ಚಮತ್ಕಾರ ರೀತಿಯಲ್ಲಿ ಆದಿತ್ಯ ಠಾಕ್ರೆ ಮುಖ್ಯಮಂತ್ರಿ …!!!

ಚಮತ್ಕಾರ ರೀತಿಯಲ್ಲಿ ಆದಿತ್ಯ ಠಾಕ್ರೆ ಮುಖ್ಯಮಂತ್ರಿ …!!!

ಮುಂಬೈ :ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಯಾರೂ ನಿರೀಕ್ಷೆ ಮಾಡದ ಚಮತ್ಕಾರ ನಡೆಯಲಿದ್ದು ಯುವ ನಾಯಕ ಆದಿತ್ಯ ಠಾಕ್ರೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಖಚಿತ ಎಂದು ಅವರ ಪರಮಾಪ್ತ ಗೆಳೆಯ ರಾಹುಲ್ ಎನ್ ಕನಾಲ್ ಹೇಳಿಕೊಂಡಿದ್ದಾರೆ.

ಹೊಸ ಸರ್ಕಾರ ರಚನೆ ಸಂಬಂಧ ಬಿಜೆಪಿ ಮತ್ತು ಶಿವಸೇನೆ ನಡುವೆ ಹಗ್ಗಜಗ್ಗಾಟ, ಕೊಸರಾಟ ಮುಂದುವರಿದಿದ್ದರೂ ಆದಿತ್ಯಾ ಠಾಕ್ರೆ ಮುಂದಿನ ಮುಖ್ಯಮಂತ್ರಿಯಾಗುವುದು ನಿಶ್ಚಿತವಾಗಿದ್ದು ರಾಜ್ಯ ರಾಜಕೀಯದಲ್ಲಿ ಚಮತ್ಕಾರ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

“ನಮ್ಮನ್ನು ಅಗಲಿ ಸ್ವರ್ಗದಲ್ಲಿರುವ ನಮ್ಮ ಮಾರ್ಗದರ್ಶಕರು ಆಶೀರ್ವಾದ ಮಾಡಲಿದ್ದು, ಅವರ ಆಸೆಯಂತೆ, ಠಾಕ್ರೆ ಕುಟುಂಬದ ಕುಡಿ ಆದಿತ್ಯ ಠಾಕ್ರೆ ಮುಖ್ಯಮಂತ್ರಿಯಾಗಿ ಮಹಾರಾಷ್ಟ್ರ ಜನರ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂಬ ಆಶಾಭಾವನೆಯನ್ನು ಕನಾಲ್ ವ್ಯಕ್ತಪಡಿಸಿದ್ದಾರೆ.

29 ವರ್ಷದ ಆದಿತ್ಯ ಠಾಕ್ರೆ ಮೊಟ್ಟ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ್ದು ಮುಂಬೈ ನ ವರ್ಲಿ ವಿಧಾನಸಭಾ ಕ್ಷೇತ್ರದಿಂದ 67 ಸಾವಿರ ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದ್ದರು.

ಫಲಿತಾಂಶ ಪ್ರಕಟವಾಗಿ ಒಂಭತ್ತು ದಿನ ಕಳೆದರೂ ಅಧಿಕಾರ ಹಂಚಿಕೆ ಕುರಿತು ಮಿತ್ರ ಪಕ್ಷಗಳ ನಡುವೆ ಸರ್ವ ಸಮ್ಮತ ಪರಿಹಾರ ರೂಪುಗೊಂಡಿಲ್ಲ. ಹಾಲಿ ವಿಧಾನಸಭೆಯ ಅವಧಿ ಬರುವ ಶನಿವಾರ ನ 9 ರಂದು ಮುಕ್ತಾಯವಾಗಲಿದ್ದು ಅಷ್ಟರೊಳಗೆ ಹೊಸ ಸರ್ಕಾರ ರಚನೆಯಾಗದಿದ್ದರೆ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗುವ ಸಾಧ್ಯತೆಯೂ ಗೋಚರಿಸಿದೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.