ತನ್ನ ಹೊಲಕ್ಕೆ ತಾನೇ ಪ್ರಮಾಣಪತ್ರ ನೀಡುವ ರೈತ ಬೆಳೆ ಸಮೀಕ್ಷೆ ಆ್ಯಪ್ ಸದುಪಯೋಗಕ್ಕೆ ಮನವಿ

Share on facebook
Share on twitter
Share on linkedin
Share on whatsapp
Share on email

ತುಮಕೂರು: ರೈತರೇ ತಮ್ಮ ಜಮೀನಿನ ಸಮೀಕ್ಷೆ ನಡೆಸುವ ಮಹತ್ವಾಕಾಂಕ್ಷಿಯ ರೈತಬೆಳೆ ಸಮೀಕ್ಷೆ ಆ್ಯಪ್ ಕುರಿತು ಕೃಷಿ ಸಚಿವ ಬಿ.ಸಿ.ಪಾಟೀಲ್ ತುಮಕೂರಿನ ಕೊರಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಪ್ರಾತ್ಯಕ್ಷಿತೆ ನೀಡಿದರು.


ಈ ವೇಳೆ ಮಾತನಾಡಿದ ಬಿ.ಸಿ.ಪಾಟೀಲ್, ರೈತನಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ಬೆಳೆ ಸಮೀಕ್ಷೆ ಆಪ್‌ ರಚಿಸಲಾಗಿದೆ. ಸ್ವಾಭಿಮಾನಿ ರೈತ ತನ್ನ ಬೆಳೆ ಸಮೀಕ್ಷೆಯನ್ನು ತಾನೇ ನಡೆಸಿ ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಬಹುದಾದ ಮಹತ್ತರ ಯೋಜನೆಯಿದಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆ್ಯಪ್ ಡೌನ್ಲೋಡ್ ಮಾಡಿಕೊಂಡು ತಮ್ಮ ಬೆಳೆ ವಿವರ ದಾಖಲಿಸಬೇಕು ಎಂದು ಮನವಿ ಮಾಡಿದರು.
ಇದುವರೆಗೂ ಗ್ರಾಮದ ಪಿಆರ್‌ಒಗಳು ಬೆಳೆ ಸಮೀಕ್ಷೆ‌ ನಡೆಸುತ್ತಿದ್ದರು. ಕೆಲವೆಡೆ ಬೆಳೆ ಸಮೀಕ್ಷೆ ತಾಳೆಯಾಗದಿರುವುದು ಗಮನಕ್ಕೆ ಬಂದಿದೆ.

ಹೀಗಾಗಿ ಈ ಆ್ಯಪ್ ಜಾರಿಗೊಳಿಸಲಾಗಿದೆ. ರೈತರೇ ತಮ್ಮ ಬೆಳೆ ಸಮೀಕ್ಷೆ ನಡೆಸುವ ವಿವರ ದಾಖಲಿಸುವ ಇಂತಹ ಬೆಳೆ ಸಮೀಕ್ಷೆ ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಲೋಕಾರ್ಪಣೆಗೊಂಡಿದೆ. ಕೇಂದ್ರ ಸರ್ಕಾರ ರೈತ ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೇರೆ ರಾಜ್ಯಗಳಿಗೂ ಇದು ಜಾರಿಗೊಳಿಸಲು ಚಿಂತನೆ ನಡೆಸಿದೆ ಎಂದರು.


ನಿಗದಿತ ದಿನಾಂಕದೊಳಗೆ ಆ್ಯಪ್ ಡೌನ್‌ ಲೋಡ್ ಮಾಡಿಕೊಂಡು ವಿವರ ದಾಖಲಿಸಬೇಕು. ರೈತರೇ ಸ್ವತಃ ಬೆಳೆ ವಿವರ ದಾಖಲಿಸಿ ಫೋಟೋ ಅಪ್ಲೋಡ್ ಮಾಡಬೇಕು. ಯಾವುದೇ ಕಾರಣಕ್ಕೂ ಈ ಸದಾವಕಾಶದಿಂದ ರೈತರು ವಂಚಿತರಾಗಬಾರದು ಎಂದು ಬಿ.ಸಿ.ಪಾಟೀಲ್ ಹೇಳಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter