ಎಐಸಿಸಿ ವಕ್ತಾರ ಹುದ್ದೆಯಿಂದ ಖುಷ್ಬೂ ವಜಾ

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಎಐಸಿಸಿ ವಕ್ತಾರೆಯಾಗಿದ್ದ ಚಿತ್ರನಟಿ ಹಾಗೂ ಪಕ್ಷದ ನಾಯಕಿ ಖುಷ್ಬೂ ಅವರನ್ನು ಹುದ್ದೆಯಿಂದ ಕಾಂಗ್ರೆಸ್ ವಜಾಗೊಳಿಸಿದೆ. ಖುಷ್ಬೂ ಬಿಜೆಪಿ ಸೇರಬಹುದು ಎಂಬ ವರದಿಗಳ ಹಿನ್ನಲೆಯಲ್ಲಿ ಪಕ್ಷ ಈ ಕ್ರಮ ಕೈಗೊಂಡಿದೆ.
ಖುಷ್ಬೂ ಅವರನ್ನು ತಕ್ಷಣದಿಂದಲೇ ಜಾರಿಗೆಬರುವಂತೆ ಎಐಸಿಸಿ ವಕ್ತಾರ ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಎಐಸಿಸಿ ಸಂವಹನ ವಿಭಾಗದ ಕಾರ್ಯದರ್ಶಿ ಪ್ರಣಬ್ ಝಾ ಹೇಳಿಕೆಯಲ್ಲಿ ತಿಳಿಸಿದ್ದಾರೆ
ಸೋಮವಾರ ಖುಷ್ಬೂ ಬಿಜೆಪಿ ಸೇರುವ ಸಾಧ್ಯತೆಯ ಹಿನ್ನಲೆಯಲ್ಲಿ ತಮಿಳುನಾಡಿನಲ್ಲಿ ಅತ್ಯಂತ ಜನಪ್ರಿಯ ನಟಿ,ರಾಜಕಾರಣಿಯಾಗಿರುವ ಖುಷ್ಬೂ ಅವರ ವಿರುದ್ದ ಕಾಂಗ್ರೆಸ್ ಈ ಕ್ರಮ ಕೈಗೊಳ್ಳಲಾಗಿದೆ.
ಖುಷ್ಬೂ ಸಂದರ್ 2014ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter