ನಮ್ಮ ಹಕ್ಕನ್ನು ಪಡೆಯಲು ನಾವೇ ಹೋರಾಡಬೇಕು

Share on facebook
Share on twitter
Share on linkedin
Share on whatsapp
Share on email

ಹರಪನಹಳ್ಳಿ: ವೀರಶೈವ ಪಂಚಮಸಾಲಿ ಲಿಂಗಾಯಿತ ಸಮುದಾಯಕ್ಕೆ 2ಎ ಮೀಸಲಾತಿ ಶೀಘ್ರದಲ್ಲಿ ಸಿಗುವ ವಿಶ್ವಾಸವಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯೊಂಜಯ ಸ್ವಾಮಿಗಳು ಹೇಳಿದರು.ಪಟ್ಟಣದ ಕಾಶಿ ಸಂಗಮೇಶ್ವರ ಬಡಾವಣೆಯ ಕಾಶಿ ಮಠದಲ್ಲಿ ಸಮಾಜದ ಮುಖಂಡರು ಆಯೋಜಿಸಿದ್ದ ಭಕ್ತಿ ಸಮಾರ್ಪಣ ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಪಂಚಮಸಾಲಿ ಸಮಾಜವು ರಾಜ್ಯದ ಉದ್ದಗಲಕ್ಕೂ ಹರಡಿದ್ದು,  ಸಮಾಜ ಕಟ್ಟುವಲ್ಲಿ ಹಿಂದುಳಿದಿದೆ. ಆದರೆ ಮೀಸಲಾತಿ ಪಡೆಯುವ ಸಲುವಾಗಿ ಗ್ರಾಮೀಣ ಮಟ್ಟದಿಂದ ರಾಜ್ಯದ ಮಟ್ಟದವರೆಗೆ ಸಮಾಜ ಸಂಘಟನೆಗೆ
ಒತ್ತು ನೀಡಿದ್ದು, ಹಿಂದಿನ ಸರ್ಕಾರಗಳಿಗೆ ಅನೇಕ ಬಾರಿ ಮನವಿ ನೀಡಿದರು ಯಾವ ಪ್ರಯೋಜನವಾಗಿಲ್ಲ ಎಂದರು.

ನಾವು ನಮ್ಮ ಹಕ್ಕನ್ನು ಪಡೆಯಲು ನಾವೇ ಹೋರಾಡಬೇಕು. ಸಮಾಜದಲ್ಲಿನ ಯುವಪೀಳಿಗೆಗೆ ಈ ಮೀಸಲಾತಿ ಅವಶ್ಯಕವಾಗಿದೆ. ಒಂದು ಸಲ ನಮಗೆ
ಮೀಸಲಾತಿ ದೊರಕಿದರೆ ಸಾಕು, ಸೂರ್ಯ ಚಂದ್ರ ಇರುವವರೆಗೂ ಮೀಸಲಾತಿ ಶಾಶ್ವತವಾಗಿರುತ್ತದೆ ಎಂದರು. ನವೆಂಬರ್ 28ರವರೆಗೆ ಕಾದು ನೋಡಿ ಮುಂದಿನ ತಿಂಗಳಲ್ಲಿ ಉಗ್ರವಾದ ಹೋರಾಟಕ್ಕೆ ಸಮುದಾಯ ಸಜ್ಜಾಗಬೇಕು ಎಂದು ಕರೆ ನೀಡಿದರು.

ಈ ವೇಳೆ ಪಂಚಮಸಾಲಿ ಸಮುದಾಯದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದ ಸುವರ್ಣ ಆರುಂಡಿ ನಾಗರಾಜ್ ಮತ್ತು ರಾಜ್ಯ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತ
ಹೆಚ್.ಮಲ್ಲಿಕಾರ್ಜುನ್‍ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ನಿವೃತ ನೌಕರ ಎ.ವೀರಣ್ಣ ಪರಮೇಶ್ವರಪ್ಪ, ಚಂದ್ರಶೇಖರ, ಕುಂಚೂರು ಕೊಟ್ರೇಶ್, ನಿವೃತ್ತ ಎಇಇ ರುದ್ರಪ್ಪ, ಪಂಪಣ್ಣ, ನಿವೃತ್ತ ಶಿಕ್ಷಕ ರುದ್ರಪ್ಪ, ಇಟಿಗಿ ಕೊಟ್ರೇಶ್, ಚನ್ನನಗೌಡ, ಬಸವರಾಜ ಅಡಿವಿಹಳ್ಳಿ, ಲೀಲಾ ನಿಂಗರಾಜ, ಮಂಜುನಾಥ, ಗಾಯಿತ್ರಿದೇವಿ, ಚನ್ನಪ್ಪ, ವೀರುಪಾಕ್ಷಪ್ಪ, ಸೇರಿದಂತೆ  ಇತರರು
ಇದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter