‘ಪುನರ್ಜೀವ ಸಿಗಲಿದೆ’ ಭರತ್ ಬಾಲ ರಾಷ್ಟ್ರ ಮಟ್ಟದ ಕಿರು ಚಿತ್ರ

Share on facebook
Share on twitter
Share on linkedin
Share on whatsapp
Share on email

ಬೆಂಗಳೂರು: ಕಿರು ಚಿತ್ರ, ಸಾಕ್ಷ್ಯ ಚಿತ್ರ, ಕಮರ್ಷಿಯಲ್ಸ್, ಮ್ಯೂಜಿಕ್ ವಿಡಿಯೋಸ್, ಚಲನ ಚಿತ್ರಗಳ ನಿರ್ದೇಶಕ, ನಿರ್ಮಾಪಕರಾಗಿ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಭರತ್ ಬಾಲ ಈಗ ‘ಪುನರ್ಜೀವ ಸಿಗಲಿದೆ’ ಎಂಬ ಕಿರು ಚಿತ್ರವನ್ನು ನಿರ್ಮಿಸಿದ್ದಾರೆ.‘ವಂದೇ ಮಾತರಂ, ಜನ ಗಣ ಮನ, ಇಂಕ್ರೆಡಿಬಲ್ ಇಂಡಿಯ ಹಾಗೂ ಇನ್ನಿತರ ಕಥಾ ವಸ್ತು ಆಯ್ಕೆಯಲ್ಲಿ ಪರಿಣಿತಿ ಪಡೆದಿರುವ ಭರತ್ ಬಾಲ ನಿರ್ಮಿಸಿರುವ ‘ಪುನರ್ಜೀವ ಸಿಗಲಿದೆ’ 9 ವಾರಗಳಿಂದ ಕೋವಿಡ್ 19 ನಿಂದ ಕುಗ್ಗಿ ಹೋಗಿರುವ ಭಾರತೀಯರಿಗೆ ಒಂದು ಪೆÇ್ರೀತ್ಸಾಹದಾಯಕ ಕಿರು ಚಿತ್ರ. ಪ್ರತಿಯೊಬ್ಬರಿಗೆ ಜೀವನ ಮತ್ತೆ ಇದೆ ಕಂಗಾಲಾಗುವುದು ಬೇಡ ಎನ್ನುವುದು ಈ ಕಿರು ಚಿತ್ರದ ಸ್ಫೂರ್ತಿದಾಯಕ ಸಂದೇಶ.

ಕಳೆದ ಮಾರ್ಚ್ 24 ರಿಂದ ಭಾರತ ಅಲ್ಲದೆ ವಿಶ್ವ ಮಟ್ಟದ ಲಾಕ್ ಡೌನ್ ವೇಳೆ ಎಲ್ಲೆಡೆ ನಿರ್ಜನ, ಮುಚ್ಚಿದ ಅಂಗಡಿಗಳು, ಶಾಲೆ, ಕಾಲೇಜುಗಳು, ಆಫೀಸು, ಮಾಲ್ಸ್….ಹೀಗೆ ಅನೇಕ ಆನೆಪೇಕ್ಷಿತ ಸ್ಥಬ್ದತೆ ಕಂಡಿತು.ಭರತ್ ಬಾಲ ತಂಡ ಈ ಸಂದರ್ಭವನ್ನು ಸೆರೆ ಹಿಡಿದು ಶತಮಾನಗಳು ಕಳೆದರೂ ಈ ಘಳಿಗೆ ಮುಂದಿನ ಪೀಳಿಗೆಗೆ ತಿಳಿಯುವಂತೆ ಭಾರತದ 1.3 ಬಿಲಿಯನ್ ಜನರ ಬವಣೆಯನ್ನು ಹೇಳುವ ಉದ್ದೇಶದೊಂದಿಗೆ ಈ ಕಿರುಚಿತ್ರ ತಯಾರಿಸಿದ್ದಾರೆ.ಇದಕ್ಕಾಗಿ ಭರತ್ ಬಾಲ ಅವರ 117 ಜನರ ತಂಡ ಭಾರತ ಸರ್ಕಾರದ ಅನುಮತಿ ಪಡೆದು ದೇಶದ 14 ರಾಜ್ಯಗಳ ಮೂಲೆ ಮೂಲೆಗೆ 15 ಸದಸ್ಯರ ತಂಡವನ್ನು ಕಳುಹಿಸಿ ಚಿತ್ರೀಕರಣ ಮಾಡಿದೆ. ಈ ಭೂ ಮಂಡಲದಲ್ಲಿ ಘಟಿಸಿರುವ ವಿಚಾರವನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿಯಲು ಕಾಶ್ಮೀರದಿಂದ ಕನ್ಯಾಕುಮಾರಿ, ಗುಜರಾತ್ ನಿಂದ ಅಸ್ಸಾಮ್ ವರೆಗೂ ಭರತ್ ಬಾಲ ತಂಡ ಕ್ರಮಿಸಿದೆ.

ಮುಂಬೈ ಅಂತ ಮಹಾ ನಗರದಲ್ಲಿ ಮಾಸ್ಟೆರ್ ಕಂಟ್ರೋಲ್ ರೂಂ ಸ್ಥಾಪನೆ ಮಾಡಿ ಹಗಲಿರುಳು ಒಂದು ತಂಡ ಕ್ಯಾಮರಗಳಲ್ಲಿ ಸೆರೆ ಆದ ದೃಶ್ಯಗಳನ್ನು ವ್ಹಾಟ್ಸ್ ಅಪ್ ಅಥವಾ ವೀಡಿಯೋ ಕಾಲ್ ಮುಖಾಂತರ ರವಾನಿಸಿದೆ. ಈ ಸಂದರ್ಭದಲ್ಲಿ ಭರತ್ ಬಾಲ ತಂಡಕ್ಕೆ ತಂತ್ರಜ್ಞಾನದ ಉಪಯೋಗ ಸಹಾಯಕ್ಕೆ ಬಂದಿದೆ.ಪುನರ್ಜೀವ ಸಿಗಲಿದೆ (ವಿ ವಿಲ್ ರೈಸ್) ಒಂದು ಆಶಾದಾಯಕ ಪ್ರಯತ್ನ 4 ನಿಮಿಷದಲ್ಲಿ ಕಟ್ಟಿ ಕೊಡುವ ಕಿರು ಚಿತ್ರ. ಇಲ್ಲಿ ತಂಡ ಅನುಭವಿಸದ ಸಂದರ್ಭಗಳು ಅನೇಕ ಆದರೆ, ಮಾನವೀಯತೆಯ ಪ್ರದರ್ಶನ ಕ್ಯಾಮರದಲ್ಲಿ ತುಂಬಲಾಗಿದೆ. ಕೆಲವು ಬೆಕ್ಕಸ ಬೆರಗಾಗುವ ಕ್ಷಣಗಳು ಸಹ ಭರತ್ ಬಾಲ ತಂಡಕ್ಕೆ ಲಭ್ಯವಾಗಿದೆ.

ಎಂದಿಗೂ ಕಂಡು ಕೇಳರಿಯದ ಈ ಕೋವಿಡ್ 19 ನಿಂದ ಆಗಿರುವ ಅನಾಹುತ ಇಂದ ಭಾರತ ದೇಶದ ಉದ್ದಗಲಕ್ಕೂ ‘ಪುನರ್ಜೀವ ಸಿಗಲಿದೆ’ ಲಾಕ್ ಡೌನ್ ಸಮಯವನ್ನು ಮೆಟ್ಟಿ ನಿಂತ ಭಾರತೀಯರಿಗೆ ಬೆಳಕಿನ ಜ್ಯೋತಿ ಇನ್ನೂ ಆರಿಲ್ಲ ಎಂದು ಪೆÇ್ರೀತ್ಸಾಹ ಹೇಳುವುದು ಆಗಿದೆ.ಟೀಮ್ ವಚ್ರ್ಯುಯಲ್ ಭಾರತ್ ಸಂಸ್ಥೆಯ ನಿರ್ಮಾಣವಾಗಿರುವ ‘ಪುನರ್ಜೀವ ಸಿಗಲಿದೆ’ ನಾಳೆ ಜೂನ್ 6 ರಿಂದ 13 ಜೂನ್ 2020 ವರೆಗೂ ಎಲ್ಲ ಡಿಜಿಟಲ್ ವ್ಯವಸ್ಥೆಗಳಲ್ಲಿ ಲಭ್ಯವಿರಲಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter