ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಿ

Share on facebook
Share on twitter
Share on linkedin
Share on whatsapp
Share on email

ಬೆಳಗಾಯಿತು ವಾರ್ತೆ
ಬಳ್ಳಾರಿ: ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಘೋಷಿಸಬೇಕು ಹಾಗೂ ವೇತನದಲ್ಲಿ ಆಗುತ್ತಿರುವ ತಾರತಮ್ಯ ಹೋಗಲಾಡಿಸಿಬೇಕೆಂದು ಬಳ್ಳಾರಿ ಮತ್ತು ಹೊಸಪೇಟೆ ವಿಭಾಗದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಜ್ದೂರ್ ಸಂಘ (ರಿ)ವು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಸಾರಿಗೆ ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು 1,30,000 ಕಾರ್ಮಿಕರು ಹಗಲಿರುಳು ಶ್ರಮವಹಿಸಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಯಾವುದೇ ಸೌಲಭ್ಯವಿಲ್ಲದೆ ಸೇವಾವಧಿಯವರೆಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ನಂತರ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ವಂಚಿತರಾಗುತ್ತಿದ್ದಾರೆ.

ಈ ಸಂದರ್ಭದಲ್ಲಿ ಪಂಪಾರೆಡ್ಡಿ ಸಿರುಗುಪ್ಪ, ಶಿವಕುಮಾರ್ ಬಳ್ಳಾರಿ, ಭೀಮಲಿಂಗ, ದುರ್ಗಾ ಪ್ರಸಾದ್, ಸುರೇಶ್ ಬಜಂತ್ರಿ ಕುರುಗೋಡು, ವೆಂಕಟೇಶ್ ಬಳ್ಳಾರಿ, ಬಸವರಾಜ, ಉಮೇಶ್ ಕಲ್ಯಾಣ್, ಕೃಷ್ಣಮೂರ್ತಿ ಹೊಸಪೇಟೆ, ಪ್ರಕಾಶ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter