ನಾಗರೀಕರಿಗೆ ಬಂದೂಕು ತರಬೇತಿ

Share on facebook
Share on twitter
Share on linkedin
Share on whatsapp
Share on email

ಬಳ್ಳಾರಿ: ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ ನಾಗರೀಕರಿಗಾಗಿ, ನಾಗರೀಕ ಬಂದೂಕು ತರಬೇತಿಯನ್ನು ಹಮ್ಮಿಕೊಂಡಿದ್ದು, ಇದಕ್ಕಾಗಿ ನಾಗರೀಕರು ಅರ್ಜಿಗಳನ್ನು ತಮ್ಮ ಸಮೀಪದ ಪೊಲೀಸ್ ಠಾಣೆಯಲ್ಲಿ ನ.25 ರೊಳಗಾಗಿ ಅರ್ಜಿಯನ್ನು ಪಡೆದು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
21 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳಿಗೆ ಮಾತ್ರ ತರಬೇತಿ ನೀಡಲಾಗುವುದು.   ನಾಗರೀಕರು 3 ಪಾಸ್ ಪೋರ್ಟ ಅಳತೆಯ ಭಾವಚಿತ್ರಗಳನ್ನು, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಯನ್ನು ಅರ್ಜಿಯ ಜೊತೆಗೆ ನೀಡಬೇಕು.


ಭಾಗವಹಿಸುವ ನಾಗರೀಕರು ನಿಯಮಿತವಾಗಿ ತರಬೇತಿಗೆ ಹಾಜರಾಗುವುದು ಹಾಗೂ ಶಿಸ್ತುಪಾಲನೆಯನ್ನು ಮಾಡಬೇಕು. ತರಬೇತಿ ಅಭ್ಯರ್ಥಿಗಳು ಕಡ್ಡಾಯವಾಗಿ ಶೂಗಳನ್ನು ಧರಿಸತಕ್ಕದ್ದು, ತಂಗಿ, ಪಂಚೆ ಧರಿಸಲು ಅವಕಾಶ ಇರುವುದಿಲ್ಲ. ತರಬೇತಿ ಅಭ್ಯರ್ಥಿಗಳು ನಿಗಧಿತ ಅರ್ಜಿ ಶುಲ್ಕ ಮತ್ತು ಮದ್ದುಗುಂಡುಗಳ ಶುಲ್ಕವನ್ನು ಭರಿಸಬೇಕು. ತರಬೇತಿ ಅಭ್ಯರ್ಥಿಗಳು ದೃಷ್ಟಿದೋಷ ಹೊಂದಿರಬಾರದು ಹಾಗೂ ಮಾನಸಿಕ ಮತ್ತು ದೈಹಿಕವಾಗಿ ಯೋಗ್ಯರಾಗಿರಬೇಕು. ತರಬೇತಿ ಅಭ್ಯರ್ಥಿಗಳು ತರಬೇತಿ ವೇಳೆ ಸಣ್ಣ ನೋಟ್ ಪುಸ್ತಕ ಮತ್ತು ಪೆನ್ನು  ತರಬೇಕು. ತರಬೇತಿ ಕೊನೆಯಲ್ಲಿ ಪರೀಕ್ಷೆ ನಡೆಸಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ನೀಡಲಾಗುವುದು. ಶಿಬಿರಕ್ಕೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿರತಕ್ಕದ್ದು, ಹಾಗೂ ನಿಯತವಾಗಿ ಸ್ಯಾನಿಟೈಜರ್ ಬಳಕೆ ಮಾಡಬೇಕು.


ತರಬೇತಿಯನ್ನು ಡಿ.07 ರಿಂದ 13ರವರೆಗೆ ಬೆಳಗ್ಗೆ 6.30 ರಿಂಧ 8.30ರವರೆಗೆ ಜಿಲ್ಲಾ ಶಸ್ತç ಮೀಸಲು ಪಡೆ ಮೈದಾನದಲ್ಲಿ ತರಬೇತಿಯನ್ನು ನೀಡಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter