ಡಿಜೆಹಳ್ಳಿ ಹಿಂಸಾಚಾರ: ಗೋಲಿಬಾರ್ ನಲ್ಲಿ ಮೂವರ ಸಾವು, 150 ಜನರ ಬಂಧನ

Share on facebook
Share on twitter
Share on linkedin
Share on whatsapp
Share on email

ಬೆಂಗಳೂರು: ಸಿಲಿಕಾನ್ ಸಿಟಿಯ ಕಾಡುಗೊಂಡನಹಳ್ಳಿ ಮತ್ತು ದೇವರ ಜೀವನಹಳ್ಳಿಯಲ್ಲಿ ನಡೆದ ದಾಂಧಲೆ, ಹಿಂಸಾಚಾರ ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್ ಘಟನೆಯಲ್ಲಿ ಮೂವರು ದುಷ್ಕರ್ಮಿಗಳು ಬಲಿಯಾಗಿದ್ದಾರೆ.


ಈ ನಡುವೆ ಅವಹೇಳನ ಪೋಸ್ಟ್ ಮಾಡಿದ ಶಾಸಕರ ಸಂಬಂಧಿ ಸೇರಿದಂತೆ ಸಮಾಜದ ಶಾಂತಿ ಕದಡಿದ ಆರೋಪದ ಮೇರೆಗೆ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಈವರೆಗೆ 150 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

ಪೊಲೀಸರ ಗುಂಡಿನ ಕಾರ್ಯಾಚರಣೆಯಲ್ಲಿ 10ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ನಂತರ ಭುಗಿಲೆದ್ದ ಹಿಂಸಾಚಾರ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದಾಗ ಮೂವರು ಬಲಿಯಾಗಿದ್ದು ಇತರೆ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಅಧಿಕೃತ ಮೂಲಗಳ ಪ್ರಕಾರ, ಮಂಗಳವಾರ ರಾತ್ರಿ ಸಮುದಾಯದ ಜನರ ಗುಂಪೊಂದು ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ಬಳಿ ಜಮಾಯಿಸಿ, ಅವಹೇಳ ಪೋಸ್ಟ್ ಹಾಕಿದ ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕರ ಸಂಬಂಧಿಯನ್ನು ಬಂಧಿಸುವಂತೆ ಒತ್ತಾಯಿಸಿ.ಶಾಸಕರು ಮನೆಯ ಸಮೀಪ ಕಲ್ಲು ತೂರಿ ಹತ್ತಿರದಲ್ಲಿದ್ದ ವಾಹನಗಳನ್ನು ಸುಟ್ಟುಹಾಕಿದರು, ಇದರ ನಂತರ ಆಕ್ರೋಶ ಭುಗಿಲೆದ್ದು ಹಿಂಸಾಚಾರ ಮತ್ತಷ್ಟು ಉಲ್ಬಣಗೊಂಡಿದೆ.


ಹಿಂಸಾತ್ಮಕ ಪ್ರತಿಭಟನೆಯನ್ನು ಹತ್ತಿಕ್ಕಲು ಮೊದಲು ಪೊಲೀಸರು ಅಶ್ರುವಾಯುಶೆಲ್ ಬಳಸಿದರು. ಇದಾದ ನಂತರ ಜನಸಮೂಹ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಿತು.


ಹಿರಿಯ ಪೊಲೀಸ್ ಅಧಿಕಾರಿಗಳು ಸಭಿಕರನ್ನು ಸಮಾಧಾನಪಡಿಸಲು ಸ್ಥಳಕ್ಕೆ ಧಾವಿಸಿ ಪ್ರಯತ್ನಿದರೂ ಪೊಲೀಸರ ಮೇಲೆ ಜನರ ಆಕ್ರೋಶ ಹೆಚ್ಚಾಗಿ ಪರಿಸ್ಥಿತಿ ಕೈ ಮೀರಿ ಪೊಲೀಸರು ಗುಂಡು ಹಾರಿಸಿದಾಗ ಮೂವರು ಪ್ರತಿಭಟನಾಕಾರರು ಬಲಿಯಾದರು. ಶಾಸಕರ ಸಂಬಂಧಿಕ ಹಾಗೂ ಸಮಾಜದ ಶಾಂತಿ ಕದಡಿದ ಆರೋಪದ ಮೇರೆಗೆ ಪೊಲೀಸರು ಘಟನೆಗೆ ಸಂಬಂಧಿಸಿದಂತೆ 150ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter