ಮೆಂಟಲ್ ಕಂಡೀಷನಿಂಗ್ ಕೋಚ್ ತಂಡದಲ್ಲಿ ಸದಾ ಇರಬೇಕು: ಧೋನಿ

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಇತ್ತೀಚಿಗೆ ಬಹುತೇಕ ಆಟಗಾರರು ಮಾನಸಿಕ ಸ್ವಾಸ್ಥ್ಯದ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಹೀಗಾಗಿ ತಂಡದಲ್ಲಿ ಸದಾ ಮೆಂಟಲ್ ಕಂಡೀಷನಿಂಗ್ ಕೋಚ್ (ಮಾನಸಿಕ ಆರೋಗ್ಯ ಸುಧಾರಣೆ ಮಾರ್ಗದರ್ಶಕ) ಇರಲೇ ಬೇಕು ಎಂದು ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಹೇಳಿದ್ದಾರೆ.

“ಭಾರತದಲ್ಲಿ ಮಾನಸಿಕ ಸ್ವಾಸ್ಥ್ಯ ವಿಚಾರದಲ್ಲಿ ತೊಂದರೆ ಅನುಭವಿಸುತ್ತಿರುವುದನ್ನು ಆಟಗಾರರು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಯಾರೂ ಈ ಬಗ್ಗೆ ಮಾತನಾಡುವುದೂ ಇಲ್ಲ. ನಾನು ಬ್ಯಾಟ್ ಮಾಡಲು ಹೋದಾಗ ಮೊದಲ 5-10 ಎಸೆತಗಳನ್ನು ಎದುರಿಸಲು ಎದೆ ನಡುಗುತ್ತಿರುತ್ತದೆ. ಒತ್ತಡ ಆವರಿಸಿರುತ್ತದೆ. ಭಯ ಕಾಡುತ್ತಿರುತ್ತದೆ. ಇದು ಪ್ರತಿಯೊಬ್ಬರನ್ನೂ ಕಾಡುತ್ತದೆ ಕೂಡ,” ಎಂದು ಧೋನಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

“ಈ ಸಂಗತಿಯನ್ನು ಕೋಚ್ ಬಳಿ ಚರ್ಚಿಸಲು ಆಟಗಾರರು ಅಂಜುತ್ತಾರೆ. ಅದಕ್ಕಾಗಿಯೇ ಕೋಚ್ ಮತ್ತು ಆಟಗಾರರ ನಡುವೆ ಉತ್ತಮ ಬಾಂಧವ್ಯ ಇರಬೇಕು. ಮೆಂಟಲ್ ಕಂಡೀಷನಿಂಗ್ ಕೋಚ್ 15 ದಿನಗಳಿಗೊಮ್ಮೆ ತಂಡಕ್ಕೆ ಭೇಟಿ ನೀಡುವುದಲ್ಲ. 15 ದಿನಗಳಿಗೆ ಒಮ್ಮೆ ಬಂದರೆ ಕೇವಲ ಅನುಭವವನ್ನಷ್ಟೇ ಹಂಚಿಕೊಳ್ಳಲು ಸಾಧ್ಯ. ಹೀಗಾಗಿ ಆಟಗಾರರ ಜೊತೆಗೆ ಅವರು ಸದಾ ಇರಬೇಕು. ಈ ಮೂಲಕ ಎಲ್ಲಿ ಆಟಗಾರನಿಗೆ ಸಮಸ್ಯೆ ಎದುರಾಗುತ್ತಿದೆ ಎಂಬುದನ್ನು ಅವರು ತಿಳಿದು ಅದನ್ನು ಬಗೆಹರಿಸಲು ಸಾಧ್ಯವಾಗುತ್ತದೆ,” ಎಂದು ವಿವರಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *