ಮೇ ಅಂತ್ಯದಲ್ಲಿ ಪೂರ್ವಾಭ್ಯಾಸಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಸಜ್ಜು

Share on facebook
Share on twitter
Share on linkedin
Share on whatsapp
Share on email

ಮೆಲ್ಬೋರ್ನ್: ಕೊರೊನಾ ವೈರಸ್ ಪಿಡುಗಿನ ನಡುವೆಯೂ ಆಟಗಾರರ ಸುರಕ್ಷತೆಗಾಗಿ ರೂಪಿಸಲಾಗಿರುವ ನೂತನ ತರಬೇತಿ ಶಿಷ್ಟಾಚಾರ ನಿಯಮಾವಳಿಗಳ ಅಡಿಯಲ್ಲಿ ಮೇ ಅಂತ್ಯದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಪೂರ್ವಾಭ್ಯಾಸವನ್ನು ಆರಂಭಿಸಲು ಸಜ್ಜಾಗಿದೆ.

‘ ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ವರದಿ ಪ್ರಕಾರ, ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಮುಖ್ಯ ವೈದ್ಯಾಧಿಕಾರಿ ಡಾ. ಜಾನ್ ಆರ್ಚರ್ಡ್ ಮತ್ತು ಕ್ರೀಡಾ ವಿಜ್ಞಾನ ಮತ್ತು ಕ್ರೀಡಾ ಔಷಧ ವಿಭಾಗದ ಮುಖ್ಯಸ್ಥ ಅಲೆಕ್ಸ್ ಕೌಂಟೌರಿಸ್ ಅವರ ಕಣ್ಗಾವಲಿನಲ್ಲಿ ತರಬೇತಿಯನ್ನು ಪುನರಾರಂಭಿಸುವ ತಂತ್ರಗಳನ್ನು ಹೆಣೆಯುತ್ತಿದೆ.

ತರಬೇತಿ ವೇಳೆ ಚೆಂಡಿನ ಹೊಳಪಿಗಾಗಿ ಆಟಗಾರರು ಎಂಜಲು ಅಥವಾ ಬೆವರನ್ನು ಸವರುವುದನ್ನು ನಿಷೇಧಿಸುವುದು ಸೇರಿದಂತೆ ಆಟಗಾರರ ಪೂರ್ವಾಭ್ಯಾಸಕ್ಕೆ ಶಿಷ್ಟಾಚಾರಗಳ ನಿಯಮಾವಳಿಗಳನ್ನು ರೂಪಿಸುವುದು ಕ್ರಿಕೆಟ್ ಆಸ್ಟ್ರೇಲಿಯಾದ ತಕ್ಷಣದ ಆದ್ಯತೆಯಾಗಿದೆ ಎಂದು ವರದಿ ಹೇಳಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *