ಯುಪಿ, ಮದ್ಯಪ್ರದೇಶದಲ್ಲಿ ಪ್ರತ್ಯೇಕ ಅಪಘಾತ: 14 ಸಾವು

Share on facebook
Share on twitter
Share on linkedin
Share on whatsapp
Share on email

ನವದೆಹಲಿ : ಉತ್ತರ ಪ್ರದೆಶದಲ್ಲಿ ಮತ್ತು ಮದ್ಯಪ್ರದೇಶದಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಒಟ್ಟು 14 ಜನ ದುರ್ಣರಣಕ್ಕೀಡಾಗಿದ್ದಾರೆ.
ಮಹಾರಾಷ್ಟ್ರದಿಂದ ಉತ್ತರ ಪ್ರದೇಶಕ್ಕೆ ಟ್ರಕ್ ನಲ್ಲಿ ಪ್ರಯಾಣಿಸುತ್ತಿದ್ದ ಎಂಟು ವಲಸೆ ಕಾರ್ಮಿಕರು ರಸ್ತೆಯಲ್ಲಿ ಸಾವನ್ನಪ್ಪಿದ್ದು, 55 ಕಾರ್ಮಿಕರು ಗಾಯಗೊಂಡಿದ್ದಾರೆ.

ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದ ಕಂಟೇನರ್ ಟ್ರಕ್ ಮಧ್ಯಪ್ರದೇಶದ ಗುನಾದ ಕ್ಯಾಂಟ್ ಪ್ರದೇಶದಲ್ಲಿ ಬಸ್ಗೆ ಡಿಕ್ಕಿ ಹೊಡೆದಿದೆ. ವಲಸೆ ಕಾರ್ಮಿಕರ ತಂಡ ಮಹಾರಾಷ್ಟ್ರದಿಂದ ಉತ್ತರ ಪ್ರದೇಶಕ್ಕೆ ಪ್ರಯಾಣಿಸುತ್ತಿತ್ತು ಎನ್ನಲಾಗಿದೆ.

ಅಪಘಾತದಲ್ಲಿ 8 ಮಂದಿ ಮೃತಪಟ್ಟಿದ್ದುಇನ್ನು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಲಸೆ ಕಾರ್ಮಿಕ ಕುಟುಂಬಗಳು ತಡರಾತ್ರಿ ಬಸ್ಗೆ ಡಿಕ್ಕಿ ಹೊಡೆದ ಲಾರಿಯಲ್ಲಿ ಪ್ರಯಾಣಿಸುತ್ತಿದ್ದವು. ತಕ್ಷಣ ಕಂಟೇನರ್ ಟ್ರಕ್ ನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ರಾತ್ರಿ ಉತ್ತರ ಪ್ರದೇಶದ ಮುಜಫರ್ನಗರದಲ್ಲಿ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ, ಪಂಜಾಬ್ನಿಂದ ಬಿಹಾರಕ್ಕೆ ಹೋಗುತ್ತಿದ್ದ 6 ವಲಸೆ ಕಾರ್ಮಿಕರ ಗುಂಪಿನ ಮೇಲೆ ಬಸ್ ಹರಿದು ಆರು ಜನ ಸಾವನ್ನಪ್ಪಿದ್ದಾರೆ .

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *