ಹರಪನಹಳ್ಳಿ ತಾಲೂಕನ್ನು ಜಿಲ್ಲೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು

ಹರಪನಹಳ್ಳಿ ತಾಲೂಕನ್ನು ಜಿಲ್ಲೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು


ಬೆಳಗಾಯಿತು ವಾರ್ತೆ
ಹರಪನಹಳ್ಳಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಪಕ್ಷದ ಮುಖಂಡರು ಹರಪನಹಳ್ಳಿ ಜಿಲ್ಲಾ ಹೋರಾಟಕ್ಕೆ ತಮ್ಮ ಬೆಂಬಲವನ್ನು ವ್ಯಕ್ತ ಪಡಿಸಿದರು.

ಜಿಲ್ಲೆ ಮಾಡಲು ಇರಬೇಕಾದ ಎಲ್ಲಾ ಅರ್ಹತೆಗಳು ಹರಪನಹಳ್ಳಿ ತಾಲೂಕಿಗೆ ಇರುವುದರಿಂದ ಹರಪನಹಳ್ಳಿಯನ್ನು ಜಿಲ್ಲೆ ಮಾಡಲು ಶಾಸಕ ಜಿ.ಕರುಣಾಕರರೆಡ್ಡಿ ಅವರು ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರ ಮಾದರಿಯಲ್ಲಿ ಹೋರಾಟಕ್ಕೆ ಧುಮುಕಬೇಕು. ಈ ಹಿಂದೆ ಹರಪನಹಳ್ಳಿ ತಾಲೂಕಿಗೆ 371ಜೆ ಸೌಲಭ್ಯ ಕಲ್ಪಿಸುವ ಸಲುವಾಗಿ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರ ುತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಿಸಿ ಸರ್ಕಾರದ ಮೇಲೆ ಒತ್ತಡ ತಂದ ಹಾಗೆ ಈಗ ಶಾಸಕ ಜಿ.ಕರುಣಾಕರರೆಡ್ಡಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಿಸಿ ಹರಪನಹಳ್ಳಿ ತಾಲೂಕನ್ನು ಜಿಲ್ಲೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದರು.

ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಭಟ್, ಅರಸೀಕೆರೆ ಬ್ಲಾಕ್ ಎಸ್.ಮಂಜುನಾಥ, ಚಿಗಟೇರಿ ಬ್ಲಾಕ್ ಅಧ್ಯಕ್ಷ ಬಿ. ಕೆ.ಪ್ರಕಾಶ್, ಜಿಲ್ಲಾ ಪಂಚಾಯತಿ ಸದಸ್ಯ ಹೆಚ್.ಬಿ.ಪರುಶುರಾಮಪ್ಪ, ಎಲ್.ಪೆÇೀಮ್ಯನಾಯ್ಕ್, ಶಶಿಧರ ಪೂಜಾರ್ ಮಾತನಾಡಿ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ನೂತನ ಜಿಲ್ಲೆ ರಚಿಸುವುದಾದರೆ ಪಶ್ಚಿಮ ತಾಲೂಕು ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ರಚಿಸಿ ಘೋಷಿಸಬೇಕು. ಯಾವುದೇ ಕಾರಣಕ್ಕೂ ಹೊಸಪೇಟೆ ಜಿಲ್ಲೆಯನ್ನಾಗಿ ಮಾಡಬಾರದು. ಭೌಗೋಳಿಕ, ಆಡಳಿತಾತ್ಮಕ, ಸಾಮಾಜಿಕ, ಶೈಕಣಿಕವಾಗಿ 4 ತಾಲೂಕುಗಳ ಜನರ ಸಾರಿಗೆ ಅನುಕೂಲಕ್ಕಾಗಿ ಹರಪನಹಳ್ಳಿ, ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ಒಳಗೊಂಡು ಹರಪನಹಳ್ಳಿ ಜಿಲ್ಲೆ ಮಾಡುವುದು ಸೂಕ್ತವಾಗಿದೆ ಎಂದರು.

ಈ ಸುದ್ದಿಗೋಷ್ಠಿಯಲ್ಲಿ ಅಜ್ಜನಗೌಡ, ಅಲ್ಪ ಸಂಖ್ಯಾತರ ಘಟಕದ ರಾಜ್ಯದ ಸಂಚಾಲಕರಾದ ನಜೀರ್ ಅಹ್ಮದ್, ಹೆಚ್.ಪರುಶುರಾಮ, ಅಲಗಿಲವಾಡ ವಿಶ್ವನಾಥ, ಪುರಸಭಾ ಸದಸ್ಯರಾದ ಎಸ್.ಜಾಕೀರ ಸರ್ಕಾವಸ್, ಜಿ.ಭರತೇಶ್, ಅರುಣ್ ಪೂಜಾರ್, ಪಿ.ಶಿವಕುಮಾರ್ ನಾಯ್ಕ್, ಪಿ.ಪರಶುರಾಮ, ಚಿರಸ್ತಹಳ್ಳಿ ಮರಿಯಪ್ಪ, ಬೇವಿನಹಳ್ಳಿ ಎಮ್.ಟಿ. ಬಸವನಗೌಡ, ಎಂ.ಕೆ.ರಾಯಲ್ ಸಿದ್ದೀಕ್, ಮುನಾವರ್ ಮತ್ತಿತರರು ಭಾಗವಹಿಸಿದ್ದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.