ಆಯುಧಪೂಜೆ : ದುಬಾರಿಯಾದರು ಖರೀದಿಜೋರು

Share on facebook
Share on twitter
Share on linkedin
Share on whatsapp
Share on email

 ಮರಿಯಮ್ಮನಹಳ್ಳಿ : ಪಟ್ಟಣ ಮತ್ತು ಹೋಬಳಿಯಾದ್ಯಂತ ವಿಜಯದಶಮಿಯ ನವಮಿಯಂದು ಆಯುಧಪೂಜೆ ಸೋಮವಾರ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡವರು ತಮ್ಮ ವಾಹನ , ಆಯುಧಗಳನ್ನು ಪೂಜಿಸುವುದು ಕಂಡುಬಂದಿತು . ಪಟ್ಟಣದ ಮುಖ್ಯಬೀದಿಯಲ್ಲಿ ಹೂ, ತಳಿರುತೋರಣ , ಬಾಳೆ ಕಂಬಗಳ ಮಾರಾಟ ಭರ್ಜರಿಯಾಗಿ ನಡೆಯಿತು . ದ್ವಿಚಕ್ರವಾಹನ , ಲಾರಿ ,ಮೆಷನರಿಯಂತ್ರ , ಟ್ರಾಕ್ಟರ್ ಸೇರಿದಂತೆ ಅನೇಕ ವೃತ್ತಿಪರರು ತಮ್ಮ ಪರಿಕರಗಳನ್ನು ಸ್ವಚ್ಚಗೊಳಿಸಿ , ತರೆವಾರಿ ಹೂವು ,ಬಲೂನು ಮತ್ತು ಅಲಂಕಾರಿಕ ವಸ್ತು ಗಳಿಂದ ಸಿಂಗರಿಸಿ ಪೂಜೆಸಲ್ಲಿಸಿದರು .

ಹೂವುಗಳ ಬೆಲೆ ಈಬಾರಿ ಗಗನಕ್ಜೇರಿದ್ದರೂ ಗ್ರಾಹಕರು ಮಾತ್ರ ಕೊಂಡೊಯ್ಯದೆ ಇರಲಿಲ್ಲ . ಕಳೆದಸಾಲಿಗೆ ಹೋಲಿಸಿದರೆ ಈಬಾರಿ ಹೂವುಗಳ ಬೆಲೆ ಸಾಕಷ್ಟು ಏರಿದೆ . ಹೂವುಗಳ ಇಳುವರಿಯಲ್ಲಿ ಕಡಿಮೆಯಾಗಿದ್ದು ,ಬೇಡಿಕೆಅಧಿಕವಾಗಿದೆ ಇದರಿಂದ ಬೆಳೆಗಾರರು ಹೂವಿನ ಬೆಲೆಯನ್ನು ಹೆಚ್ಚಿಸಿದ್ದಾರೆಂಬುದು ಮಾರಾಟಗಾರರ ಅನಿಸಿಕೆ .ಚೆಂಡುಹೂ , ಸೇವಂತಿಗೆ ಗೆ ಆಯುಧ ಪೂಜೆಯ ಅಲಂಕಾರಕ್ಕಾಗಿ ಬಹುವಾಗಿ ಬಳಸುವುದರಿಂದ ಅವುಗಳ ಬೆಲೆಏರಿಕೆಸಾಮಾನ್ಯ .ಈಬಾರಿ ಅತಿವೃಷ್ಟಿಯಿಂದ ಇಳುವರಿ ಕೂಡ ಕಡಿಮೆಯಾಗಿರುವುದು ಕೂಡ ಗ್ರಾಹಕರಿಗೆ ಹೊರೆಯಾಗಿದೆಯಾದರು ಖರೀದಿಸಲು ಹಿಂದೇಟು ಹಾಕದೆ  ಆಯುಧ ಪೂಜೆಯನ್ನು ಆಚರಿಸಿದರು .

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter