ರಾಜ್ಯಕ್ಕೆ ಮೋದಿಯಿಂದ ಮಲತಾಯಿ ಧೋರಣೆ : ಎಚ್.ಕೆ.ಪಾಟೀಲ್

Share on facebook
Share on twitter
Share on linkedin
Share on whatsapp
Share on email

ಹರಪನಹಳ್ಳಿ: ಮಹಾದಾಯಿ ಮತ್ತು ನೆರೆ ಪರಿಹಾರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಮೇಲೆ ಮಲತಾಯಿ ಧೋರಣೆ ಅನುಸರಿಸಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಆರೋಪಿಸಿದರು.

ಪಟ್ಟಣದ ಆಚಾರ್ಯ ಲೇಔಟ್ ನಲ್ಲಿರುವ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ್ ಅವರ ಮನೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೋದಿ ಅವರು ರಾಜ್ಯದಲ್ಲಿ ಸಂಭವಿಸಿದ ನೆರೆಗೆ ಅಲ್ಪಸ್ವಲ್ಪ ಪರಿಹಾರ ನೀಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆಯ ಸಂಧರ್ಭದಲ್ಲಿ ಮಹಾದಾಯಿ ಯೋಜನೆಯ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಭರವಸೆ ನೀಡಿ ಐದು ವರ್ಷ ಕಳೆದು ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದರು ಇದುವರೆಗೂ ಮಹದಾಯಿ ವಿಚಾರದ ಬಗ್ಗೆ ಪ್ರಸ್ತಾಪಿಸುತ್ತಿಲ್ಲ ಎಂದು ಕಿಡಿಕಾರಿದರು.

ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಜಿಲ್ಲಾ ಪಂ.ಸದಸ್ಯ ಹೆಚ್.ಬಿ.ಪರಶುರಾಮಪ್ಪ, ಪುರಸಭೆ ಸದಸ್ಯರಾದ ಜಾಕೀರ್ ಹುಸೇನ್ ಸರ್ಕಾವಾಸ್, ಲಾಟಿ ದಾದಾಪೀರ್, ಭರತೇಶ್ ಮುಖಂಡರಾದ ಶಶಿಧರ್ ಪೂಜಾರ್, ಪೋಮ್ಯಾನಾಯ್ಕ್, ಎಂ.ರಾಜಶೇಖರ್, ಚಂದ್ರಶೇಖರ್ ಭಟ್, ಪಿ.ಟಿ.ಭರತ್, ಅರುಣ್ ಪೂಜಾರ್, ಪಿ.ಶಿವಕುಮಾರ್ ನಾಯ್ಕ್, ಜಾವೀದ್, ಮಜೀದ್, ಎಸ್.ಕೆ.ಖಾಲೀದ್, ಗಿಡ್ಡಳ್ಳಿ ನಾಗರಾಜ್, ವಕೀಲ ನೀಲಗುಂದ ವಾಗೀಶ್, ಪಟ್ನಾಮದ ಪರಶುರಾಮ, ಮುತ್ತಿಗಿ ಜಂಬಣ್ಣ, ಪ್ರೇಮ್ ಕುಮಾರ್, ಹಾಲೇಶ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter