ವಿರೋಧ ಪಕ್ಷಗಳ ಹುನ್ನಾರವೇ ಜನರಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿಯ ಗೊಂದಲ ಸೃಷ್ಟಿಗೆ ಕಾರಣ

ವಿರೋಧ ಪಕ್ಷಗಳ ಹುನ್ನಾರವೇ ಜನರಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿಯ ಗೊಂದಲ ಸೃಷ್ಟಿಗೆ ಕಾರಣ

ಹರಪನಹಳ್ಳಿ: ನಮ್ಮ ದೇಶದ ಯಾವುದೇ ಮುಸ್ಲಿಂ ಬಾಂಧವರು ಪೌರತ್ವ ಕಾಯ್ದೆ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ. ಈ ಎಲ್ಲಾ‌ ಗೊಂದಲಕ್ಕೆ ಮುಖ್ಯ ಕಾರಣ ಕಾಂಗ್ರೆಸ್ ಮತ್ತು ವಿರೋಧ ಪಕ್ಷದವರು. ಜನರಲ್ಲಿ ಇಲ್ಲ‌ಸಲ್ಲದ ಆತಂಕಕಾರಿ ವಿಷಯಗಳನ್ನು ಬಿತ್ತುವ ಮೂಲಕ ಬಿಜೆಪಿ ವಿರುದ್ಧ ಎತ್ತಿಕಟ್ಟುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಶಾಸಕ ಜಿ. ಕರುಣಾಕರರೆಡ್ಡಿ ಹೇಳಿದರು.

ಪಟ್ಟಣದ ಆಚಾರ್ಯ ಲೇಔಟ್ ನಲ್ಲಿರುವ ತಮ್ಮ ಬಿಜೆಪಿ ಕಛೇರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮಾತನಾಡಿ ಅವರು ನಮ್ಮ ದೇಶದಲ್ಲಿ ಹಿಂದೂಗಳು ಮುಸ್ಲಿಂಮರು ಸಹೋದರಂತೆ ಜೀವನ ನಡೆಸುತ್ತಿದ್ದಾರೆ. ವಿರೋಧ ಪಕ್ಷಗಳಿಗೆ ಬಿಜೆಪಿಯ ಬಗ್ಗೆ ಮಾತನಾಡಲು ಯಾವುದೇ ಅಸ್ತ್ರ‍ ಇಲ್ಲದ ಕಾರಣ ಈ ಪೌರತ್ವ ತಿದ್ದುಪಡಿ ಕಾಯ್ದೆಯ ವಿಷಯವನ್ನು ಮುಂದಿಟ್ಟುಕೊಂಡು ಜನರಲ್ಲಿ ಗೊಂದಲ ಸೃಷ್ಠಿದ್ದಾರೆ ಎಂದರು. ಬಳಿಕ ಮುಸ್ಲಿಂ ಬಾಂಧವರ ಮನೆಗಳಿಗೆ ಭೇಟಿ ನೀಡಿ ಅವರಿಗೆ ಪೌರತ್ವ ಕಾಯ್ದೆ ತಿದ್ದುಪಡಿಯ ಬಗ್ಗೆ ತಿಳಿ ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಸತ್ತೂರ್ ಹಾಲೇಶ್, ತಾ.ಪಂ.ಉಪಾಧ್ಯಕ್ಷ ಎಲ್.ಮಂಜ್ಯಾನಾಯ್ಕ್, ಪುರಸಭೆ ಸದಸ್ಯರಾದ ಹೆಚ್.ಎಂ.ಅಶೋಕ್, ದ್ಯಾಮಜ್ಜಿ ರೊಕ್ಕಪ್ಪ, ಕಿರಣ್ ಕುಮಾರ್, ಎಂ.ಕೆ.ಜಾವೀದ್, ಮುಖಂಡರಾದ ಎಂ.ಪಿ.ನಾಯ್ಕ್, ಬಾಗಳಿ ಕೊಟ್ರಶ್, ವಕೀಲ ಮೆಹಬೂಸಾಬ್, ನಿಟ್ಟೂರು ಸಣ್ಣ ಹಾಲಪ್ಪ, ವಕೀಲ ಕೆಂಗಳ್ಳಿ ಪ್ರಕಾಶ್, ಡಿಶ್ ವೆಂಕಟೇಶ್, ಚೌಡಾಪುರ ಷಣ್ಮುಖ ಹಾಗೂ ತಾಲೂಕಿನ ಬಿಜೆಪಿ ‌ಕಾರ್ಯಕರ್ತರು ಭಾಗವಹಿಸಿದ್ದರು

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.