ಚಿತ್ರಮಂದಿರಗಳ ನೌಕರರಿಗೆ ‘ಸಲಗ’ ತಂಡದಿಂದ ಪಡಿತರ ವಿತರಣೆ

Share on facebook
Share on twitter
Share on linkedin
Share on whatsapp
Share on email

ಬೆಂಗಳೂರು: ಕೊರೋನಾ ಲಾಕ್ ಡೌನ್ ಕಾರಣ ಚಿತ್ರಮಂದಿರಗಳು ಸ್ಥಗಿತಗೊಂಡಿವೆ. ಕೆಲಸ ಹಾಗೂ ವೇತನವಿಲ್ಲದೆ ನೌಕರರು ಕಂಗಾಲಾಗಿದ್ದಾರೆ.ಈ ಸಂದರ್ಭದಲ್ಲಿ ನಟ ದುನಿಯಾ ವಿಜಯ್ ನಾಯಕ ನಟರಾಗಿರುವ ‘ಸಲಗ’ ಚಿತ್ರ ತಂಡ ಬೆಂಗಳೂರಿನ ಚಿತ್ರಮಂದಿರಗಳ ನೌಕರರಿಗೆ ಆಹಾರ ಸಾಮಗ್ರಿ ವಿತರಿಸಿ ಸಹಕರಿಸಿದೆ.

ಇಂದು ಬೆಳಗ್ಗೆ 12 ಗಂಟೆಗೆ ನಗರದ ಕೆಂಪೇಗೌಡ ರಸ್ತೆಯ ಸಂತೋμï ಚಿತ್ರಮಂದಿರದ ಎದುರು ಡಾ. ರಾಜ್ ಕುಮಾರ್ ಪ್ರತಿಮೆಯ ಬಳಿ ಪಡಿತರ ವಿತರಿಸಲಾಗಿದೆ.ಏತನ್ಮಧ್ಯೆ ಸಲಗ ಚಿತ್ರತಂಡವು ಕೊರೋನಾ ಸಂಕಷ್ಟಕ್ಕೆ ಸಿಲುಕಿರುವ ರಾಜಾಜಿನಗರದ ರಾಮಮಂದಿರದ 3 ಮತ್ತು 4ನೇ ವಿಬಾಗದ ನಾಗರಿಕರಿಗೂ ಆಹಾರ ಸಾಮಗ್ರಿ ವಿತರಿಸಲಿದ್ದು, ಪ್ರಾಥಮಿಕ ಹಾಗೂ ಪೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ನಟ ದುನಿಯಾ ವಿಜಿ ಹಾಗೂ ಸಮಾಜ ಸೇವಕ ಎಚ್. ಕೃ಼ಷ್ಣ ಪಾಲ್ಗೊಳ್ಳಲಿದ್ದಾರೆ ಎಂದು ‘ಸಲಗ’ ಚಿತ್ರತಂಡ ತಿಳಿಸಿದೆ. ‘ಸಲಗ’ ಚಿತ್ರವನ್ನು ಶ್ರೀಕಾಂತ್ ನಿರ್ಮಿಸಿದ್ದು, ದುನಿಯ್ ವಿಜಯ್ ನಿರ್ದೇಶಿಸಿ ಅಭಿನಯಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter