ನ.16 ರಂದು ಜಾನಪದ ಸಂಭ್ರಮ, ಸನ್ಮಾನ ಕಾರ್ಯಕ್ರಮ

Share on facebook
Share on twitter
Share on linkedin
Share on whatsapp
Share on email

ಬೆಳಗಾಯಿತು ವಾರ್ತೆ

ಮಾನ್ವಿ, ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಜಾನಪದ ಪರಿಷತ್ತು ತಾಲೂಕ ಘಟಕದಿಂದ .16 ರಂದು ಶನಿವಾರ ಸಂಜೆ 5.ಗಂ.ಗೆ ರೈತ ಭವನದಲ್ಲಿ ಜಾನಪದ ಸಂಭ್ರಮ ಮತ್ತು ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಜಾಪ ತಾಲೂಕಾಧ್ಯಕ್ಷ ತಾಯಪ್ಪ ಬಿ.ಹೊಸೂರು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದಿನ ದಿನಮಾನಗಳಲ್ಲಿ ದೂರದರ್ಶನ, ಸಾಮಾಜಿಕ ಜಾಲತಾಣದ ಭರಾಟೆಯಲ್ಲಿ ಜನಪದ ಸಾಹಿತ್ಯ ಕಡೆಗಣನೆಯಾಗುವ ಪರಿಸ್ಥಿತಿ ಬಂದಿದೆ. ಮೂಲ ಸಾಹಿತ್ಯವಾದ ಜನಪದವನ್ನು ಉಳಿಸಿ ಬೆಳಸುವ ಉದ್ದೇಶದಿಂದ ಜಾನಪದ ಸಂಭ್ರಮ ಕಾರ್ಯಕ್ರಮಗಳನ್ನು ಪ್ರತಿವರ್ಷ ಏರ್ಪಡಿಸುತ್ತ ಬರಲಾಗುತ್ತಿದೆ ಎಂದರು.  

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕø ಕೊತ್ತಬಾಳ್ ಅರುಣೋದಯ ಕಲಾತಂಡದಿಂದ ವಿವಿಧ ಜಾನಪದ ಮತ್ತು ನೃತ್ಯಗಳು ಜರುಗಲಿವೆ. ತಾಲೂಕಿನಲ್ಲಿನ ವಿವಿಧ ಕ್ಷೇತ್ರಗಳಲ್ಲಿನ ಕಲಾವಿದರಿಗೆ ಸನ್ಮಾನ, ನಿವೃತ್ತರಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನ ಮಾಡÀಲಾಗುತ್ತದೆ ಎಂದರು.

ಉಪಸ್ಥಿತರಿರುವ ಮುಖಂಡರು

ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿ ಭೋಗಾವತಿ, ತಾ.ಪಂ.ಅಧ್ಯಕ್ಷ ಚನ್ನಬಸವ ಬೆಟ್ಟದೂರು, ಎಪಿಎಂಸಿ ಅಧ್ಯಕ್ಷ ನಾಗಪ್ಪ ಸಾಹುಕಾರ, ಪಿಕಾರ್ಡ ಬ್ಯಾಂಕಿನ ಅಧ್ಯಕ್ಷ ಶಿವಶಂಕರಗೌಡ, ಪುರಸಭೆ ಸದಸ್ಯ ರಾಜಾಮಹೇಂದ್ರನಾಯಕ, ನೌಕರರ ಸಂಘದ ಅಧ್ಯಕ್ಷ ಶ್ರೀಶೈಲಗೌಡ, ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಕುರ್ಡಿ, ಎಸ್.ಶರಣೇಗೌಡ, ಮಹಾದೇವಪ್ಪ, ಹೆಚ್.ಶರ್ಫುದ್ದೀನ್, ಮಧುಸೂದನ ಗುಪ್ತಾಜಿ, ಪತ್ರಕರ್ತರ ಸಂಘದ ಅಧ್ಯಕ್ಷ ಶರಣಬಸವ ನೀರಮಾನ್ವಿ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರು ಉಪಸ್ಥಿತರಿರವರು ಎಂದು ತಿಳಿಸಿದರು.

ಈ ವೇಳೆ ಕಜಾಪ ಗೌರವಾಧ್ಯಕ್ಷ ವೆಂಕಣ್ಣಯಾದವ, ಉಪಾಧ್ಯಕ್ಷ ಕೆ.ಈ.ನರಸಿಂಹ, ಕೋಶಾಧ್ಯಕ್ಷ  ಶ್ರೀಕಾಂತಪಾಟೀಲ್ ಗೂಳಿ, ಸದಸ್ಯರಾದ ಬಸವರಾಜ ಭೋಗಾವತಿ, ಲಕ್ಷ್ಮಣ್ ಜಾನೇಕಲ್ ಇದ್ದರು.

ಮುಖ್ಯ ಅತಿಥಿಗಳು

ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಶಾಸಕ ರಾಜಾವೆಂಕಟಪ್ಪನಾಯಕ ಉದ್ಘಾಟಿಸಲಿದ್ದಾರೆ. ವೇದಿಕೆ ಮೇಲೆ ಎಂಎಲ್‍ಸಿ ಎನ್.ಎಸ್.ಬೋಸರಾಜು, ಶಾಸಕ ಬಸನಗೌಡ ದದ್ದಲ್, ಮಾಜಿಶಾಸಕರಾದ ಹಂಪಯ್ಯನಾಯಕ, ಬಸನಗೌಡ ಬ್ಯಾಗವಾಟ್, ಗಂಗಾಧರನಾಯಕ, ಕಜಾಪ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ, ಜಿಲ್ಲಾಧ್ಯಕ್ಷ ಶರಣಪ್ಪ ಗೋನಾಳ, ಜಿಕಸಾಪ ಅಧ್ಯಕ್ಷ ಡಾ.ಬಸವ ಪ್ರಭು ಪಾಟೀಲ್ ಮುಖಂಡರು ಉಪಸ್ಥಿತರಿರವರು ಎಂದು ತಿಳಿಸಿದರು.

ಜಾನಪದ ಕಾರ್ಯಕ್ರಮಕ್ಕೆ ಕರೆ

ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಎಲ್ಲಾ ಕನ್ನಡಾಭಿಮಾನಿಗಳು, ಸಾಹಿತ್ಯಾಭಿಮಾನಿಗಳು, ಕಲಾವಿದರು, ವಿವಿಧ ಕನ್ನಡಪರ ಸಂಘಟನೆಕಾರರು, ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಾಯಪ್ಪ ಬಿ.ಹೊಸೂರು ಕರೆ ನೀಡಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter