ಈ ವರ್ಷ ಐಪಿಎಲ್ ಟೂರ್ನಿ ನಡೆಯುವುದು

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ವಿಶ್ವದ ಐಶಾರಾಮಿ ಟಿ20 ಕ್ರಿಕೆಟ್ ಟೂರ್ನಿ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಈ ವರ್ಷ ನಡೆಯುವುದು ಅನುಮಾನ ಎಂದು ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅಭಿಪ್ರಾಯ ಪಟ್ಟಿದ್ದಾರೆ.

ಮಾರ್ಚ್ 29ಕ್ಕೆ ಶುರುವಾಗಬೇಕಿದ್ದ ಐಪಿಎಲ್ 2020 ಟೂರ್ನಿಯನ್ನು ಕೊರೊನಾ ವೈರಸ್ ಹರಡದಂತೆ ತಡೆಯುವ ಉದ್ದೇಶದಿಂದ ಮುಂದಿನ ಆದೇಶದವರೆಗೆ ರದ್ದು ಪಡಿಸಲಾಗಿದೆ. ಇನ್ನು ಅಕ್ಟೋಬರ್ ಮತ್ತು ನವೆಂಬರ್‍ನಲ್ಲಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಬೇಕಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ರದ್ದಾದರೆ ಆ ಅವಧಿಯಲ್ಲಿ ಐಪಿಎಲ್‍ನ 13ನೇ ಆವೃತ್ತಿ ಆಯೋಜಿಸುವ ಬಗ್ಗೆ ಆಲೋಚಿಸಲಾಗಿದೆ.

ಆದರೆ, ಎಲ್ಲದಕ್ಕೂ ಮೊದಲು ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಬರಬೇಕಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿರುವ ಬಿಸಿಸಿಐ ಸುರಕ್ಷಿತ ವಾತಾವರಣದಲ್ಲಿ ಮಾತ್ರವೇ ಐಪಿಎಲ್ ಟೂರ್ನಿಯನ್ನು ನಡೆಸುವುದಾಗಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತ್ತು.

ಕಳೆದ ವರ್ಷ ಡಿಸೆಂಬರ್‍ನಲ್ಲಿ ನಡೆದ ಐಪಿಎಲ್ 2020 ಟೂರ್ನಿಯ ಆಟಗಾರರ ಹರಾಜಿಗೂ ಮೊದಲೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬಲಗೈ ವೇಗಿ ಮೊಹಮ್ಮದ್ ಶಮಿ ಅವರನ್ನು 4.8 ಕೋಟಿ ರೂಗಳ ಭಾರಿ ಮೊತ್ತಕ್ಕೆ ತನ್ನಲ್ಲೇ ಉಳಿಸಿಕೊಂಡಿತ್ತು.

“ಇರ್ಫಾನ್ ಭಾಯ್ ಜೊತೆಗೂ ಈ ವರ್ಷ ಐಪಿಎಲ್ ನಡೆಯುವ ಸಾಧ್ಯತೆ ಬಗ್ಗೆ ಮಾತನಾಡಿದ್ದೆ. ಈ ವರ್ಷ ಐಪಿಎಲ್ ನಡೆಯುತ್ತದೆ ಎಂದು ನನಗನಿಸುತ್ತಿಲ್ಲ. ಟಿ20 ವಿಶ್ವಕಪ್ ಕೂಡ ಮುಂಊಡುವ ಸಾಧ್ಯತೆ ಇದೆ. ಎಲ್ಲವೂ ಸ್ಥಗಿತಗೊಂಡಿದೆ. ಎಲ್ಲದರ ವೇಳಾ ಪಟ್ಟಿ ಬದಲಾಯಿಸುವ ಅಗತ್ಯವಿದೆ. ಹೀಗಾಗಿ ಐಪಿಎಲ್ ಆಯೋಜನೆ ಸ್ಥಳವಕಾಶ ಸಿಗುವುದು ಅನುಮಾನ,” ಎಂದು ಕ್ರಿಕ್‍ಟಾಕ್ ಕಾರ್ಯಕ್ರಮದಲ್ಲಿ ಶಮಿ ಹೇಳಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *