ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿ,ವಾಯು ಮಾಲಿನ್ಯ ನಿಯಂತ್ರಣಕ್ಕೆ ಸರ್ವ ಕ್ರಮ

ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿ,ವಾಯು ಮಾಲಿನ್ಯ ನಿಯಂತ್ರಣಕ್ಕೆ ಸರ್ವ ಕ್ರಮ


ಬೆಂಗಳೂರುಬೆಂಗಳೂರು ನಗರದಲ್ಲಿ ಮೂಲಸೌಕರ್ಯ ಸುಧಾರಣೆ ಮತ್ತು ಸಂಚಾರ ದಟ್ಟಣೆ ನಿವಾರಿಸಿ ವಾಯುಮಾಲಿನ್ಯ ತಗ್ಗಿಸುವ ಕುರಿತು ಮುಖ್ಯ ಮಂತ್ರಿ ಯಡಿಯೂರಪ್ಪ ,ನೇತೃತ್ವದಲ್ಲಿ ಸಚಿವರು,ಪರಿಣಿತರು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಲಾಯಿತು.

ಮುಖ್ಯಮಂತ್ರಿಯವರ ಗೃಹ ಕಛೇರಿ ಕೃಷ್ಣಾದಲ್ಲಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಮೊಬಿಲಿಟಿ ಮ್ಯಾನೆಜ್‌ಮೆಂಟ್ ಅಥಾರಿಟಿ (ಬಿಎಂಎಂಎ) ಸ್ಥಾಪಿಸಿ ಸಂಯೋಜಿತ ಸಂಚಾರ ನಿರ್ವಹಣೆ ಕೈಗೊಳ್ಳಲು ನಿರ್ಧರಿಸಲಾಗಿದೆ.ನಗರದ ಅತ್ಯಂತ ದಟ್ಟಣೆ ಯುಳ್ಳ 12 ಕಾರಿಡಾರ್ ‌ಗಳನ್ನು ಗುರುತಿಸಲಾಗಿದೆ.ಈ ರಸ್ತೆಗಳಲ್ಲಿ ಪ್ರತ್ಯೇಕ ಬಸ್ ಹಾಗೂ ಸೈಕಲ್ ಪಥಗಳನ್ನು ಸ್ಥಾಪಿಸಿ ಸಾರ್ವಜ ನಿಕ ಸಾರಿಗೆಗೆ ಒತ್ತು ನೀಡಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.(ಅತೀ ಹೆಚ್ಚು ವಾಹನ ಸಂಚಾರ ಇರುವ ಕೆ.ಆರ್. ಪುರ, ಹಳೆ ಮದ್ರಾಸ್ ರಸ್ತೆ, ವೈಟ್‌ಫೀಲ್ಡ್, ಎಲೆಕ್ಟಾನಿಕ್ ಸಿಟಿ, ಹೊಸೂರು ರಸ್ತೆ, ಮೈಸೂರು ರಸ್ತೆ, ಹೊರವರ್ತುಲ ರಸ್ತೆ)

ಪ್ರಸ್ತುತ ಬಿಎಂಟಿಸಿಯಲ್ಲಿ 6,500ಬಸ್‌ಗಳಿದ್ದು ಹೆಚ್ಚುವರಿಯಾಗಿ 6,000 ಬಸ್‌ಗಳನ್ನು ಸೇರ್ಪಡೆ ಮಾಡ ಲು ಯೋಜನೆ ರೂಪಿಸಲಾಗಿದೆ.ಹೊಸ ಬಸ್‌ಗಳನ್ನು ಕೊಳ್ಳುವ ಬದಲು ಒಪ್ಪಂದದ ಮೇರೆಗೆ ಬಸ್ ಉತ್ಪಾದಿಸುವ ಕಂಪನಿಗಳಿದ ನೇರವಾಗಿ ಬಾಡಿಗೆ ಆಧಾರದಲ್ಲಿ ಪಡೆಯಲು ನಿರ್ಧರಿಸಲಾಗಿದೆ. ಹೊಸ ಬಸ್‌ಗಳಲ್ಲಿ ಶೇಕಡಾ 50 ರಷ್ಟು ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲು ಕ್ರಮ ಜರುಗಿಸಿ,ಇವುಗಳನ್ನು ಪ್ರತ್ಯೇ ಕ ಲೇನ್‌ಗಳ ಸಂಚಾರಕ್ಕೆ ಒದಗಿಸಲು ಸಭೆ ತೀರ್ಮಾನಿಸಿದೆ.ಇದರಿಂದ ಶೇಕಡಾ 50ರಷ್ಟು ಮಾಲಿನ್ಯ ಪ್ರಮಾಣ ತಡೆಗಟ್ಟಬಹುದಾಗಿದೆ ಎಂದರು.

ಪ್ರಸ್ತುತ ಸಾರ್ವಜನಿಕ ಸಾರಿಗೆ ತುಟ್ಟಿಯಾಗಿದ್ದು,ಬಡವರು ಮತ್ತು ಮದ್ಯಮ ವರ್ಗದವರು ದ್ವಿಚಕ್ರ ವಾಹನ ಇತ್ಯಾದಿ ಖಾಸಗಿ ವಾಹನಗಳನ್ನು ಬಳಸಲು ಮುಂದಾಗುತ್ತಿದ್ದಾರೆ.ಆದ್ದರಿಂದ ಬಿಎಂಟಿಸಿ ನಷ್ಟ ವಾಗುತ್ತಿದ್ದು,ಅದಕ್ಕಾಗಿ ಬಿಎಂಟಿಸಿಗೆ ಸರ್ಕಾರದಿಂದ ಆರ್ಥಿಕ ನೆರವು ನೀಡಿ,ಬಸ್ ದರ ಇಳಿಸಿ ಈ ವರ್ಗ ದ ಪ್ರಯಾಣಿಕರು ಸಾರ್ವಜನಿಕ ಸಾರಿಗೆಯ ನ್ನು ಹೆಚ್ಚು ಬಳಸುವಂತೆ ಜಾಗೃತಿ ಮೂಡಿಸುವ ಯತ್ನ ನಡೆಸಲು ಸರ್ಕಾರ ನಿರ್ಧರಿಸಿದೆ.

ಮೆಟ್ರೋ 2ನೇ ಹಂತ 2021ರ ಅಕ್ಟೋಬರ್-ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವಂತೆ ಸೂಚನೆ ನೀಡ ಲಾಯಿತು.(ಒಟ್ಟು 119 ಕಿ.ಮೀ. ಪ್ರಸ್ತುತ ಮೊದಲನೇ ಹಂತ 42 ಕಿ.ಮೀ ಇದೆ)ಹೊರ ವರ್ತುಲ ರಸ್ತೆ-ಏರ್ ‌ಪೋರ್ಟ್ ಮಾರ್ಗದ ಮೆಟ್ರೋ ಯೋಜನೆಯನ್ನು 2023ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾ ಯಿತು.2025ರ ವೇಳೆಗೆ ಬೆಂಗಳೂರು ಮೆಟ್ರೋ ವಿಸ್ತೀರ್ಣವನ್ನು 300ಕಿ.ಮೀಗೆ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ.
ಮೆಟ್ರೋ 3ನೇ ಹಂತವನ್ನು ಹೊಸಕೋಟೆ ಕ್ರಾಸ್ ವರೆಗೆ ವಿಸ್ತರಿಸಲು(ವೈಟ್‌ಫೀಲ್ಡ್-ಸರ್ಜಾಪುರ ಮಾರ್ಗ ದಲ್ಲಿ)ನಿರ್ಧರಿಸಲಾಯಿತು 2022ರ ವೇಳೆಗೆ ಪೂರ್ವ ದಿಕ್ಕಿನ ವೈಟ್‌ಫೀಲ್ಡ್ / ಹೊರ ವರ್ತುಲ ರಸ್ತೆ / ಐಟಿಪಿ ಎಲ್ ಪ್ರದೇಶದ ಐಟಿ ಹಬ್ ಜೊತೆಗೆ ಪಶ್ಚಿಮದ ಯಶವಂತಪುರ / ಪೀಣ್ಯ ಕೈಗಾರಿಕಾ ಹಬ್‌ಗೆ ಸಂಯೋ ಜಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. 2022ರ ವೇಳೆಗೆ ಫೆರಿಫರಲ್ ರಿಂಗ್ ರಸ್ತೆ (ನಗರದ ಅಂಚಿನ ವರ್ತುಲ ರಸ್ತೆ)ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಯಿತು.

ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಗೆ ಬಳಸಿ ಖಾಸಗಿ ವಾಹನ ಗಳ ಓಡಾಟ ತಪ್ಪಿಸಿ ವಾಯು ಮಾಲಿನ್ಯ ನಿಯಂತ್ರಿಸಿ,ಬೆಂಗ ಳೂರು ನಗರದ ಹವಾಮಾನವನ್ನು ಹಿತಕರ ವಾತಾವರಣ ವುಳ್ಳ ನಗರವನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ.
ಬೆಂಗಳೂರು ನಗರದಲ್ಲಿ ಸಂಗ್ರಹವಾಗುವ ಕಸ ನಿರ್ವಹಣೆಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಕಡ್ಡಾಯ ವಾಗಿ ಅಳವಡಿ ಸಿಕೊಳ್ಳಲು ಸೂಚಿಸಲಾಯಿತು.ಕಸ ಸಾಗಾಣಿಕೆ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಉಪಕರಣ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಯಿತು.ಈ ವಾಹನಗಳಿಗೆ ಸೂಕ್ತ ರಕ್ಷಣೆ ಒದಗಿ ಸಲಾಗುವುದು.
ಘನತ್ಯಾಜ್ಯ ನಿರ್ವಹಣೆ ಕಾರ್ಯದ ಉಸ್ತುವಾರಿಗೆ 20 ಇಂಜಿನಿಯರ್‌ಗಳನ್ನು ತಕ್ಷಣವೇ ನೇಮಿಸಿಕೊಳ್ಳ ಲು ಬಿಬಿಎಂಪಿ ಆಯುಕ್ತರಿಗೆ ಮುಖ್ಯಮಂತ್ರಿ ಸೂಚಿಸಿದರು.ಘನ ತ್ಯಾಜ್ಯ ನಿರ್ವಹಣೆಗೆ ಹೆಚ್ಚುವರಿ ಪೌರ ಕಾರ್ಮಿಕರನ್ನು ಬಳಸಲು ಸೂಚಿಸಲಾಯಿತು.ವೈಜ್ಞಾನಿಕ ಸಂಸ್ಕರಣಾ ಘಟಕಗಳ ಸಂಖ್ಯೆಯನ್ನು ಹೆಚ್ಚಿಸಿ ಉತ್ತಮ ರೀತಿಯಲ್ಲಿ ಕಸ ವಿಲೇವಾರಿ ಮಾಡಲು ಕ್ರಮಕೈಗೊಳ್ಳಲಾಗುವುದು.ಪ್ರತಿ ದಿನ ಬೆಂಗ ಳೂರು ನಗರದಲ್ಲಿ ಸುಮಾರು 4,500 ಮೆಟ್ರಿಕ್ ಟನ್ ಕಸ್ ಉತ್ಪಾದನೆ ಯಾಗುತ್ತಿದ್ದು,ಪ್ರಸ್ತುತ 2,500 ಟನ್ ಮಾತ್ರ ಸಂಸ್ಕರಣೆಯಾಗುತ್ತಿದೆ.ಆದ್ದರಿಂದ ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಅಗತ್ಯವಾದ ಹೆಚ್ಚುವರಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ.
ಬೆಂಗಳೂರು ನಗರದಲ್ಲಿರುವ ಎಲ್ಲಾ ಕೆರೆಗಳ ನಿರ್ವಹಣೆಯನ್ನು ಬಿಬಿಎಂಪಿಗೆ ವಹಿಸಲು ನಿರ್ಧರಿಸಲಾ ಯಿತು.ಎಲ್ಲಾ ಕೆರೆಗಳ ಏರಿಗಳನ್ನು ಭದ್ರಪಡಿಸಿ,ವಾಕಿಂಗ್ ಪಾತ್ ನಿರ್ಮಿಸಿ ಸೌಂದರ್ಯವರ್ಧನೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.

ಕೆರೆ ಪ್ರದೇಶದಲ್ಲಿ ಬಡವರು ಮನೆಕಟ್ಟಿದ್ದರೆ ಅವುಗಳನ್ನು ಬಿಟ್ಟು ಶ್ರೀಮಂತರು ಮತ್ತು ಬಿಲ್ಡರ್‌ಗಳು ಒತ್ತುವರಿ ಮಾಡಿದ್ದರೆ ಅದನ್ನು ತೆರವುಗೊಳಿಸಲು ಸೂಚಿಸಲಾಯಿತು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.