ಇಂದಿನಿಂದ ವೈಭವದ ಹಂಪಿ ಉತ್ಸವ: ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ

ಇಂದಿನಿಂದ ವೈಭವದ ಹಂಪಿ ಉತ್ಸವ: ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ


ಬಳ್ಳಾರಿ : ಇಂದಿನಿಂದ ಎರಡು ದಿನ ಹಂಪಿ ಉತ್ಸವ ನಡೆಯಲಿದ್ದು, ಸಂಜೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ. ರವಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉತ್ಸವದ ಅಂಗವಾಗಿ ವಿಜಯನಗರ ಸಾಮ್ರಾಜ್ಯದ ಗತ ವೈಭವ ಬಿಂಬಿಸುವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಹೊಸಪೇಟೆ ನಗರದಲ್ಲಿ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆಯ ವಸಂತ ವೈಭವ ನಡೆಯಿತು. ಹೊಸಪೇಟೆ ನಗರದ ವಡಕರಾಯನ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಚಾಲನೆ ನೀಡಿದರು.

ವಿವಿಧ ಕಲಾ ಪ್ರಕಾರದ ಮೆರವಣಿಗೆಯು ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ನೆನೆಪಿಸಿದ್ದಲ್ಲದೇ, ಕರ್ನಾಟಕದ ಬಹುತೇಕ ಕಲಾ ಪ್ರಕಾರಗಳ ಪ್ರದರ್ಶನದ ಸೊಬಗನ್ನು ಹೊಸಪೇಟೆ ನಗರದ ಜನರಿಗೆ ಪರಿಚಯಿಸಿದಂತಿತ್ತು. ವಸಂತೋತ್ಸವ ವೈಭವದಲ್ಲಿ ಬಳ್ಳಾರಿ ಸಂಸದ ವೈ.ದೇವೆಂದ್ರಪ್ಪ ಕಲಾ ತಂಡಗಳೊಂದಿಗೆ ಹೆಜ್ಜೆಹಾಕಿ ನೆರೆದವರ ಗಮನ ಸೆಳೆದರು.

ತಳಿರು, ತೋರಣ, ರಂಗೋಲಿಗಳಿಂದ ಸಿಂಗರಿಸಿದ ರಸ್ತೆಯಲ್ಲಿ ಎತ್ತುಗಳು, ತಮಟೆ, ವೀರಗಾಸೆ, ಹಗಲು ವೇಷ, ಯಕ್ಷಗಾನ, ನವಿಲು ನೃತ್ಯ, ಡೊಳ್ಳು ಮೊದಲಾದ ಜನಪದ ಕಲಾ ತಂಡಗಳು, ಆಕರ್ಷಕವಾದ ಕೃತಕ ಕೋಣ ರಾಜರ ಕಾಲದ ಸೈನ್ಯದ ಸಮವಸ್ತ್ರ ಧರಸಿದ ವಿದ್ಯಾರ್ಥಿಗಳಿಂದ ಕೂಡಿದ ಮೆರವಣಿಗೆ ಸಾಗುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ಜನ ನಿಂತು ಮೆರವಣಿಗೆಯ ಸೊಬಗನ್ನು ಸವಿದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.