ಸಾಧನೆ ಮಾಡಿರುವುದು ನಾವೆಲ್ಲ ಹೆಮ್ಮೆಪಡುವ ವಿಚಾರ

Share on facebook
Share on twitter
Share on linkedin
Share on whatsapp
Share on email


ಬೆಳಗಾಯಿತು ವಾರ್ತೆ
ಹರಪನಹಳ್ಳಿ:ತಾಲೂಕಿನಲ್ಲಿ ಕ್ರೀಡಾ ಶಾಲೆ ಮತ್ತು ಹಾಸ್ಟೆಲ್ ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಚರ್ಚಿಸುತ್ತೇನೆ ಎಂದುಶಾಸಕ ಜಿ. ಕರುಣಾಕರರೆಡ್ಡಿ ತಿಳಿಸಿದರು.


ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರೌಢ ಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು ನಮ್ಮ ತಾಲೂಕಿನಲ್ಲಿ ನೂರಾರು ಕ್ರೀಡಾಪಟುಗಳು ಕೊಕೊ, ಜೂಡೊ, ಹ್ಯಾಂಡ್‍ಬಾಲ್, ಕಬಡ್ಡಿ, ಯೋಗಾಸನಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವುದು ನಾವೆಲ್ಲ ಹೆಮ್ಮೆಪಡುವ ವಿಚಾರ ಎಂದರು.


ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಜಾವೇದ, ಬಸವರಾಜಯ್ಯ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕ ದೇವರಾಜನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣಮ್ಮ ಸಂತೋಷ್‍ಕುಮಾರ್, ಮತ್ತು ತಾಲೂಕಿನ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿದ್ದರು,

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter