ಬಾವಿಯ ಬಂಡೆಗೆ ಬಿದ್ದು ಯುವಕ ಸಾವು

ಬಾವಿಯ ಬಂಡೆಗೆ ಬಿದ್ದು ಯುವಕ ಸಾವು


ಬೆಳಗಾಯಿತು ವಾರ್ತೆ
ಕೊಟ್ಟೂರು: ಮೊಹರಮ್ ಹಬ್ಬದ ಪ್ರಯುಕ್ತ ಪೀರಲ ದೇವರನ್ನು ನೀರಲ್ಲಿ ಹಾಕುವ ಸಂದರ್ಭದಲ್ಲಿ ಬಾವಿಯ ಬಂಡೆಗೆ ಬಿದ್ದು ಹನಸಿ ಗ್ರಾಮದ ಖಾಸಿಂ ಅಲಿ(29)ಮೃತಪಟ್ಟಿರುವ ಘಟನೆ ತಾಲ್ಲೂಕಿನ ಉಜ್ಜಿನಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.

ಮೊಹರಮ್ ಆಚರಣೆಯ ಕೊನೆಯ ದಿನವಾದ ಬುಧವಾರ ದೇವರನ್ನು ನೀರಲ್ಲಿ ಹಾಕಿ, ಈಜಲು ಬಾವಿಯಲ್ಲಿ ಜಿಗಿಯುವಾಗ ಬಾವಿಯ ಬಂಡೆಗೆ ಬಿದ್ದು, ಹಬ್ಬಕ್ಕೆಂದು ಸಂಬಂಧಿಕರ ಮನೆಗೆ ಬಂದಿದ್ದ ಖಾಸಿಂ ಅಲಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.

ಬಾವಿಗೆ ಬಿದ್ದವನನ್ನು ಜತೆ ಇದ್ದವರೂ ಹೊರ ತೆಗೆದಿದ್ದು ಬಲವಾದ ಹೊಡೆತ ಬಿದ್ದದರಿಂದ ನೀರಲ್ಲಿಯೇ ಮೃತ ಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.