ಕೇಂದ್ರದ ಕ್ರಮ; ಇಳಿದ  ಈರುಳ್ಳಿ ಬೆಲೆ

ಕೇಂದ್ರದ ಕ್ರಮ; ಇಳಿದ ಈರುಳ್ಳಿ ಬೆಲೆ

ನವದೆಹಲಿ: ಕೇಂದ್ರ ಸರಕಾರ ತೆಗೆದುಕೊಂಡ ಹಲವು ಕಟ್ಟುಪಾಡುಗಳ ಪರಿಣಾಮ ದೆಹಲಿ ಮತ್ತು ದೇಶದ ಇತರೆ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಗಣನೀಯವಾಗಿ ಕಡಿಮೆಯಾಗಿದೆ.

ರಾಜ್ಯದಲ್ಲಿ ಈರುಳ್ಳಿ ಬೆಲೆ 35 ರಿಂದ 45 ರೂಪಾಯಿಗೆ ಕುಸಿದಿದೆ. ಒಂದು ಹಂತದಲ್ಲಿ ಕರ್ನಾಟಕದಲ್ಲಿ ಈರುಳ್ಳಿ ದರ 70 ರೂಪಾಯಿಗೆ ಏರಿಕೆಯಾಗಿತ್ತು.
ದೇಶದ ಹಲವೆಡೆ ಸೇಬು ಅಗ್ಗವಾಗಿತ್ತು. ಈರುಳ್ಳಿ ದರ ಹೆಚ್ಚಾಗಿತ್ತು. ಈರುಳ್ಳಿ ಕಾಪುದಾಸ್ತಾನುಗಾರರ ಮೇಲೆ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮ ಮತ್ತು ಹೊರದೇಶಗಳಿಗೆ ರಫ್ತುಮಾಡದಂತೆ ಹಾಕಿದ ಹಲವು ಬಿಗಿ ಕ್ರಮಗಳಿಂದ ದೆಹಲಿ ಮತ್ತು ಹೈದರಾಬಾದ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗಿದೆ.

ದೆಹಲಿಯಲ್ಲಿ ತಿಂಗಳ ಹಿಂದೆ ನೂರರ ಗಡಿದಾಟಿದ್ದ ಬೆಲೆ ಈಗ ಕೆಜಿಗೆ 55 ರಿಂದ 60 ರೂಪಾಯಿಗೆ ಇಳಿಕೆಯಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಹೈದರಾಬಾದಿನಲ್ಲೂ ಈರುಳ್ಳಿ ಬೆಲೆ ಕೆಜಿಗೆ ನೂರು ರೂಪಾಯಿಗೆ ಮುಟ್ಟಿತ್ತು. ಮಳೆ ಹಾಗೂ ಪ್ರವಾಹದ ಕಾರಣ ಅನೇಕ ರಾಜ್ಯಗಳಲ್ಲಿ ಬೆಳೆ ಸಹ ಭಾರಿ ಪ್ರಮಾಣದಲ್ಲಿ ಹಾಳಾಗಿ ಮಾರುಕಟ್ಟೆಗೆ ನಿಗದಿತ ಪ್ರಮಾಣದ ಈರುಳ್ಳಿ ಪುರೈಕೆಯಾಗದಿರುವುದು ಇಂದಿನ ಸ್ಥಿತಿಗೆ ಮುಖ್ಯ ಕಾರಣವಾಗಿದೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.