ರೈತರು ಆತಂಕ ಪಡುವಂತ ಅಗತ್ಯವಿಲ್ಲ

Share on facebook
Share on twitter
Share on linkedin
Share on whatsapp
Share on email

•   110 ಕೋಟಿ ಅನುದಾನಕ್ಕೆ ಸಂಪುಟ ಒಪ್ಪಿಗೆ

•   110 ದಿನದ ಸಾಧನೆಗೆ 350 ಕೋಟಿ ಬಿಡುಗಡೆ

ಬೆಳಗಾಯಿತು ವಾರ್ತೆ

ದೇವದುರ್ಗ: ರಾಯಚೂರು, ಯಾದಗಿರ ಜಿಲ್ಲೆಯ ಎರಡನೇ ಬೆಳೆಗೆ ನೀರು ಹರಿಸಲು ಈಗಾಗಲೇ ಸಿಎಂ ಯಡಿಯೂರಪ್ಪ ಅವರ ಜತೆ ಚರ್ಚಿಸಲಾಗಿದೆ. ಹೀಗಾಗಿ ರೈತರು ಆತಂಕ ಪಡುವಂತ ಅಗತ್ಯವಿಲ್ಲ ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರಲ್ಲಿ ಮಂಗಳವಾರದಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನೀರಾವರಿ ಸಲಹ ಸಮಿತಿ ತುರ್ತ ಸಭೆ ಕರೆಯುವಂತೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಮಾಡಲಾಗಿದೆ.

ಎರಡ್ಮೂರು ದಿನಗಳಲ್ಲಿ ಅನುಮೋದನೆ ಸಿಗಲ್ಲಿದ್ದು, ಬಳಿಕ ಸಭೆ ಕರೆಯಲಾಗುತ್ತದೆ. ನಾರಾಯಣಪುರು ಬಲದಂಡೆ, ತುಂಗಭ್ರದ ಅಚ್ಚುಕಟ್ಟ ಪ್ರದೇಶದ ಎರಡನೇ ಬೆಳೆಗೆ ನೀರು ಹರಿಸಲಾಗುತ್ತದೆ. ಈಗಾಗಲೇ ಸರಕಾರ ಮಟ್ಟದಲ್ಲಿ ಈವಿಷಯ ಕುರಿತು ಚರ್ಚೆ ಮಾಡಲಾಗಿದೆ ಎಂದು ಹೇಳಿದರು.

ತಾಲೂಕಿನಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳು ಅಭಿವೃದ್ಧಿಗಾಗಿ 110 ಕೋಟಿ ರು. ಅನುದಾನ ಸಚಿವ ಸಂಪುಟ ಸಭೆ ಅನುಮೋದನೆ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು, ಗ್ರಾಮೀಣ ಪ್ರದೇಶದ ರಸ್ತೆಗಳು ಅಭಿವೃದ್ಧಿಗೆ ಪ್ರಮುಖ ಅದತ್ಯೆ ನೀಡಲಾಗಿದೆ ಎಂದು ಹೇಳಿದರು.

ನಾರಾಯಣಪುರ ಬಲದಂಡೆ ಕಾಲುವೆಗಳು ಅಧೋಕರಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಸ್ತೆ, ಕಾಲುವೆಗಳ ನವೀಕರಣ ಸೇರಿ ಇತರೆ ಅಭಿವೃದ್ಧಿಗಾಗಿ 2ಸಾವಿರ ಕೋಟಿ ಅನುದಾನ ನೀಡುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಮಾಡಲಾಗಿದೆ. ಶೇ.50ರಷ್ಟು ಕಾರ್ಯ ಮುಗಿದೆ ಎಂದರು.

 ಇದೇ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷ ಹನುಮಂತ ಕಟ್ಟಿಮನಿ, ಜಿ.ಪಂ. ಸದಸ್ಯ ವೀರಣ್ಣ ಪಾಣಿ, ಅಶೋಕ ಗಸ್ತಿ, ಕೆ.ಎಂ. ಪಾಟೀಲ್, ಪ್ರಕಾಶ ಪಾಟೀಲ್, ಜಂಬಣ್ಣ ನೀಲಗಲ್, ಪುರಸಭೆ ಸದಸ್ಯ ಭೀಮನಗೌಡ ಮೇಟಿ, ರಾಮಣ್ಣ ಕರಡಿಗುಡ್ಡ, ದೇವಿಂದ್ರಪ್ಪ ಸ್ವಾಸಿಗೇರಾ, ಬಸನಗೌಡ ವೆಂಕಟಾಪುರು, ಚಂದಪ್ಪ ಬುದ್ದಿನ್ನಿ, ಜಹೀರುಪಾಷ್ ಇಡುಪನೂರು ಸೇರಿ ಇತರುದ್ದರು.

ಎರಡನೇ ಬೆಳೆಗೆ ನೀರು ಹರಿಸಲಿದ್ದು, ರೈತರು ಆತಂಕ ಪಡುವಂತಿಲ್ಲ. ಜಿಲ್ಲೆಯ ಸಾಮಗ್ರ ಅಭಿವೃದ್ಧಿ ಬಿಜೆಪಿ ಸರಕಾರ ಬದ್ಧವಾಗಿದೆ. ಅರಕೇರಾ ನೂತನ ತಾಲೂಕ ಸರಕಾರದ ಮುಂದಿದೆ- ಕೆ.ಶಿವನಗೌಡ ನಾಯಕ ಶಾಸಕ

ನೂರು ದಿನದಲ್ಲಿ 350 ಕೋಟಿ ರೂ. ಅನುದಾನ ಮಂಜೂರಿ

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು 100 ದಿನಗಳು ಕಳೆದಿವೆ. ನೂರು ದಿನದಲ್ಲಿ ಮೊದಲನೇ ಹಂತವಾಗಿ 350 ಕೋಟಿ ರೂ. ಅನುದಾನ ಮಂಜೂರಿ ಮಾಡಲಾಗಿದೆ. ಯಾವ ಅಭಿವೃದ್ಧಿಗೆ ಎಷ್ಟು ಅನುದಾನ ಬಳಿಸಬೇಕು ಎನ್ನುವ ಚಿಂತನೆ ನಡೆದಿದೆ ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter