ಡಾ ಮನಮೋಹನ್‍ ಸಿಂಗ್ ಆರೋಗ್ಯ ಸ್ಥಿರ

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಏಮ್ಸ್ ನಲ್ಲಿ ದಾಖಲಾಗಿರುವ ಮಾಜಿ ಪ್ರಧಾನಿ ಡಾ ಮನಮೋಹನ್‍ ಸಿಂಗ್ ಅವರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯ ಹೃದಯ ಕೇಂದ್ರದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.

ಅನಾರೋಗ್ಯದಿಂದ ಭಾನುವಾರ ರಾತ್ರಿ ಡಾ ಸಿಂಗ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಜ್ವರಕ್ಕೆ ಇತರ ಕಾರಣಗಳು ಇಲ್ಲವೆಂದು ದೃಢಪಟ್ಟ ನಂತರ ಆರೋಗ್ಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಡಾ ಸಿಂಗ್‍ ಅವರಿಗೆ ಅತ್ಯುತ್ತಮ ಆರೈಕೆಯನ್ನು ಒದಗಿಸಲಾಗಿದೆ.

ಡಾ ನಿತೀಶ್ ನಾಯಕ್‍ ಅವರ ತಂಡ ಸಿಂಗ್ ಅವರ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿದೆ. ಈ ಮುನ್ನ ನಾಯಕ್‍ ಅವರು ಸಿಂಗ್ ಅವರ ಖಾಸಗಿ ವೈದ್ಯರಾಗಿದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *