ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಿಶೇಷ ಬಸ್ ವ್ಯವಸ್ಥೆ

Share on facebook
Share on twitter
Share on linkedin
Share on whatsapp
Share on email

ಬಳ್ಳಾರಿ: 2020ನೇ ಸಾಲಿನ ಓಇಇಖಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಬಳ್ಳಾರಿಯಿಂದ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಸೆ.12ರಂದು ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಈಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶಂಭೂಕಾರ್ ರಾಮರಾವ್ ಚಂದ್ರಶೇಖರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರು ಪರೀಕ್ಷಾ ಕೇಂದ್ರಕ್ಕೆ ಹೋಗುವ ಅಭ್ಯರ್ಥಿಗಳಿಗೆ ರಾತ್ರಿ 9.18ಕ್ಕೆ ಮತ್ತು 9.24ಕ್ಕೆ, ದಾವಣಗೆರೆ ಪರೀಕ್ಷಾ ಕೇಂದ್ರಕ್ಕೆ ರಾತ್ರಿ 10ಕ್ಕೆ ಮತ್ತು 11ಕ್ಕೆ, ಧಾರವಾಡ ಪರೀಕ್ಷಾ ಕೇಂದ್ರಕ್ಕೆ ರಾತ್ರಿ 9.30ಕ್ಕೆ ಮತ್ತು 10ಕ್ಕೆ, ಹುಬ್ಬಳ್ಳಿ ಪರೀಕ್ಷಾ ಕೇಂದ್ರಕ್ಕೆ 9.30ಕ್ಕೆ ಮತ್ತು 10ಕ್ಕೆ ಹಾಗೂ ಮೈಸೂರು ಪರೀಕ್ಷಾ ಕೇಂದ್ರಕ್ಕೆ ರಾತ್ರಿ 8.30ಕ್ಕೆ ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಅಭ್ಯರ್ಥಿಗಳು  www.KSRTC.in ಗೆ ಲಾಗ್-ಇನ್ ಆಗುವ ಮೂಲಕ ಆನ್ ಲೈನ್ ಮೂಲಕ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಬಳ್ಳಾರಿಯಿಂದ ಗೋವಾಕ್ಕೆ ಬಸ್ ಸಂಚಾರ ಪ್ರಾರಂಭ

ಕೋವಿಡ್-19 ಹರಡುವ ಹಿನ್ನಲೆಯಲ್ಲಿ ಈಕರಸಾ ಸಂಸ್ಥೆಯ ಬಳ್ಳಾರಿ ವಿಭಾಗದಿಂದ ಗೋವಾ ರಾಜ್ಯಕ್ಕೆ ಕಾರ್ಯಾಚರಣೆಗೊಳಿಸಲಾಗುತ್ತಿದ್ದ ಸಂಸ್ಥೆಯ ಬಸ್ಸುಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೇ ಕಾರ್ಯಾಚರಣೆಯನ್ನು ಬಳ್ಳಾರಿ-ಪಣಜಿ (ಗೋವಾ) ಮಾರ್ಗದಲ್ಲಿ ಅಂತರ್‍ರಾಜ್ಯ ಸಾರಿಗೆಯನ್ನು ಪ್ರಾರಂಭಿಸಲಾಗಿದೆ ಎಂದು ಈಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶಂಭೂಕಾರ್ ರಾಮರಾವ್ ಚಂದ್ರಶೇಖರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬಳ್ಳಾರಿ-ಪಣಜಿ ವಯಾ ಹೊಸಪೇಟೆ, ಹುಬ್ಬಳ್ಳಿ ಮಾರ್ಗವಾಗಿ ಹೊರಡುವ ಬಸ್‌ಗಳು ಬಳ್ಳಾರಿ ವಿಭಾಗದಿಂದ ಬಿಡುವ ವೇಳೆ ಸಂಜೆ 5.30ಕ್ಕೆ ಹಾಗೂ ರಾತ್ರಿ 9ಕ್ಕೆ ಹೊರಡಲಿದ್ದು, ಸಾರ್ವಜನಿಕರು  www.KSRTC.in  ಗೆ ಲಾಗ್-ಇನ್ ಆಗುವ ಮೂಲಕ ಆನ್ ಲೈನ್ ಮೂಲಕ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.*-*-**

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter