ್ಮರಿಸಿದರು.

ಈ ದೇಶಭಕ್ತರಿಗೆ ನಾವು ನೀಡುವ ಗೌರವವೆಂದರೆ ಅವರು ಬಯಸುವ ಭಾರತವನ್ನು ನಿರ್ಮಿಸುವುದು. ಈ ಸ್ವಾತಂತ್ರ್ಯ ದಿನದಂದು, ನಾವೆಲ್ಲರೂ ಕೋಟ್ಯಂತರ ಜನರು ತಮ್ಮ ಕನಸುಗಳಿಗೆ ಅಭಿವ್ಯಕ್ತಿ ಮತ್ತು ಸಾಕಾರವನ್ನು ಕಾಣುವಂತಹ ಒಗ್ಗಟ್ಟು, ಸದೃಢತೆ, ಸಮೃದ್ಧತೆ ಮತ್ತು ಶಾಂತಿಯುತ ದೇಶ ನಿರ್ಮಿಸಲು ಎಲ್ಲರೂ ಮುಂದಾಗುವ ಪಣ ತೊಡೋಣ ಎಂದು ಕರೆ ನೀಡಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter