ಇಸ್ರೋ ಸಂವಹನ ಉಪಗ್ರಹ ಜಿಎಸ್ಎಟಿ -30 : ಜ 17 ರಂದು ಕೌರೌ ಸ್ಪೇಸ್‌ನಿಂದ ಉಡಾವಣೆ

ಇಸ್ರೋ ಸಂವಹನ ಉಪಗ್ರಹ ಜಿಎಸ್ಎಟಿ -30 : ಜ 17 ರಂದು ಕೌರೌ ಸ್ಪೇಸ್‌ನಿಂದ ಉಡಾವಣೆ

ಚೆನ್ನೈ : ಭಾರತೀಯ ಬಾಹ್ಯಾಕಾಶ ಕೇಂದ್ರ ಇಸ್ರೋ ಅಭಿವೃದ್ಧಿಪಡಿಸಿರುವ ಜಿಎಸ್ಎಟಿ -30 ಇದೇ 17ರಂದು ಫ್ರೆಂಚ್ ಗಯಾನಾದ ಕೌರೌ ಬಾಹ್ಯಕಾಶ ಉಡಾವಣಾ ಕೇಂದ್ರದಿಂದ ನಭಕ್ಕೆ ಚಿಮ್ಮಲಿದೆ ಎಂದು ಅರಿಯೇನ್ ಸ್ಪೇಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಇದು 2020ನೇ ಹೊಸ ವರ್ಷದಲ್ಲಿ ಉಡಾವಣೆಯಾಗಲಿರುವ ಭಾರತದ ಮೊದಲ ಉಪಗ್ರಹವಾಗಿದೆ.
ಜನವರಿ 17 ರಂದು ಭಾರತೀಯ ಕಾಲಮಾನದ ರೀತ್ಯಾ ಮುಂಜಾನೆ 0235 ಗಂಟೆ ಮತ್ತು 0430 ಗಂಟೆಗಳ ನಡುವೆ ಅರಿಯೇನ್ -5 ರಾಕೆಟ್‍ ಉಪಗ್ರಹವನ್ನು ಹೊತ್ತೊಯ್ಯಲಿದೆ.
ಜಿಎಸ್ಎಟಿ -30 ದೂರಸಂಪರ್ಕ ಉಪಗ್ರಹವಾಗಿದ್ದು ಇದನ್ನು ಇಸ್ರೋ ವಿಜ್ಞಾನಿಗಳು ವಿನ್ಯಾಸಗೊಳಿಸಿ ತಯಾರಿಸಿದ್ದಾರೆ.
ಅರಿಯೇನ ಬಾಹ್ಯಾಕಾಶ ಕೇಂದ್ರ ಸ್ಥಾಪನೆಯಾಗಿ 40 ವರ್ಷಗಳಾಗಿದ್ದು, ಅರಿಯೇನ್ 5 ಮಿಷನ್ ಸಂಸ್ಥೆಯ 107ನೇ ಕಾರ್ಯಾಚರಣೆಯಾಗಿದೆ.
ಅಂತಿಮ ಕೌಂಟ್ಡೌನ್ಗಾಗಿ ಕಾರ್ಯಾಚರಣೆಗಳ ಪ್ರಾರಂಭವನ್ನು ಅಧಿಕೃತಗೊಳಿಸಲು ಕೌರೌದಲ್ಲಿ ಇದೇ 14ರಂದು ಲಾಂಚ್ ರೆಡಿನೆಸ್ ರಿವ್ಯೂ (ಎಲ್ಆರ್ಆರ್) ನಡೆಯಲಿದೆ

ಜಿಎಸ್‍ಎಟಿ-30 ಉಪಗ್ರಹದಿಂದ ದೂರದರ್ಶನ, ದೂರಸಂಪರ್ಕ ಮತ್ತು ಪ್ರಸಾರ ಸೇವೆಗಳು ಮತ್ತಷ್ಟು ಉತ್ಕೃಷ್ಟಗೊಳ್ಳಲಿವೆ,

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.