ಕೇಬಲ್ ಟಿವಿ ಶುಲ್ಕ ಪರಿಷ್ಕರಣೆ,130 ರೂಗೆ 200 ಚಾನಲ್ ಲಭ್ಯ

ಕೇಬಲ್ ಟಿವಿ ಶುಲ್ಕ ಪರಿಷ್ಕರಣೆ,130 ರೂಗೆ 200 ಚಾನಲ್ ಲಭ್ಯ

ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕೇಬಲ್ ಟಿವಿ ಶುಲ್ಕಪರಿಷ್ಕರಿಸಿದೆ.

ಹೊಸ ದರ ಆದೇಶದ ಅನ್ವಯ ಗ್ರಾಹಕರು 130 ರುಪಾಯಿಗೆ 200 ಚಾನಲ್ಗಳನ್ನು ವೀಕ್ಷಣೆ ಮಾಬಹುದಾಗಿದೆ .
ಈ ಪ್ಯಾಕೇಜ್ನಲ್ಲಿ ಕಡ್ಡಾಯವಾಗಿ ನೀಡಬೇಕಿರುವ ಪ್ರಸಾರ ಭಾರತಿ ಚಾನಲ್ಗಳನ್ನು ಹೊರಗಿಡಲಾಗಿದೆ.
ಈ ಮೊದಲು 130 ರೂಪಾಯಿಗೆ ನೂರು ಚಾನಲ್ಗಳ ಪ್ಯಾಕೇಜ್ ಮಾತ್ರ ನೀಡಲಾಗುತ್ತಿತ್ತು ಮತ್ತು ಪ್ರಸಾರ ಭಾರತಿ ಚಾನೆಲ್ಗಳು ಕಡ್ಡಾಯವಾಗಿತ್ತು.
ಕೇಬಲ್ ಪ್ರಸಾರಕರು ಯಾವುದೇ ಚಾನಲ್ಗಳಿಗೂ ಬೊಕ್ಕೆ ಮತ್ತು ಅ-ಲಾ-ಕಾರ್ಟ್ ದರಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ಹೇಳಿದ್ದಾರೆ. ಬೊಕ್ಕೆ ಚಾನಲ್ ದರವನ್ನು ಟ್ರಾಯ್ 19ರೂ.ರಿಂದ 12ಕ್ಕೆ ಪರಿಷ್ಕರಣೆ ಮಾಡಿದೆ ಎಂದು ಅವರು ಹೇಳಿದ್ದಾರೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.