ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ’ ಶಾರ್ದೂಲ’

Share on facebook
Share on twitter
Share on linkedin
Share on whatsapp
Share on email

ಬೆಂಗಳೂರು: ಭೈರವ ಸಿನಿಮಾಸ್ ಲಾಂಛನದಲ್ಲಿ ಕಲ್ಯಾಣ್ ಸಿ ಹಾಗೂ ರೋಹಿತ್ ಎಸ್‍ಅವರು ನಿರ್ಮಿಸಿರುವ ಶಾರ್ದೂಲ ಚಿತ್ರ ಸದ್ಯದಲ್ಲೇ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಕೊರೋನಾ ಹಾವಳಿಯಿಂದ ಸಿನಿಮಾ ಬಿಡುಗಡೆ ವಿಳಂಬವಾಗಿದ್ದು, ಅನುಮತಿ ದೊರಕಿದ ಕೂಡಲೆ ಚಿತ್ರವನ್ನು ತೆರೆಗ ತರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಕೂಡ ವಿಭಿನ್ನವಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.‘ನಮ್ ಏರಿಯಾಲೊಂದು ದಿನ’, ತುಘಲಕ್ ಹಾಗೂ ಹುಲಿರಾಯ ಚಿತ್ರಗಳನ್ನು ನಿರ್ದೇಶಿಸಿರುವ ಅರವಿಂದ್ ಕೌಶಿಕ್ ಈ ಚಿತ್ರದ ನಿರ್ದೇಶಕರು. ಇವರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.. ದೆವ್ವ ಇರಬಹುದ್ದಾ? ಎಂಬ ಅಡಿಬರಹ ಈ ಚಿತ್ರಕ್ಕಿದೆ.ವೈ.ಜಿ.ಆರ್ ಮನು ಛಾಯಾಗ್ರಹಣ, ಸತೀಶ್ ಬಾಬು ಸಂಗೀತ ನಿರ್ದೇಶನ, ಶಿವರಾಜ್ ಮೇಹು ಸಂಕಲನ ಹಾಗು ಮಾಸ್ ಮಾದ, ಅಲ್ಟಿಮೇಟ್ ಶಿವ ಅವರ ಸಾಹಸ ನಿರ್ದೇಶನವಿದೆ.

ಪಿ.ಯು.ಸಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಚೇತನ್ ಚಂದ್ರ, ನಿರ್ದೇಶಕ, ನಟ ರವಿತೇಜ, ಕೃತಿಕ ರವೀಂದ್ರ, ಐಶ್ವರ್ಯ ಪ್ರಸಾದ್, ಕಲ್ಯಾಣ್, ಹೃಷಿಕೇಶ್, ಮಹೇಶ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅಮೆಜಾನ್ ಮತ್ತು ನೆಟ್ ಫ್ಲಿಕ್ಸ್ ಸಂಸ್ಥೆ ಗಳಿಗೂ ಚಿತ್ರವನ್ನು ಕಳುಹಿಸಿಕೊಡಲಾಗಿದ್ದು, ಆ ಮಾಧ್ಯಮದಲ್ಲೂ ನಮ್ಮ ಚಿತ್ರ ವೀಕ್ಷಣೆಗೆ ಅನುಮತಿ ದೊರಕುವ ನಿರೀಕ್ಷೆಯಿದೆ ಎನ್ನುತ್ತಾರೆ ನಿರ್ಮಾಪಕರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter